18 ರಂದು ಬಾಬು ಜಗಜೀವನರಾಂ ರವರ 118ನೇ ಜಯಂತ್ಯೋತ್ಸವ :..

18 ರಂದು ಬಾಬು ಜಗಜೀವನರಾಂ ರವರ 118ನೇ ಜಯಂತ್ಯೋತ್ಸವ :..

18 ರಂದು ಬಾಬು ಜಗಜೀವನರಾಂ ರವರ 118ನೇ ಜಯಂತ್ಯೋತ್ಸವ 

ಶಹಾಬಾದ : - ಡಾ. ಬಾಬು ಜಗಜೀವನರಾಂ ರವರ 118ನೇ ಜಯಂತ್ಯೋತ್ಸವ ವನ್ನು ಅದ್ದೂರಿಯಾಗಿ ಮೇ. 18 ರಂದು ಆಚರಿಸಲಾಗುವದು ಎಂದು ಬಾಬು ಜಗಜೀವನರಾಂ ಜಯಂತ್ಯೋತ್ಸವ ಸಮಿತಿಯ ತಾಲ್ಲೂಕ ಅಧ್ಯಕ್ಷ ಲಕ್ಷ್ಮೀಕಾಂತ ಬಳಿಚಕ್ರ ರವರು ತಿಳಿಸಿದರು. 

ಅವರು ತಾಲ್ಲೂಕ ಮಾದಿಗ ಸಮಾಜದ ವತಿಯಿಂದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಹೇಳಿದರು. ನಗರದ ಸರಕಾರಿ ಬಾಲಕರ ಪ್ರೌಢ ಶಾಲೆಯ ಆವರಣದಲ್ಲಿ ಬೆಳಗ್ಗೆ 10:30 ಕ್ಕೆ ಬಾರಿ ಬಹಿರಂಗ ಸಭೆ ನಡೆಯಲಿದೆ ಎಂದರು. 

ಅಂದು ಬೆಳಗ್ಗೆ 9 ಗಂಟೆಗೆ ಜಿಡಿಎ ಮಾಜಿ ನಿರ್ದೇಶಕ ಶ್ಯಾಮ ನಾಟೀಕಾರಧ್ವಜಾರೋಹಣ ನೇರವೇರಿಸುವರು, 

ಡಿಎಮಎಸಎಸ ನ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್ ರವರು ರಕ್ತದಾನ ಶಿಬಿರ ದ ಉದ್ಘಾಟನೆ ಮಾಡುವರು. 

ಭಾರಿ ಬಹಿರಂಗ ಸಭೆ ಯನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ರವರು ಉದ್ಘಾಟಿಸುವರು, ವಿಜಯಕುಮಾರ ಜಿ. ರಾಮಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವರು, 

ಮೈಸೂರಿನ ಸಾಮಾಜಿಕ ಚಿಂತಕ ಡಾ. ಆನಂದಕುಮಾರ ರವರು ವಿಶೇಷ ಉಪನ್ಯಾಸ ನೀಡುವರು. 

ಮುಖ್ಯ ಅತಿಥಿಗಳಾಗಿ ಶ್ರೀಮತಿ ಚಂದ್ರಿಕಾ ಪರಮೇಶ್ವರ, ಪ್ರೋ. ಬಾಲರಾಜ ಮಾಚನೂರ, ಎ. ಎಚ್ ನಾಗೇಶ, ರಾಜು ವಾಡೇಕರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. 

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಸನ್ಮಾನಿಸಲಾಗುವದು

ಸಾಯಂಕಾಲ 5 ಗಂಟೆಗೆ ಡಾ. ಬಾಬು ಜಗಜೀವನರಾಂ ವೃತ್ತ( ಬಸ್ ನಿಲ್ದಾಣ) ದಿಂದ ಡಾ. ಅಂಬೇಡ್ಕರ್ ಪ್ರತಿಮೆ ವರೆಗೆ ಭವ್ಯವಾದ ಸಾಂಸ್ಕೃತಿಕ ಮೆರವಣಿಗೆಯನ್ನು ನಗರ ಪೋಲಿಸ್ ಠಾಣೆಯ ಪಿಐ ನಟರಾಜ ಲಾಡೆ ಉದ್ಘಾಟಿಸುವರು ಎಂದು ವಿವರಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಜಯಂತ್ಯೋತ್ಸವ ಸಮಿತಿಯ ಗೌರವಾಧ್ಯಕ್ಷ ಶರಣು ಪಗಲಾಪುರ, ಮಾದಿಗ ಸಮಾಜದ ಅಧ್ಯಕ್ಷ ವಿಕ್ರಮ ಮೂಲಿಮನಿ, ಉಪಾಧ್ಯಕ್ಷರಾದ ಪ್ರಮೋದ ಮಲ್ಹಾರ, ಶಿವಕುಮಾರ ಮೇತ್ರಿ ಮತ್ತು ಮಲ್ಲೇಶಿ ಸೈದಾಪೂರ, ರವಿ ಬೆಳಮಗಿ, ಸಂತೋಷ ಕರಿಗುಡ್ಡ, ಮರಲಿಂಗ ಯಾದಗಿರಿ, ಅನಿಲ ಮೈನಾಳಕರ, ಶಿವನಾಗ ದುಪ್ಪಲ್ಲಿ, ನಾಗರಾಜ ಸಾಕ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ಕೋಟ/ಬಾಕ್ಸ ಮಾಡಿ :..

ಜಯಂತಿ ಅಂಗವಾಗಿ ಸಮಾಜದ ವತಿಯಿಂದ, ರಕ್ತದಾನ ಶಿಬಿರ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಸನ್ಮಾನ.