ವಚನಗಳ ರಕ್ಷಣೆಯಲ್ಲಿ ಚಂದಯ್ಯನ ಪಾತ್ರ ಮಹತ್ವದಾಗಿದೆ :..

ನೂಲಿ ಚಂದಯ್ಯನವರು ಜಯಂತಿ ಆಚರಣೆ
ವಚನಗಳ ರಕ್ಷಣೆಯಲ್ಲಿ ಚಂದಯ್ಯನ ಪಾತ್ರ ಮಹತ್ವದಾಗಿದೆ :..
ಶಹಾಬಾದ : - ನೂಲಿ ಚಂದಯ್ಯನವರು ಕಲ್ಯಾಣದಲ್ಲಿ ಮೆದು ಹುಲ್ಲಿನಿಂದ ಮಾಡಿದ ನುಲಿಯನ್ನು ಹೊಸೆದು ಹಗ್ಗದ ಕಣ್ಣಿ ಮಾಡಿ ಮಾರಿ ಬದುಕುವ ಕಾಯಕ ಜೀವಿಯಾಗಿದ್ದರು ಎಂದು ಗ್ರೇಡ 2 ತಹಶೀಲ್ದಾರ ಗುರುರಾಜ ಸಂಗಾವಿ ಅವರು ಹೇಳಿದರು.
ಅವರು ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ನಡೆದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ನೂಲಿ ಚಂದಯ್ಯನವರು ಬಸವಣ್ಣನ ಸಮಕಾಲೀನ ಶರಣರಾಗಿದ್ದರು,
12ನೇ ಶತಮಾನದಲ್ಲಿ ಕಲ್ಯಾಣದ ಹತ್ಯಾಕಾಂಡದ ನಂತರ ವಚನದ ಕಟ್ಟುಗಳ ರಕ್ಷಣೆಯಲ್ಲಿ ಚಂದಯ್ಯನ ಪಾತ್ರ ಇರುವುದು ಗಮನಾರ್ಹವಾಗಿದೆ ಎಂದರು.
ನೂಲಿ ಚಂದಯ್ಯ ನವರು ‘ಚಂದೇಶ್ವರ ಲಿಂಗ’ ಎನ್ನುವ ಅಂಕಿತದಲ್ಲಿ ರಚಿಸಿದ 49 ವಚನಗಳು ಲಭ್ಯವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಕಚೇರಿಯ ಸಿಬ್ಬಂದಿ ವರ್ಗದವರು ಹಾಗೂ ನೂಲಿ ಚಂದಯ್ಯನವರು ಸಮಾಜದ ಬಾಂಧವರು ಇದ್ದರು.
ಶಹಾಬಾದ ಸುದ್ದಿ : ನಾಗರಾಜ್ ದಂಡಾವತಿ