ಸಚಿವ ಡಾ. ಶರಣಪ್ರಕಾಶ ಪಾಟೀಲರ ಹುಟ್ಟು ಹಬ್ಬದ ನಿಮಿತ್ತವಾಗಿ ಅಭಿಮಾನಿಗಳಿಂದ ರಕ್ತದಾನ ಶಿಬಿರ

ಸಚಿವ ಡಾ. ಶರಣಪ್ರಕಾಶ ಪಾಟೀಲರ ಹುಟ್ಟು ಹಬ್ಬದ ನಿಮಿತ್ತವಾಗಿ ಅಭಿಮಾನಿಗಳಿಂದ ರಕ್ತದಾನ ಶಿಬಿರ 

ಚಿಂಚೋಳಿ : ಅವಳಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೇಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ರಾಯಚೂರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲರ 57ನೇ ವರ್ಷದ ಹುಟ್ಟು ಹಬ್ಬ ಆಚರಣೆ ಅಂಗವಾಗಿ ಚಿಂಚೋಳಿ ಬ್ಲಾಕ್ ಕಾಂಗ್ರೇಸ್ ಎಸ್ಸಿ ಎಸ್ಟಿ ಸೇಲ್ ನ ಅಧ್ಯಕ್ಷ ಸಂತೋಷ ಗುತ್ತೇದಾರ ಅವರ ನೇತೃತ್ವದ ಅಭಿಮಾನಿ ಬಳಗ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಯಿತು. 

ಶಿಬಿರದಲ್ಲಿ ಒಟ್ಟು 21 ಜನ ಭಾಗವಹಿಸಿ ರಕ್ತದಾನ ಮಾಡಿದರು. ಕಲಬುರಗಿ ಜೀಮ್ಸ್ ಆಸ್ಪತ್ರೇಯ ಡಾ. ಜೈಪ್ರಕಾಶ, ಮಲ್ಲಿಕಾರ್ಜುನ, ಯಲ್ಲಪ್ಪಾ ವಾರಿ ಹಾಗೂ ಬಸವರಾಜ ಒಳಗೊಂಡ ತಂಡ ಪಡೆದುಕೊಂಡ 21 ಜನರು ಮಾಡಿರುವ ರಕ್ತದಾನ ಸ್ವೀಕರಿಸಿ, ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ್, ತಾಲೂಕ ವೈದ್ಯಾಧಿಕಾರಿ ಡಾ. ಗಫಾರ್, ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ ಪಾಟೀಲ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಮಲಿ, ನಿಕಟ ಪೂರ್ವ ಅಧ್ಯಕ್ಷ ಅನಿಲಕುಮಾರ ಜಮಾದಾರ, ವಕ್ತಾರ ಶರಣು ಪಾಟೀಲ ಮೋತಕಪಳ್ಳಿ, ಅಬ್ದುಲ್ ಬಾಷಿದ್, ನಾಗೇಶ ಗುಣಾಜಿ, ವಿಶ್ವನಾಥ ಹೋಡೆಬೀರನಳ್ಳಿ, ಗಣಪತರಾವ, ಲಕ್ಷ್ಮಣ ಆವಂಟಿ, ರಾಮಶೆಟ್ಟಿ ಪವಾರ, ಜಗನ್ನಾಥ ಗುತ್ತೇದಾರ, ಕೆ.ಮಹೇಶ, ಮಹೇಶ ಗಣಾಪೂರ, ಅನೀಲ ಬಿರಾದಾರ, ಮಲ್ಲಿಕಾರ್ಜುನ ರಾಮತೀರ್ಥ, ಖಲೀಲ್ ಪಟೇಲ ಅವರು ಉಪಸ್ಥಿತರಿದರು.