ಜೇವರ್ಗಿಯಲ್ಲಿ ರೈತರಿಗೆ ಡಿಎಪಿ ಮತ್ತು ಯುರಿಯಾ ಗೊಬ್ಬರ ವಿತರಣಾ

ಜೇವರ್ಗಿಯಲ್ಲಿ ರೈತರಿಗೆ ಡಿಎಪಿ ಮತ್ತು ಯುರಿಯಾ ಗೊಬ್ಬರ ವಿತರಣಾ
ಜೇವರ್ಗಿ ಸುದ್ದಿ – ವರದಿ: ಜೇಟ್ಟೆಪ್ಪ ಎಸ್. ಪೂಜಾರಿ
ಜೇವರ್ಗಿ ಪಟ್ಟಣದ ಆಗ್ರೋ ಕೇಂದ್ರಗಳ ಮುಂದೆ ರೈತರಿಗೆ ಸರತಿ ಸಾಲಿನಲ್ಲಿ ಡಿಎಪಿ ಮತ್ತು ಯುರಿಯಾ ಗೊಬ್ಬರಗಳನ್ನು ವಿತರಣೆ ಮಾಡುವ ಕಾರ್ಯವನ್ನು ಕೃಷಿ ಇಲಾಖೆಯ ಅಧಿಕಾರಿಗಳು ಶುಕ್ರವಾರ ಯಶಸ್ವಿಯಾಗಿ ನಡೆಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ದ ಪಟೇಲ್ ಹಾಗೂ ತಾಲೂಕಾ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ್ ಜೀವಣಗಿ ಅವರ ಮಾರ್ಗದರ್ಶನದಲ್ಲಿ, ರೈತರಿಗೆ ಗೊಬ್ಬರವನ್ನು ಎಂ.ಆರ್.ಪಿ ದರದಲ್ಲಿ ವಿತರಿಸಲಾಗಿತ್ತು. ರೈತರು ಶಿಸ್ತಿನಿಂದ ಸರತಿ ಸಾಲಿನಲ್ಲಿ ನಿಂತು ಗೊಬ್ಬರ ಪಡೆದರು.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ರೈತರು ಉತ್ತಮ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.