ಕೆ.ವಾಯ್.ಎಫ್ ಸಂಘಟನೆಯ ಆಗಸ್ಟ್ ಮಾಸಿಕ ಸಭೆ ಯಶಸ್ವಿಯಾಗಿ ಜರುಗಿತು

ಕೆ.ವಾಯ್.ಎಫ್ ಸಂಘಟನೆಯ ಆಗಸ್ಟ್ ಮಾಸಿಕ ಸಭೆ ಯಶಸ್ವಿಯಾಗಿ ಜರುಗಿತು

ಕೆ.ವಾಯ್.ಎಫ್ ಸಂಘಟನೆಯ ಆಗಸ್ಟ್ ಮಾಸಿಕ ಸಭೆ ಯಶಸ್ವಿಯಾಗಿ ಜರುಗಿತು

ಇಂದು ದಿನಾಂಕ 03 ಆಗಸ್ಟ್ 2025ರಂದು ಕಲಬುರಗಿಯ ಬ್ರಹ್ಮಪುರದಲ್ಲಿರುವ ನಂದು ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಕೆ.ವಾಯ್.ಎಫ್. ಸಂಘಟನೆಯ ಮಾಸಿಕ ಸಭೆ ಸಂಯಮದಿಂದ ಜರುಗಿತು. ಸಭೆಗೆ ಸಂಘಟನೆಯ ಹಿರಿಯ ಮಾರ್ಗದರ್ಶಕರಾದ ಹಾಗೂ ಶಿಕ್ಷಕರಾಗಿರುವ ಎಸ್.ಎ. ಪಾಟೀಲ ಅವರು ಅಧ್ಯಕ್ಷತೆ ವಹಿಸಿದರು.

ಕಾರ್ಯದರ್ಶಿ ಜಗನ್ನಾಥ ಮಂಠಾಳೆ ಸಭೆಗೆ ಆಗಮಿಸಿದ ಎಲ್ಲಾ ಸದಸ್ಯರಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಸಭೆಯಲ್ಲಿ ಹಿರಿಯ ಸದಸ್ಯ ಕೆ.ಬಿ. ಜಮಶೆಟ್ಟಿ ಮಾತನಾಡಿ, “ಸಂಘಟನೆಯ ಗುರಿಗಳನ್ನು ಸಾಧಿಸಲು ಎಲ್ಲ ಸದಸ್ಯರು ಸಮರ್ಪಿತವಾಗಿ ಪಾಲ್ಗೊಳ್ಳಬೇಕು” ಎಂದು ಕರೆ ನೀಡಿದರು.

ನ್ಯಾಯವಾದಿ ವಿನೋದಕುಮಾರ ಜೆನವೆರಿ ಅವರು, ಕಳೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಹಿತವಚನ ನೀಡಿದರು.

ಸಾಧನೆಗೂ, ಶಿಸ್ತುಗೂ ಒತ್ತು:

ಸಭೆಯಲ್ಲಿ ಮುಂದಿನ ನಿರ್ಣಯವಾಗಿ, ಪ್ರತಿಯೊಂದು ತಿಂಗಳ ಮೊದಲನೇ ರವಿವಾರ ಕಲಬುರಗಿಯ ಬ್ರಹ್ಮಪೂರದಲ್ಲಿರುವ ನಂದು ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಮಾಸಿಕ ಸಭೆ ನಡೆಸಲು ತೀರ್ಮಾನಿಸಲಾಯಿತು. ಎಲ್ಲಾ ಸದಸ್ಯರು ತಪ್ಪದೆ ಹಾಜರಾಗುವಂತೆ ಕೋರಲಾಯಿತು.

ಸಭೆಯ ಅಂತ್ಯದಲ್ಲಿ ಸದಸ್ಯ ಸಾಗರ ಹಿರೇಮಠ ಸಭೆಯ ಸಮಾರೋಪವನ್ನು ವಂದನೆಯೊಂದಿಗೆ ನೆರವೇರಿಸಿದರು.