ಪ್ರಕೃತಿ-ಮಾನವ-ಪರಿಸರ ಎಸ್.ಟಿ.ಶಾಂತಕುಮಾರಿ ಕಾಸಿಂ

Nature

ಪ್ರಕೃತಿ-ಮಾನವ-ಪರಿಸರ ಎಸ್.ಟಿ.ಶಾಂತಕುಮಾರಿ ಕಾಸಿಂ

ಪ್ರಕೃತಿ-ಮಾನವ-ಪರಿಸರ ನೋಡಿ ಓದುತ್ತಿದ್ದರೇನೇ ಏನೋ ಒಂದು ರೀತಿಯ ನಂಟು. ನಾವು ಮಾನವರು ಉತ್ತಮ ಆರೋಗ್ಯ ವಂತರಾಗಿ ನೂರು ವರ್ಷಗಳ ಕಾಲ ಸುಖ,ಶಾಂತಿ ನೆಮ್ಮದಿ ಯಿಂದ ಇರಬೇಕು ಎಂದು ದೇವರು ನಮಗೆ ಕೊಟ್ಟ ಉಡುಗೊರೆಯೇ ಪ್ರಕೃತಿ. ಆದರೆ ನಾವು ನಮಗೆ ಕೊಟ್ಟ ಪ್ರಕೃತಿ ಯನ್ನು ಹಾಳು ಮಾಡುವುದರಲ್ಲಿ ಎತ್ತಿದ ಕೈ ಎನ್ನುವುದರಲ್ಲಿ ಅದರಲ್ಲೂ ನಾಗರಿಕ ಜೀವನದಲ್ಲಿ ಮೊದಲು ಎನ್ನುವುದರಲ್ಲಿ ತಪ್ಪೇನೂ ಇಲ್ಲ. ನಮ್ಮ ಪರಿಸರ ಚೆನ್ನಾಗಿರಬೇಕು ಆದರೆ ಅದನ್ನು ನಾವು ಮಾಡಲು ಆಗುವುದಿಲ್ಲ ಕಾರಣ ಒಂದು ಸಮಯ ಇಲ್ಲ, ಇನ್ನೊಂದು ಮೈಗಳ್ಳತನ, ಮತ್ತೊಂದು ರಾಜಕಾರಣ. ಇಲ್ಲಿ ಏಕೆ ರಾಜಕಾರಣ ಎಂದು ಹೇಳುತ್ತೇನೆ ಎಂದರೆ ಅವರಿಗೆ ಅಭಿವೃದ್ಧಿ ಯ ನೆಪದಲ್ಲಿ ನಾಶಗಳೇ ಹೆಚ್ಚು. ನೀರು ಬೇಕು ಆದರೆ ಕೆರೆ, ಬೇಡ. ಬೆಟ್ಟ ಗುಡ್ಡ ಗಳು ಬೇಡ ಏಕೆಂದರೆ ನಮಗೆ ಕಟ್ಟಡಗಳಿಗೆ ಜಾಗ ಬೇಕು. ಬೇಕು ಎನ್ನುವುದರ ಬಾಲ ದೊಡ್ಡದಾಗಿದೆ ಅದಕ್ಕೆ ಮಿತಿಯೇ ಇಲ್ಲ. ಅದರಲ್ಲೂ ಬೆಂಗಳೂರು ನಗರ ಮಿತಿ ಮೀರಿ ಅಂಕೆಯೇ ಇಲ್ಲದೆ ಸುತ್ತಲೂ ಬೆಳೆಸುತ್ತಲೇ ಇದ್ದಾರೆ. ಇನ್ನು ಇಲ್ಲಿರುವ ಜನರಿಗೆ ಉತ್ತಮ ಗಾಳಿ,ನೀರು,ಬೆಳಕು ಎಲ್ಲಿಯದು ? ಗಿಡ ನೆಡುವ ಆಸೆ ಹಲವರಿಗೆ ವಿಪರ್ಯಾಸವೆಂದರೆ ತುಳಸಿ ಗಿಡ ಇಡುವುದಕ್ಕೇ ಜಾಗ ಇಲ್ಲ ಇನ್ನು ಮರಗಳು ಎಲ್ಲಿ ? ಹಿಂದೆ ನಾವು ಚಿಕ್ಕವರಿದ್ದಾಗ ಮರಗಳು ಬೆಳೆಯುತ್ತಿತ್ತು ಬೀಳುವುದು ಕಡಿಮೆ ಇತ್ತು ಕಾರಣ ಅಂದು ಮರಗಳು ಸುತ್ತಲೂ ಹರಡಿಕೊಳ್ಳುತ್ತಾ ಬೆಳೆಯುತ್ತಿತ್ತು ಆದ್ದರಿಂದ ಬೇರುಗಳು ಕೆಳಗೆ ಭೂಮಿಯ ಒಳಗೆ ಹರಡಿಕೊಳ್ಳುತ್ತಿತ್ತು ರೆಂಬೆ ಕೊಂಬೆಗಳು ಚಾಚಿಕೊಳ್ಳುತ್ತಿತ್ತು. ಜೋರು ಮಳೆಗೂ ಮರಗಳು ಅಪರೂಪಕ್ಕೆ ಬೀಳುತ್ತಿತ್ತು. ಆದರೆ ಇಂದಿನ ನಮ್ಮ ಪರಿಸರ ಹೇಗಿದೆ ಎಂದರೆ ಇರುವ ಜಾಗದಲ್ಲೇ ಮರಗಳನ್ನು ಬೆಳೆಸುತ್ತಾರೆ ಅದು ಒಂದೇ ಕಡೆ ವಾಲುತ್ತಾ ಬೆಳೆಯುವುದರಿಂದ ಸ್ವಲ್ಪ ಮಟ್ಟಿಗೆ ಮಳೆ ಜೋರಾಗಿ ಬಿದ್ದರೂ ಮರಗಳು ನೆಲಕ್ಕೆ ಉರುಳುವುದು ಖಚಿತವಾಗಿದೆ. ನಾವು ಈಗ ಯಂತ್ರ ಮಾನವರಾಗಿರುವುದರಿಂದ ಪ್ರಕೃತಿಗೆ ಹಾನಿಗಳೇ ಹೆಚ್ಚಾಗಿ ಕೊಡುತ್ತಿದ್ದೇವೆ ಹೊರತು ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದನ್ನು ಮರೆಯುತ್ತಿದ್ದೇವೆ ಎಂದೇ ಹೇಳಬಹುದು. ದಿನ ದಿನಕ್ಕೂ ಒಂದಲ್ಲಾ ಒಂದು ಹೊಸ ಹೊಸ ಆವಿಷ್ಕಾರ ಆಗುತ್ತಲೇ ಇರುತ್ತದೆ. ಅವು ಕೆಲವು ಬೇಗನೆ ಪ್ರಕೃತಿ ವಿನಾಶಕ್ಕೆ ದಾರಿ ಮಾಡಿದರೆ ಇನ್ನು ಕೆಲವು ನಿಧಾನವಾಗಿ ಅಂದರೆ (ಸ್ಲೋಪಾಯಿಸನ್‌)ನಿದಾನವಾಗಿ ವಿಷವಾಗುತ್ತದೆ . ಅಂದು ನಮ್ಮ ಬಳಕೆಗಳಲ್ಲಿ ಪ್ಲಾಸ್ಟಿಕ್ ಬಹಳ ಕಡಿಮೆ ಇತ್ತು ಕೈಚೀಲ ಗಳು ಬಳಕೆಯಲ್ಲಿದ್ದವು. ನನಗೆ ಈಗಲೂ ಅಂದಿನ ಮಸಾಲೆ ದೋಸೆ ಪೊಟ್ಟಣ ನೆನಪಾಗುತ್ತದೆ ಏಕೆಂದರೆ ಅಂದು ಹೋಟೆಲ್ ನಿಂದ ಮನೆಗೆ ತಂದು ಪೊಟ್ಟಣ ಬಿಚ್ಚುತ್ತಿದ್ದಂತೆ ದೋಸೆಯ ಮತ್ತು ಚಟ್ನಿ ಯ ಘಮಲು ಸುತ್ತ ಪರಿಮಳಿಸಿತ್ತಿತ್ತು ಕಾರಣ ಪೇಪರ್ ಅದರ ಮೇಲೆ ಚಿಕ್ಕ ಬಾಳೆ ಎಲೆ ಅದರ ಮೇಲೆ ಗಟ್ಟಿ ಚಟ್ನಿ ಅದರ ಮೇಲೆ ಒಂದು ಸಣ್ಣ ಬಾಳೆ ಎಲೆ ಅದರ ಮೇಲೆ ಮಸಾಲೆ ದೋಸೆ ಅದನ್ನು ಪೇಪರ್ ನೊಂದಿಗೆ ಮಡಚಿ ದಾರದಿಂದ ಸುತ್ತಿ ಕೊಡುತ್ತಿದ್ದರು. ಅದನ್ನು ಆಸೆ ಪೂರ್ತಿ ತಿಂದು ಬಿಸಾಡಿದರೂ ಪ್ರಕೃತಿಗೆ ಯಾವುದೇ ಹಾನಿ ಇರಲಿಲ್ಲ ನಮ್ಮ ಆಹಾರದ ರುಚಿಯೂ ಇಮ್ಮಡಿ ಆಗುತ್ತಿತ್ತು‌ಆರೋಗ್ಯವೂ ಹೆಚ್ಚು ಇತ್ತು. ಅದು ಪೊಟ್ಟಣ ಕಟ್ಟುವ ಶೈಲಿ ಯೇ ಒಂದು ಪ್ರತಿಭೆ ಇತ್ತು ಕೇವಲ ದೂರದಿಂದಲೇ ಪೊಟ್ಟಣ ನೋಡುತ್ತಿದ್ದಂತೆ ಅದು ಮಸಾಲೆ ದೋಸೆ ಪೊಟ್ಟಣ ಎಂದು ಖಚಿತವಾಗಿ ಹೇಳಬಹುದಿತ್ತು. ಆದರೆ ಇಂದು ಪ್ಲಾಸ್ಟಿಕ್ ತುಂಡು ಹಾಳೆ ಹಾಕಿ ಅದರ ಮೇಲೆ ಚಟ್ನಿ ಹಾಕುತ್ತಾರೆ. ನಂತರ ದಾರ ಸುತ್ತುವ ಬದಲು ಗಮ್ ಟೇಪ್ ಗಳನ್ನು ಬಳಸುತ್ತಾರೆ ಇದರಿಂದ ಪ್ರಕೃತಿಗೆ ಹಾನಿಯೇ ಹೆಚ್ಚು ಇದೊಂದು ಸಣ್ಣ ಉದಾಹರಣೆ ಅಷ್ಟೇ. ಇನ್ನು ವಾಹನಗಳ ಮಾಲಿನ್ಯ, ಕಸದ ರಾಶಿ, ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಒಂದೇ ಎರಡೇ ಹೇಳುತ್ತಾ ಹೋದರೆ ಪುಟಗಳು ಸಾಕಾಗುವುದಿಲ್ಲ. ನಮ್ಮ ಇಂದಿನ ಜೀವನ ಶೈಲಿ ಬದಲಾಗ ಬೇಕು. ಮೊದಲು ಬಳಸಿಬಿಸಾಡಿ ಎನ್ನುವುದು ಹೋಗಬೇಕು ಇದರಿಂದಲೇ ಹೆಚ್ಚು ಹಾನಿ.ಅಂದು ಔಷಧಗಳು ಗಾಜಿನ ಬಾಟಲಿಯಲ್ಲಿ ಬರುತ್ತಿತ್ತು ಇಂದು ಎಲ್ಲವೂ ಪ್ಲಾಸ್ಟಿಕ್ ಮಯ ಅದೇ ನಮ್ಮ ಪರಿಸರಕ್ಕೆ ಕುತ್ತು. ಕೆಲವೊಮ್ಮೆ ನಾವು ಅಂದು ಆರೋಗ್ಯ ವಾಗಿರಲು ನಮಗೆ ಅಂದಿನ ಹಿರಿಯರು ಜೀವನ ನಡೆಸಿಕೊಳ್ಳುತ್ತಿದ್ದ ವಿಧಾನ, ಉಪಯೋಗಿಸುವ ವಸ್ತುಗಳು ಹೆಚ್ಚು ಪ್ರಕೃತಿ ಪ್ರಿಯವಾಗಿತ್ತು ಅನಿಸುತ್ತದೆ. ಅಂದು ನಮಗೆ ಸ್ವಚ್ಛ ಮಾಡಲು ಪೊರಕೆ ಗಿಡ ಮರಗಳಿಂದ ಮಾಡಿಕೊಳ್ಳುತ್ತಿದ್ದರು ಆದರೆ ಇಂದು ಪ್ಲಾಸ್ಟಿಕ್ . ತೆಂಗಿನ ನಾರಿನಿಂದ ಪಾತ್ರೆ ತೊಳೆಯುತ್ತಿದ್ದರು ಇಂದು ಅದಕ್ಕೂ ಪ್ಲಾಸ್ಟಿಕ್. ದೋಸೆ ಹೆಂಚಿಗೂ ಎಣ್ಣಿ ಹಚ್ಚಲು ಪ್ಲಾಸ್ಟಿಕ್ ಬ್ರಶ್ ಬಳಸುತ್ತಾರೆ. ಇನ್ನೂ ನಮಗೆ ಬೇಕೋ ಬೇಡವೋ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಹತ್ತು ಹಲವಾರು ಈವೇಸ್ಟ್ ಇದಂತೂ ಪ್ರಕೃತಿಗೆ ಬಹಳ ಹಾನಿಕಾರಕ ಆದರೂ ನಾವು ಯಂತ್ರ ಮಾನವರಾಗಿದ್ದೇವೆ ಕೆಲವೊಂದು ಪಡೆಯಲು ಹಲವೊಂದು ಕಳೆದುಕೊಳ್ಳುತ್ತಿದ್ದೇವೆ. ಕೆಲವೊಮ್ಮೆ ನೋಡಿದಾಗ ಇಂದಿನ ಜೀವನಕ್ಕಿಂತ ಹಿಂದಿನ ಜೀವನ ಚೆನ್ನಾಗಿತ್ತು. ಅವಶ್ಯಕತೆ ಗಿಂತ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ ಇದೇ ದೊಡ್ಡ ಸಮಸ್ಯೆ ‌ಆಗಿದೆ. ವೇಗವಾಗಿ ಕೆಲಸಗಳು ಆಗುತ್ತದೆ ಅಷ್ಟೇ ವೇಗವಾಗಿ ನಮ್ಮ ಆಯಸ್ಸು ಕಳೆಯುತ್ತಿದೆ ಇದು ಅಷ್ಟು ಬೇಗ ಯಾರ ಗಮನಕ್ಕೂ ಬರುತ್ತಿಲ್ಲ ಅಲ್ಲವೇ ? ವಿಪರ್ಯಾಸವೆಂದರೆ ಮಕ್ಕಳ ಮರದ ಆಟಿಕೆಗಳು ಎಷ್ಟು ಚೆನ್ನಾಗಿ ಇರುತ್ತಿತ್ತು ಇಂದು ಅದು ದುಬಾರಿ ಎಂದು ಪ್ಲಾಸ್ಟಿಕ್ ಆಟಿಕೆಗಳಿಗೆ ಮೊರೆ ಹೋಗುವುದು ಸಾಮಾನ್ಯವಾಗಿ ಆಗಿದೆ. ಇರುವುದರಲ್ಲಿ ನಮ್ಮ ಪರಿಸರವನ್ನು ಆದಷ್ಟು ಸಂರಕ್ಷಿಸೋಣ. ಪ್ರತಿ ವರ್ಷವೂ ಜೂನ್ 5 ವಿಶ್ವ ಪರಿಸರ ದಿನಾಚರಣೆ ಆಚರಣೆ ನಡೆಯುತ್ತದೆ ಅದರ ಉದ್ದೇಶ ಪ್ರತಿ ಒಬ್ಬರೂ ತಮ್ಮ ತಮ್ಮಲ್ಲೇ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಇತರರಿಗೂ ಮಾದರಿಯಾಗಿ ಪ್ರಕೃತಿ ಸಂರಕ್ಷಿಸಬೇಕು. ಸುಂದರ ಪರಿಸರ ಸುಂದರ ಜೀವನ. ಇದಕ್ಕಾಗಿ ಹಲವಾರು ಸಂಘ ಸಂಸ್ಥೆಗಳು ಟೊಂಕ ಕಟ್ಟಿ ನಿಂತಿವೆ ನಾವೂ ಸಹ ಅಂತವರೊಡನೆ ಹೆಜ್ಜೆ ಹಾಕೋಣ ನೈರ್ಮಲ್ಯ ರಹಿತ ಪರಿಸರವಾಗಿಸೋಣ ಪ್ರಕೃತಿಯನ್ನು ಸಂರಕ್ಷಿಸೋಣ. ಪ್ರಕೃತಿ ವಿಕೋಪಕ್ಕೆ ಒಳಗಾಗುವುದು ಬೇಡ. ಈಗಾಗಲೇ ನಮಗೆ ಪ್ರಕೃತಿ ವಿಕೋಪ ಗೊಂಡು ಕರೋನ ದಂತಹ ವಿಪತ್ತು ಎದುರಿಸಿದ್ದೇವೆ ಆದ್ದರಿಂದ ಮರಗಿಡಗಳನ್ನು ಉಳಿಸೋಣ,ಬೆಳೆಸೋಣ ನಮ್ಮ ಪರಿಸರವನ್ನು ಸಂರಕ್ಷಿಸೋಣ ಆದಷ್ಟು ಈವೇಸ್ಟ್, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೋಣ. ಅವಶ್ಯಕತೆ ಗಿಂತಲೂ ಹೆಚ್ಚು ಬಳಕೆ ಮಾಡುವುದು ಬೇಡ.ಪ್ರಕೃತಿ ಮಾತೆಯ ನಮಿಸೋಣ ಸ್ವಚ್ಛ ಪರಿಸರದ ಕಡೆ ಗಮನ ಹರಿಸೋಣ.ಒಂದು ಹೆಜ್ಜೆ ಮುಂದೆ ಸ್ವಚ್ಚತಾ ಕಾರ್ಯ ನಿರ್ವಹಿಸಿದರೆ ಆರೋಗ್ಯದ ಬದುಕು ನಮ್ಮದಾಗುತ್ತದೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಿದ ಖುಷಿ ನಮ್ಮದಾಗುತ್ತದೆ. ಎಲ್ಲರಿಗೂ ಒಳ್ಳೆಯ ದಾಗಲಿ. ಟೊಂಕ ಕಟ್ಟಿ ಪರಿಸರ ಸ್ನೇಹಿ ಆಗೋಣ ಇದಕ್ಕಾಗಿ ದುಡಿಯುತ್ತಿರುವ ಎಲ್ಲಾ ಮಹನೀಯರಿಗೂ ಅನಂತ ನಮನಗಳು. ನಮ್ಮ ಪ್ರಕೃತಿ ಮಾತೆಗೆ ಕೋಟಿ ಕೋಟಿ ನಮನಗಳು.

                                    ಎಸ್. ಟಿ.ಶಾಂತಕುಮಾರಿ ಕಾಸಿಂ

                                     ಲೇಖಕಿ, ಕವಯಿತ್ರಿ, ಬೆಂಗಳೂರು 

                                             9986011961