ಸಹಕಾರ ಸಂಘಗಳು ಜನಸಾಮಾನ್ಯರ ಜೀವನಾಡಿ: ನಾಗನಹಳ್ಳಿ

ಸಹಕಾರ ಸಂಘಗಳು ಜನಸಾಮಾನ್ಯರ ಜೀವನಾಡಿ: ನಾಗನಹಳ್ಳಿ

ಸಹಕಾರ ಸಂಘಗಳು ಜನಸಾಮಾನ್ಯರ ಜೀವನಾಡಿ: ಮಲ್ಲಿನಾಥ ನಾಗನಹಳ್ಳಿ 

ಕಲಬುರಗಿ: ಸಹಕಾರ ಕ್ಷೇತ್ರ ಬೆಳೆದಾಗ ಜನಸಾಮಾನ್ಯರು ಆರ್ಥಿಕವಾಗಿ ಉನ್ನತಿ ಹೊಂದಲು ಸಾಧ್ಯ. ಸರಕಾರದಿಂದ ರೈತರಿಗೆ ಸಿಗುವ ಪ್ರತಿಯೊಂದು ಸೌಲಭ್ಯಗಳನ್ನು ಪ್ರತಿಯೊಬ್ಬ ರೈತರಿಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನನ್ನದಾಗಿರುತ್ತೆ ಎಂದು ಕೋಟನೂರ್ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಿನಾಥ ನಾಗನಹಳ್ಳಿ ಹೇಳಿದರು.

ಗುರುವಾರ ಕೋಟನೂರ್ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ 'ರೈತನೇ ರಾಷ್ಟ್ರದ ಬೆನ್ನೆಲುಬು ರೈತನಿಗೆ ಗೌರವ ಕೊಟ್ಟರೆ ರಾಷ್ಟ್ರಕ್ಕೆ ಗೌರವ ಕೊಟ್ಟಂತೆ' ಎಂಬುವ ಮಹಾ ಸಂಕಲ್ಪದೊಂದಿಗೆ ಅಧಿಕಾರ ಸ್ವೀಕರಿಸಿ ಮಾತನಾಡಿ, ಸಹಕಾರಿ ಸಂಘ ಯಶಸ್ವಿ ಪಥದಲ್ಲಿ ಮುನ್ನಡಿಸುವ ಕಾರ್ಯಕ್ಕೆ ಹಿರಿಯರ ಮಾರ್ಗದರ್ಶನ ನಿರಂತರವಾಗಿರಲಿ ಎಂದು ಬೆಂಬಲ ಕೋರಿದ ಅವರು, ರಾಜ್ಯ ಹಾಗೂ ಜಿಲ್ಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ್ ಗೋನಾಯಕ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಸಿದ್ದಕಾಂತ್ ತಡಕಲ್, ಮುಖಂಡರಾದ ನೀಲಕಂಠರಾವ್ ಮೂಲಗೆ, ಸಂಗಮೇಶ ನಾಗನಹಳ್ಳಿ, ಪವನ್ ವಳಕೇರಿ? ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದು ಪೂಜಾರಿ ನಾಗನಹಳ್ಳಿ, ಗ್ರಾಮ ಪಂಚಾಯತ್ ಸದ್ಯಸರಾದ ಭೀಮಾಶಂಕರ್ ನಂದಿಕೂರ್, ಸಹಕಾರ ಸಂಘದ ನಿರ್ದೇಶಕ ಶಾಮ್ ನಾಟಿಕಾರ, ಭೀಮಾಶಂಕರ್ ನಾಗನಹಳ್ಳಿ, ಸಂಗಣ್ಣ ಗೌಡ ಪಾಟೀಲ್, ನಾಗೇಂದ್ರಪ್ಪ ಶರ್ಮಾ, ನಾಗೇಂದ್ರಪ್ಪ ಗಚಿನಮನಿ, ಪ್ರಕಾಶ್ ನಾಗನಹಳ್ಳಿ, ಲಿಂಗರಾಜ ನಾಗನಹಳ್ಳಿ, ಮಲ್ಲಿಕಾರ್ಜುನ ಬಿರಾದಾರ್, ಚಂದ್ರು ಬೆಳಮಗಿ, ಅಣ್ಣರಾವ ನಾಗನಹಳ್ಳಿ, ಲಕ್ಷ್ಮಣ್ ಆನಂದಗೋಳ,ಸುನೀಲ್ ನಾಗನಹಳ್ಳಿ, ಅನೀಲ್ ನಾಗನಹಳ್ಳಿ ಅನ್ವರ್ ಪಾಟೀಲ್, ಮತ್ತು ಬಸವರಾಜ್ ಮಗ್ಗಿ, ಶಿವಪುತ್ರ ನಾಗನಹಳ್ಳಿ, ರಾಜೇಂದ್ರ ಮುದ್ದನಕರ,ಶರಣು ಕರೆಕಲ್, ಶ್ರೀಕಾಂತ್ ನಾಗನಹಳ್ಳಿ, ಶೇಖರ್, ಅಭಿಲಾಷ ಪೂಜಾರಿ, ಶ್ರೀಧರ್ ಎಮ್ ನಾಗನಹಳ್ಳಿ, ಕಿರಣ್ ಕಣ್ಣಿ ,ಅಭಿಷೇಕ್ ಎಮ್ ನಾಗನಹಳ್ಳಿ, ಮಂಜುನಾಥ್ ನಿಲೋರ್ ಉಪಸ್ಥಿತರಿದ್ದರು.