ಜಿಲ್ಲಾಧಿಕಾರಿ ಭೇಟಿ ನೀಡಿ ಕೈಮಗ್ಗ ದಿನಾಚರಣೆಗೆ ಆಹ್ವಾನಿಸಿದ ನೇಕಾರ ಸಂಘದ ಪದಾಧಿಕಾರಿಗಳು

ಜಿಲ್ಲಾಧಿಕಾರಿ ಭೇಟಿ ನೀಡಿ ಕೈಮಗ್ಗ ದಿನಾಚರಣೆಗೆ ಆಹ್ವಾನಿಸಿದ ನೇಕಾರ ಸಂಘದ ಪದಾಧಿಕಾರಿಗಳು

ಜಿಲ್ಲಾಧಿಕಾರಿ ಭೇಟಿ ನೀಡಿ ಕೈಮಗ್ಗ ದಿನಾಚರಣೆಗೆ ಆಹ್ವಾನಿಸಿದ ನೇಕಾರ ಸಂಘದ ಪದಾಧಿಕಾರಿಗಳು

ಕಲಬುರಗಿ, ಆಗಸ್ಟ್ 1: (1.8.2025) ಮದ್ಯಾಹ್ನ 4.30ಕ್ಕೆ ಕಲಬುರಗಿಯ ಸಪ್ತ ನೇಕಾರ ಸೇವಾ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ ರವರನ್ನು ಭೇಟಿಯಾಗಿ, ಆಗಸ್ಟ್ 7ರಂದು ನಡೆಯಲಿರುವ 11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಕಾರ್ಯಕ್ರಮದ ನಿಮಿತ್ತ ಮನವಿ ಪತ್ರ ಸಲ್ಲಿಸಿದರು.

ಸಂಘದ ಅಧ್ಯಕ್ಷರಾದ ಶಿವಲಿಂಗಪ್ಪ ಅಷ್ಟಗಿ ಅವರು ಈ ಭಾಗದ ಕೈಮಗ್ಗ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ವಿನಂತಿಯ ಜೊತೆಗೆ, ಕೈಮಗ್ಗ ಬಟ್ಟೆಗಳ ಮೇಳ ಹಾಗೂ ಪ್ರದರ್ಶನ ಸಂಕೀರ್ಣವನ್ನು ಆಯೋಜಿಸಲು ಅನುಮತಿ ಕೋರಿದರು.

ಜಿಲ್ಲಾಧಿಕಾರಿಗಳಾದ ಫೌಜಿಯಾ ತರನ್ನುಮ ಅವರು ಈ ಮನವಿಗೆ ಸಕಾರಾತ್ಮಕವಾಗಿ ಪ್ರತಿಸ್ಪಂದಿಸಿ, “ಇದು ನನ್ನ ಕರ್ತವ್ಯದ ಭಾಗವಾಗಿದ್ದು, ಈ ರೀತಿಯ ಉದ್ದೇಶಪೂರ್ಣ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಕಾರ್ಯಕ್ರಮಕ್ಕೆ ನಾನು ಸ್ವತಃ ಹಾಜರಾಗಿ ಉದ್ಘಾಟನೆ ಮಾಡುತ್ತೇನೆ,” ಎಂದು ಭರವಸೆ ನೀಡಿದರು.

ಅಲ್ಲದೇ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರಿಗೆ ಹಾಗೂ ತೀವ್ರ ಕೈಮಗ್ಗ ಯೋಜನಾ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ *ಸ್ವದೇಶಿ ಮಳಿಗೆ ಪ್ರದರ್ಶನ*ವನ್ನು ಆಗಸ್ಟ್ 7ರಿಂದ ಆಗಸ್ಟ್ 16ರ ಸ್ವಾತಂತ್ರ್ಯದ ದಿನದವರೆಗೆ ಮುಂದುವರಿಸಲು ಸೂಚನೆ ನೀಡಲಾಗುವುದು ಎಂದೂ ಹೇಳಿದರು.

ಈ ಭೇಟಿಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ, ಸಂಘದ ಉಪಾಧ್ಯಕ್ಷ ಮತ್ತು ಕಾರ್ಯಕ್ರಮದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಬಲಪೂರ, ನ್ಯಾಯವಾದಿ ಜೇನವೆರಿ ವಿನೋದ್ ಕುಮಾರ್ ಹಾಗೂ ಪತ್ರಿಕಾ ವಕ್ತಾರ ರಾಜುಕೋಷ್ಟಿ ಉಪಸ್ಥಿತರಿದ್ದರು.