ಅರವಿಂದ ಕುಲಕರ್ಣಿ ಅವರಿಗೆ ಎಕೆಬಿಎಮ್ಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ಥಾನ – ಬೀದರ್‌ನಲ್ಲಿ ಅಭಿನಂದನೆ

ಅರವಿಂದ ಕುಲಕರ್ಣಿ ಅವರಿಗೆ ಎಕೆಬಿಎಮ್ಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ಥಾನ – ಬೀದರ್‌ನಲ್ಲಿ ಅಭಿನಂದನೆ
ಬೀದರ್, ಆಗಸ್ಟ್ 1:ಬೀದರ್‌ನ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅರವಿಂದ ಕುಲಕರ್ಣಿ ಅವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಮ್ಎಸ್), ಬೆಂಗಳೂರು ಸಂಸ್ಥೆಯ ರಾಜ್ಯ ಕಾರ್ಯಕಾರಿಣಿಯ ಕೇಂದ್ರ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ಸಂಬಂಧ ಮಹಾಸಭೆಯ ಅಧ್ಯಕ್ಷರಾದ ಎಸ್. ರಘುನಾಥ್ ಅವರು 2025-26ನೇ ಸಾಲಿನ ಆಯ್ಕೆ ಆದೇಶವನ್ನು ಹೊರಡಿಸಿದ್ದು, ಮಹಾಸಭೆಯ ಯೋಜನೆಗಳನ್ನು ವಿಪ್ರ ಸಮುದಾಯಕ್ಕೆ ಸಮರ್ಪಕವಾಗಿ ತಲುಪಿಸಲು ಶ್ರದ್ಧೆಯಿಂದ ಕಾರ್ಯನಿರ್ವಹಿಸಲು ಹಾಗೂ ಮಹಾಸಭೆಯನ್ನು ಶಕ್ತಿಶಾಲಿ ಸಂಘಟನೆಯನ್ನಾಗಿ ರೂಪಿಸಲು ಸೂಚಿಸಿದ್ದಾರೆ.
ಕುಲಕರ್ಣಿ ಅವರ ಈ ನೇಮಕಕ್ಕೆ ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ವೀರಭದ್ರಪ್ಪ ಉಪ್ಪಿನ್, ಮಿತ್ರ ಮಂಡಳಿಯ ಗೌರವಾಧ್ಯಕ್ಷ ಸಂಜೀವ ಕುಮಾರ್ ಸ್ವಾಮಿ, ಖ್ಯಾತ ಮಕ್ಕಳ ತಜ್ಞ ಡಾ. ಸಿ. ಆನಂದರಾವ್ ಮಾರುತಿ ರಾವ್ ಬಿರಾದರ್, ಅನಂತ್ ಕುಲಕರ್ಣಿ ಮತ್ತು ಮನೋಹರ್ ಸಿಂಗ್ ಪಾಟೀಲ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಮಿತ್ರ ಮಂಡಳಿಯ ವತಿಯಿಂದ ನಗರದಲ್ಲಿ ಶ್ರೀ ಅರವಿಂದ ಕುಲಕರ್ಣಿ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಜೀವ ಕುಮಾರ್ ಸ್ವಾಮಿ, ಮನೋಹರ್ ಸಿಂಗ್ ಪಾಟೀಲ್, ಅನಿಲ್ ಕುಮಾರ್ ಕುಲಕರ್ಣಿ, ಅನಂತ್ ಕುಲಕರ್ಣಿ, ರವಿ ಕುಮನೂರ್, ಸುರೇಶ್ ದೇಗಲ್ಮಡಿ, ವಿಜಯಕುಮಾರ್ ಪಾಟೀಲ್, ನಾಗೇಶ್ ಸ್ವಾಮಿ, ಓಂಕಾರ್ ಉಪ್ಪೇ, ಕರ್ಬಸಪ್ಪ, ಆಕಾಶ್, ಬಳಿರಾಮ್ ಕುರುನಾಳೆ, ರಾಕೇಶ್, ಶಹಾಬಾಜ್ ಹುಸೇನ್, ಸಮೀರ್ ಹುಸೇನ್, ರಾಜಕುಮಾರ್ ಬಿರಾದಾರ್, ಶಿವಕುಮಾರ್ ಕುಂಬಾರ್, ಧೂಳಪ್ಪ, ಇಲೇಶ್ ಕುಮಾರ್, ಸಂಗ್ರಾಮ್, ನಂದಕುಮಾರ್, ಪ್ರವೀಣ್ ಕುಮಾರ್, ಸಿದ್ದರಾಮ ಹೂಗಾರ ಮೊದಲಾದವರು ಉಪಸ್ಥಿತರಿದ್ದರು.