ಕನ್ನಡ ನಾಡು ನುಡಿ ಸೇವಕ ಸಂಗಮೇಶ ಎನ್ ಜವಾದಿ.

ಕನ್ನಡ ನಾಡು ನುಡಿ ಸೇವಕ ಸಂಗಮೇಶ ಎನ್ ಜವಾದಿ.
(ಶ್ರೀಯುತ ಸಂಗಮೇಶ ಎನ್ ಜವಾದಿ ರವರು, ದಿನಾಂಕ 02-08-2025 ರಂದು,
40 ವಸಂತಗಳನ್ನು ಪೂರೈಸಿ, 41 ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಯುಕ್ತ ಬರೆದ ಲೇಖನ)
ಕನ್ನಡ ನಾಡು ನುಡಿ ಭಾಷೆ ನೆಲ ಜಲ ಗಡಿ ಪರವಾಗಿ ಸದಾ ಹೋರಾಟ ಮಾಡುವುದು ಸೇರಿದಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಗಮೇಶ ಎನ್ ಜವಾದಿ ರವರ ಹೋರಾಟ ಸದಾ ಜಾರಿಯಲ್ಲಿದೆ. ಇನ್ನು ಬಡವರ, ಅನಾಥರ, ರೈತರ, ಕೂಲಿಕಾರ್ಮಿಕರ ಉನ್ನತಿಗಾಗಿ ದುಡಿಯುತ್ತಿದ್ದಾರೆ. ಹೀಗೆ ಇವರ ಹೋರಾಟ ಸತ್ಯ, ನ್ಯಾಯಕ್ಕಾಗಿ ಎಂದರೆ ತಪ್ಪಾಗಲಾರದು. ಸಮಾಜದ ಅಭಿವೃದ್ಧಿಗಾಗಿ ಚಿಂತಿಸುವ ಮೂಲಕ ಅನ್ಯಾಯದ ವಿರುದ್ಧ ಹೋರಾಟ ಮಾಡಿ, ನ್ಯಾಯ ಒದಗಿಸುವ ದಿಸೆಯಲ್ಲಿ ಹಗಲಿರುಳು ಶ್ರಮ ಹಾಕಿ ಹೋರಾಟ ಮಾಡುತ್ತಿರುವುದು ನಾವೆಲ್ಲರೂ ಕಾಣುತ್ತಿದೇವೆ.
ಪ್ರಸ್ತುತ ದಿನಮಾನಗಳ ಈ ಕಷ್ಟ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯ ಹಾಗೂ ಮಾನವೀಯತೆ ಸಂಬಂಧದೊಂದಿಗೆ ಇನ್ನಷ್ಟು ಜನಪರ ಕೆಲಸಗಳು ಈ ಪತ್ರಕರ್ತರಿಂದ ಆಗುತ್ತಿವೆ ಎಂದರೆ ತಪ್ಪಾಗಲಾರದು. ಎಂತಹದೇ ಸಂಕಷ್ಟ ಸಮಯದಲ್ಲಿಯೂ ಜನರ ಜೊತೆ ನಿಲ್ಲುವ,ಅವರ ಸಮಸ್ಯೆಗಳಿಗೆ ಸ್ವಂದಿಸುವ ಕೆಲಸ ನಿರಂತರವಾಗಿ ಮಾಡಿಕೊಂಡು ಜನರನ್ನು ಸದಾ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಸದಾ ದುಡಿಯುತ್ತಿರುವ ಜವಾದಿಯವರ ಸೇವೆ ಅಭಿನಂದನೀಯವಾದದ್ದು.
ಅದೇ ರೀತಿ ಕೋವಿಡ್-19 ಮೊದಲನೇ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿಯೂ ಸಮಾಜದ ಹಾಗೂ ಜನಸಾಮಾನ್ಯರ ಹಿತಕ್ಕಾಗಿ ತಮ್ಮ ಜೀವದ ಹಂಗು ತೊರೆದು ನಿಸ್ವಾರ್ಥ ಸೇವೆ ಮಾಡಿದ ಹಿರಿಮೆ ಇವರದಾಗಿದೆ.
ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾಗಿರುವ ಪತ್ರಿಕಾ ಮಾಧ್ಯಮವು, ಸ್ವತಂತ್ರವಾಗಿ, ಸತ್ಯ - ನ್ಯಾಯ ನಿಷ್ಠೆಯಿಂದ ಹಾಗೂ ಮೌಲ್ಯಯುತವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಂಗಮೇಶ ಜವಾದಿಯವರು ಸಹ ಇದೆ ಮಾರ್ಗದಲ್ಲಿ ಸಾಗುವ ಕೆಲಸ ಮಾಡುತ್ತಿದ್ದಾರೆ.ಅಂತೆಯೇ ಇವರ ಪತ್ರಿಕಾ ಧರ್ಮದ ಬಗೆ ನಿಸ್ಪಕ್ಷಪಾತ ವರದಿ ಹಾಗೂ ಅಂಕಣಗಳನ್ನು ಪ್ರಕಟಣೆ ಮಾಡುವ ಮುಖಾಂತರ ಜನರ ವಿಶ್ವಾಸವನ್ನು ಗಳಿಸಿದ್ದಾರೆ. ಹಾಗಾಗಿಯೇ ಇವರ ಪತ್ರಿಕಾ ಕ್ಷೇತ್ರದ ಕುರಿತು ವಿಶೇಷ ಕಾಳಜಿ ಮತ್ತು ಬದ್ದತೆಗೆ ಬೆಲೆಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ಸ್ನೇಹಿತರೆ.
ಅದರಂತೆ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡಿದಂತೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸದಾ ಸಮಾಜದ ಸಮಸ್ಯೆಗಳು ಸರಕಾರದ ಗಮನಕ್ಕೆ ತಂದು. ಸರಕಾರದ ಕಣ್ಣೆತೆರೆಸುವ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಪರಿಸರ ಸಂರಕ್ಷಣೆಗಾಗಿ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಜಲ, ವಾಯು,ಶಬ್ದ ಮಾಲಿನ್ಯದಿಂದ ಆಗುವ ದುಷ್ಪರಿಣಾಮದ ಬಗೆ ಜನರಿಗೆ ತಿಳುವಳಿಕೆ ನೀಡಿ ಜಾಗೃತಿ ಮಾಡುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಸಂಗತಿಯಾಗಿದೆ. ಅದೇ ರೀತಿ ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿದ್ದಾರೆ.
ಹೀಗೆ ಜನರ ನೋವಿಗೆ ಮಿಡಿಯುವ ಇವರ ಹೃದಯವೈಶಾಲ್ಯತೆ ದೊಡ್ಡದು.
ಅಂದಹಾಗೆ ಈ ಮಹನೀಯರು ಇಂದು ದಿನಾಂಕ 02-08-2025 ರಂದು ನಲವತ್ತು ವಸಂತಗಳನ್ನು ಪೂರೈಸಿ, ನಲವತ್ತೊಂದನೇಯ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಹೃತ್ಪೂರ್ವಕ ಶುಭಾಶಯಗಳು ಕೋರುತ್ತೇವೆ. ವಿಶ್ವ ದಾರ್ಶನಿಕರ ಆಶೀರ್ವಾದ ಸದಾ ಕಾಲ ಇವರ ಮೇಲಿರಲೆಂದು ಆಶಿಸುತ್ತೇವೆ.
ಬಸವರಾಜ ಮಂಕಲ್ ಸಾಮಾಜಿಕ ಸೇವಕರು ಬೀದರ್