ಬಾನು ಮುಸ್ತಾಕ್ ಅವರಿಗೆ ಅಧಿಕೃತ ಅಹ್ವಾನ

ಬಾನು ಮುಸ್ತಾಕ್ ಅವರಿಗೆ ಅಧಿಕೃತ ಅಹ್ವಾನ

ಬಾನು ಮುಸ್ತಾಕ್ ಅವರಿಗೆ ಅಧಿಕೃತ ಅಹ್ವಾನ

 ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಸುಕ್ಷೇತ್ರ ಗಬ್ಬೂರಿನ ಮಹಾಶೈವ ಧರ್ಮಪೀಠದ 2025ನೇ ಸಾಲಿನಲ್ಲಿ ಕೊಡ ಮಾಡುವ *ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿಗೆ* ಆಯ್ಕೆಯಾದ,ಖ್ಯಾತ ಸಾಹಿತಿ ಬಾನು ಮುಸ್ತಾಕ್ ಅವರಿಗೆ ಹಾಸನದ ಅವರ ನಿವಾಸದಲ್ಲಿ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ಅಹ್ವಾನ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾನು ಮುಸ್ತಾಕ್ ಅವರು ಗಬ್ಬೂರಿನ ಮಹಾಶೈವ ಧರ್ಮಪೀಠದ ಅಧ್ಯಕ್ಷರಿಗೂ ಸಮಿತಿಯ ಸರ್ವ ಸದಸ್ಯರಿಗೂ ಅಭಿಮಾನಿಗಳ ವಿಶ್ವಾಸಕ್ಕೆ ಕೃತಜ್ಞತೆ ತಿಳಿಸಿ,ಕಲ್ಯಾಣ ಕರ್ನಾಟಕದ ಅನೇಕ ಶರಣರ ವಿಚಾರಧಾರೆಗಳನ್ನು ಅರಿತು,ನಿಮ್ಮೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕಾಗಿ ಅಭಿನಂದನೆಗಳು ಸಲ್ಲಿಸಿ ಮಾತನಾಡಿದರು.

ಬಾನು ಮುಸ್ತಾಕ್ ಅವರು ಹೋರಾಟ,ಸಾಹಿತ್ಯ,ಸಾಂಸ್ಕೃತಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ, ಅವರು ರಚಿಸಿರುವ **ಎದೆಯ ಹಣತೆ* ಕೃತಿಗೆ 2025ನೇ ಸಾಲಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದ್ದು ಇಡೀ ಕನ್ನಡಿಗರು ಹೆಮ್ಮೆಪಡುವಂಥ ವಿಷಯ ಎಂದು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಡಾ: ಎನ್.ಹೆಚ್. ಪೂಜಾರ ಸಂತೋಷ ವ್ಯಕ್ತಪಡಿಸಿ ಮಾತನಾಡಿದರು. 

ಗಬ್ಬೂರಿನ ಮಹಾಶೈವ ಧರ್ಮ ಪೀಠದಲ್ಲಿ ಆಗಸ್ಟ್ 9ರಂದು ನೂಲು ಹುಣ್ಣಿಮೆಯ ದಿವಸ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿರುವ ಕುಮಾರಸ್ವಾಮಿಗಳ ಹುಟ್ಟು ಹಬ್ಬದ ಪ್ರಯುಕ್ತ ಭಾನು ಮುಸ್ತಾಕ್ ಅವರಿಗೆ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಮಿತಿಯ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರ ಹೇಳಿದರು.