ಡಾ. ವೀಣಾ ಪಿ. ಅವರ "ಜೀವದಾಯಿ" ವೃತ್ತಿ ರಂಗನಾಟಕ ಆಯ್ಕೆ

ಡಾ. ವೀಣಾ ಪಿ. ಅವರ "ಜೀವದಾಯಿ" ವೃತ್ತಿ ರಂಗನಾಟಕ ಆಯ್ಕೆ

ಡಾ. ವೀಣಾ ಪಿ. ಅವರ "ಜೀವದಾಯಿ" ವೃತ್ತಿ ರಂಗನಾಟಕ ಆಯ್ಕೆ

ದಾವಣಗೆರೆ, ಜುಲೈ 31:ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣವು ಹಮ್ಮಿಕೊಂಡಿದ್ದ ವೃತ್ತಿ ರಂಗನಾಟಕ ರಚನಾ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ನೀಡಿದ ನಾಟಕ ರಚನೆಯ ಆಹ್ವಾನದಲ್ಲಿ, ಡಾ. ವೀಣಾ ಪಿ. ಅವರ “ಜೀವದಾಯಿ” ನಾಟಕವನ್ನು ಆಯ್ಕೆ ಮಾಡಲಾಗಿದೆ.

2025ರ ಫೆಬ್ರವರಿಯಲ್ಲಿ ಏರ್ಪಡಿಸಿದ್ದ ಈ ಒಂದು ವಾರದ ಶಿಬಿರವು ಕೊಂಡಜ್ಜಿ ಬೆಟ್ಟದ ನೈಸರ್ಗಿಕ ಪರಿಸರದಲ್ಲಿ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ತರಬೇತಿ ಪಡೆದ ಪ್ರತಿಭಾನ್ವಿತ ಶಿಬಿರಾರ್ಥಿಗಳಲ್ಲಿ ಹಲವರ ನಾಟಕಗಳನ್ನು ಪರಿಶೀಲಿಸಿದ ತೀರ್ಪುಗಾರರ ಸಮಿತಿಯು ಡಾ. ವೀಣಾ ಅವರ “ಜೀವದಾಯಿ” ನಾಟಕವನ್ನು ಶ್ರೇಷ್ಠವೆಂದು ಗುರುತಿಸಿ ಆಯ್ಕೆ ಮಾಡಿದೆ.

ಈ ನಾಟಕವನ್ನು ಶೀಘ್ರದಲ್ಲೇ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದಿಂದ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರು ತಿಳಿಸಿದ್ದಾರೆ.