ಹೊಳೆಸಮುದ್ರ ಗ್ರಾಮದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ

ಹೊಳೆಸಮುದ್ರ ಗ್ರಾಮದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ
ಕಮಲನಗರ: ಸ್ವಾವಲಂಬಿ ಬದುಕಿಗೆ ಮಹಿಳಾ ಜ್ಞಾನ ವಿಕಾಸ ಕೇಂದ್ರ ಸಹಕಾರಿಯಾಗಿದೆ ಇದರ ಲಾಭ ಪಡೆದುಕೊಳ್ಳಿ ಎಂದು ವಲಯ ಮೇಲ್ವಿಚಾರಕರಾದ ಶರಣು ಎಮ್ ಬೀರಾದಾರ ನುಡಿದರು.
ಕಮಲನಗರ ವಲಯ ಹೊಳೆಸಮುದ್ರ ಕಾರ್ಯ ಕ್ಷೇತ್ರದಲ್ಲಿ ಶನಿವಾರ ಬೀರಗೊಂಡಾ ಮಂದಿರದಲ್ಲಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ(ರಿ), ಔರಾದ್ (ಬಾ) ತಾಲ್ಲೂಕು
ರಾಜರ್ಷಿ ಪರಮ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೋಶ್ರೀ ಹೇಮಾವತಿ.ವಿ. ಹೆಗ್ಗಡೆಯವರ ಕೃಪಾಶೀರ್ವಾದ ಗಳೊಂದಿಗೆ
ಮಹಿಳಾ ಜ್ಞಾನ ವಿಕಾಸ ಕೇಂದ್ರ ಯೋಜನೆಯಡಿಯಲ್ಲಿ ಕೇಂದ್ರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರದ ಉದ್ದೇಶ ವ್ಯಾಪ್ತಿ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯೋಗಿತಾ ಮಾರುತಿ ಅಳಂದೆ ಕಾರ್ಯಕ್ರಮ ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆ ಮಾಡಿದರು.
ಕುಟುಂಬಗಳ ಸಮಸ್ಯೆಯನ್ನು ನೀಗಿಸಲು ಪ್ರತಿ ಗ್ರಾಮದಲ್ಲಿ ಕೇಂದ್ರಗಳ ಮಾಡಿ ಮಹಿಳಾ ಜ್ಞಾನ ವಿಕಾಸ ಕೇಂದ್ರ ಸ್ಥಾಪನೆ ಮಾಡಿ ನಾಲ್ಕು ಗೋಡೆಯಲ್ಲಿ ಇರುವುದನ್ನು ಬಿಟ್ಟು ಸಮಾಜದ ದೈನಂದಿನ ಚಟುವಟ್ಟಿಕ್ಕೆಗಳೊಂದಿಗೆ ಭಾಗಿಯಾಗಿ ಜೀವನದಲ್ಲಿ ಪ್ರಗತಿಯನ್ನು ಕಂಡುಕೊಳ್ಳಬೇಕಾಗಿದೆ ಹಾಗೂ ಇಂತಹ ಕೇಂದ್ರಗಳನ್ನು ಸ್ಥಾಪಿಸಿರುವೊಂದಿಗೆ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ವರ್ಷಕೊಮ್ಮೆ ಇಂತಹ ಕಾರ್ಯಕ್ರಮಗಳು ಕೇಂದ್ರ ವಾರ್ಷಿಕೋತ್ಸವ ಕಾರ್ಯಕ್ರಮ ನಡೆದು ಕೊಂಡು ಬರುತ್ತಿರುವುದು ಸಂತಸದ ವಿಷಯ ಎಂದು ಪತ್ರಕರ್ತರಾದ ಸಂಗಮೇಶ್ವರ ಎಸ್ ಮುರ್ಕೆ ಮಾತನಾಡಿದರು.
ಸದರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಹುಲ್ ಪಾಟೀಲ್ ಮತ್ತು ಸತೀಶ್ ಭೂರೆ ಮತ್ತು ಹಾಗೂ ಒಕ್ಕೂಟ ಅದ್ಯಕ್ಷರಾದ ಶ್ರೀಮತಿ ನಿರ್ಮಲಾ ಧನರಾಜ ಮತ್ತು ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯಾದ ಸಂಗೀತಾ ಮೇಡಂ,ಸೇವಾ ಪ್ರತಿನಿಧಿ ಆದ ಕವಿತಾ ಬಿರಾದಾರ್ ಸೇವದಾರರಾದ ಪ್ರಿಯಾಂಕ ಹಾಗೂ ಸ್ವಸಾಯ ಸಂಘದ ಸದಸ್ಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.