ಅಂಬಿಗರ ಚೌಡಯ್ಯನವರ ತತ್ವಗಳು ದಾರಿದೀಪ: ಕಿರಣ
ಅಂಬಿಗರ ಚೌಡಯ್ಯನವರ ತತ್ವಗಳು ದಾರಿದೀಪ: ಕಿರಣ
ಆಳಂದ: ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ ಎಂದು ಯುವ ಮುಖಂಡ ಕಿರಣ ಗುತ್ತೇದಾರ ಅವರು ಹೇಳಿದರು.
ತಾಲೂಕಿನ ಕೊಡಲಹಂಗರಗಾ ಗ್ರಾಮದಲ್ಲಿ ಕೋಳಿ ಸಮಾಜ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಚೌಡಯ್ಯ ಸಮಾಜ ಬಾಂಧವರು ಸರ್ಕಾರಿ ಸೌಲಭ್ಯ ಪಡೆದು ಶಿಕ್ಷಣದೊಂದಿಗೆ ಸಾಮಾರ್ಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕು ಎಂದರು.
ಇನ್ನೊರ್ವ ಮುಖಂಡ ಮಲ್ಲಿಕಾರ್ಜುನ ಸಾವಳಗಿ ಮಾತನಾಡಿ, ಚೌಡಯ್ಯನವರು ಜಾತಿ ಮಥ ಪಂಥಕ್ಕೆ ಸೀಮಿತಗೊಳ್ಳದೆ ಸರ್ವ ಜನಾಂಗಕ್ಕೆ ವಚನಗಳು ನೀಡಿ ಬದುಕಿಗೆ ಮಾರ್ಗದರ್ಶನ ನೀಡಿದ್ದಾರೆ, ಅವರ ವಚನಗಳನ್ನು ಅಧ್ಯಯನ ಮಾಡಿದರೆ ಜೀವನ ಸನ್ಮಾರ್ಗದತ್ತ ಸಾಗಲಿದೆ ಎಂದು ಹೇಳಿದರು.
ಕಬ್ಬಲಿಗ, ಕೋಳಿ ಸಮಾಜದ ಸಿದ್ಧರಾಮ ಜಮಾದಾರ, ಅಶೋಕ ಜಮಾದಾರ, ನೀಲಪ್ಪ ಜಮಾದಾರ, ಭೀಮರಾವ್ ಜಮಾದಾರ, ಗ್ರಾಮದ ಅಮೃತ ಪಟ್ಟಣಶೆಟ್ಟಿ, ಶಿವಾನಂದ ಮೂಲಗೆ, ಹೀರಾಜಿ ಚವ್ಹಾಣ, ಸಂಜು ಸಗರ, ಮಿಂಚಪ್ಪ ನಡಗೇರಿ, ಶಿವಾನಂದ ಮೊಗಲೆ, ಸಾಯಬಣ್ಣ ಹಡಪದ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾಚನೆ ಕೈಹೊಂಡರು
.