ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ - ಕಲ್ಲಿನಾಥ ಶ್ರೀಗಳು

ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ - ಕಲ್ಲಿನಾಥ ಶ್ರೀಗಳು

ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ - ಕಲ್ಲಿನಾಥ ಶ್ರೀಗಳು

ಶಹಾಪುರ : ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಭೇದ ಭಾವ ಮರೆತು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಹೊರ್ತಿ ಕೋಲಾರದ ವಿಶ್ವಗಾಣಿಗ ಸಮಾಜದ ಜಗದ್ಗುರು ಪೂಜ್ಯ ಶ್ರೀ ಕಲ್ಲಿನಾಥ ಮಹಾ ಸ್ವಾಮಿಗಳು ಹೇಳಿದರು.

ಇಂದು ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗಾಣದೇವತೆ ವೃತ್ತದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು,ಬಡವರ ಹಾಗೂ ಅಸಹಾಯಕರ ನೆರವಿಗೆ ನಿಂತು ನ್ಯಾಯ ದೊರಕಿಸಿ ಕೊಡುವನೆ ನಿಜವಾದ ಗಾಣಿಗ, ಈ ನಾಡಿಗೆ ನಮ್ಮ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.

ವಕ್ಕಲಿಗೇರಿ ಹಿರೇಮಠದ ಮರುಳ ಮಹಾಂತ ಶಿವಾಚಾರ್ಯರು ಮಾತನಾಡಿ,ಗಾಣಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ,ಮುಖ್ಯ ವೇದಿಕೆಗೆ ತರುವಲ್ಲಿ ಶ್ರಮಿಸಿ ಉತ್ತಮ ಸಮಾಜ ಕಟ್ಟುವ ಕೆಲಸ ಮಾಡೋಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಕಿರಿಯರನ್ನ ನಾಡಿಗೆ ಪರಿಚಯಿಸುವ ಕೆಲಸ ಹೆಚ್ಚೆಚ್ಚು ಆಗಬೇಕು ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಭೀಮರಾಯ ಸೇರಿ,ಪಿಡ್ಡಪ್ಪ ನಂದಿಕೋಲ, ಮಲ್ಲಣ್ಣವಮ್ಮಾ,ನಿಂಗಣ್ಣ ಮುದ್ದಾ,ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಸಿದ್ರಾ,ಶಿವಣ್ಣಗೌಡ ಗೌಡರ,ಅಮರೇಶ್ ನಂದಿಕೋಲ,ಮಹಾಂತಪ್ಪ ಕೂಡ್ಲೂರು,ಮಡಿವಾಳಪ್ಪ ಪಾಟೀಲ್,ಗಣೇಶ್ ಚಡಗುಂಡ ಸೇರಿದಂತೆ ನೂರಾರು ಸಮಾಜದ ಬಂಧುಗಳು ಹಾಜರಿದ್ದರು.