ನಿತ್ಯ ಜೀವನದಲ್ಲಿ ವಿಜ್ಞಾನ : ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

ನಿತ್ಯ ಜೀವನದಲ್ಲಿ ವಿಜ್ಞಾನ : ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

ನಿತ್ಯ ಜೀವನದಲ್ಲಿ ವಿಜ್ಞಾನ : ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ 

ಚಿತಾಪುರ : ಪಟ್ಟಣದ ಹೊರ ವಲಯದಲ್ಲಿರುವ ಮೂರಾರ್ಜಿ ದೇಸಾಯಿ ವಸತಿ ಶಾಲೆ ಚಿತ್ತಾಪುರ ಟೌನ್ (sc-182) ನಲ್ಲಿ ಫೆಬ್ರುವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಮಡಿವಾಳಪ್ಪ ಜೈನಾಪುರ್ AE ಚಿತ್ತಾಪುರ ಜಂಕ್ಷನ್ ವಹಿಸಿಕೊಂಡು ಮಕ್ಕಳಿಗೆ ವಿಜ್ಞಾನದ ಮಹತ್ವದ ಕುರಿತು ಪರಿಚಯಿಸಿದರು. ವಸತಿ ಶಾಲೆಯ ಪ್ರಾಂಶುಪಾಲರಾದ ಬಸವರಾಜ್ ಅವಂಟಿ ಮಾತನಾಡಿ ಮಕ್ಕಳು ಈ ವಿಶೇಷ ದಿನದಂದು ಹಲವಾರು ಪ್ರಾಜೆಕ್ಟ್ ಮತ್ತು ಮಾಡೆಲ್ ಗಳನ್ನು ಮಾಡಿ ವಿಜ್ಞಾನ ವಸ್ತು ಪ್ರದರ್ಶನದೊಂದಿಗೆ ಅರಿವನ್ನು ಮೂಡಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರ. ಈ ಸಂದರ್ಭದಲ್ಲಿ ವಸತಿ ಶಾಲೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮಕ್ಕಳು ಹಲವಾರು ಚಟುವಟಿಕೆಗಳನ್ನು ಪ್ರದರ್ಶಿಸಿ ಸಿ ವಿ ರಾಮನ್ ಹಾಗೂ ಇತರೆ ವಿಜ್ಞಾನಿಗಳ ಕೊಡುಗೆಗಳು , ವಿಜ್ಞಾನದ ಪ್ರಮುಖ ವಿಷಯದ ವಿವಿಧ ಸಂಶೋಧನೆಗಳನ್ನು ಸ್ಮರಿಸುವುದರೊಂದಿಗೆ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡರು. ಶಾಲೆಯ ವಿದ್ಯಾರ್ಥಿಗಳು ಹಲವಾರು ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ರಸಪ್ರಶ್ನೆ ಹಾಗೂ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಹಾಗೂ ಬಹುಮಾನ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳಾದ ವೈಷ್ಣವಿ ವಿ ನಿರೂಪಿಸಿದರು ಹಾಗೂ ಭಾಗ್ಯಶ್ರೀ ಎಸ್ಎಂ ವಂದಿಸಿದರು.