ಶ್ರೀಶೈಲ್ ಪಾದಯಾತ್ರೆ ಬಿತ್ತಿಪತ್ರ ಬಿಡುಗಡೆ
ಶ್ರೀಶೈಲ್ ಪಾದಯಾತ್ರೆ ಬಿತ್ತಿಪತ್ರ ಬಿಡುಗಡೆ.
ಶಹಾಪುರ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಗರ ಗ್ರಾಮದ ಶ್ರೀ ಕರಿಬಸವೇಶ್ವರ ಪಾದಯಾತ್ರ ಕಮಿಟಿ ವತಿಯಿಂದ ಶ್ರೀಶೈಲ ಪಾದಯಾತ್ರೆ ಹಮ್ಮಿಕೊಂಡಿದ್ದರ ಪ್ರಯುಕ್ತ ಬಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.
ಬಿತ್ತಿ ಪತ್ರ ಬಿಡುಗಡೆಗೊಳಿಸಿ ವಕ್ಕಲಗರ ಹಿರೇಮಠದ ಮರುಳ ಮಹಾಂತ ಶಿವಾಚಾರ್ಯರು ಮಾತನಾಡಿ,ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಮಾನಸಿಕವಾಗಿ ಬದುಕಿಗೆ ನೆಮ್ಮದಿ ದೊರಕುವುದರ ಜೊತೆಗೆ ಧಾರ್ಮಿಕತೆಯ ಅರಿವಿನ ಆಳ ಮತ್ತಷ್ಟು ತಿಳಿ ಪಡಿಸುತ್ತದೆ ಎಂದು ನುಡಿದರು.
ಮಾರ್ಚ್ 7 ರಿಂದ 16 ರವರೆಗೆ ಒಟ್ಟು 9 ದಿನಗಳ ಕಾಲ ಪಾದಯಾತ್ರೆಯಲ್ಲಿ ಸಗರ ಗ್ರಾಮದ
ಸುತ್ತಮುತ್ತಲಿನ ಹಳ್ಳಿಗಳ ನೂರಾರು ಭಕ್ತಾದಿಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಾದಯಾತ್ರೆ ಕಮಿಟಿ ತಿಳಿಸಿದೆ.
ಈ ಸಂದರ್ಭದಲ್ಲಿ ಕಮಿಟಿಯ ಸದಸ್ಯರಾದ ಮಲ್ಲಿಕಾರ್ಜುನ ಕೊಬ್ರಿ,ನಾಗರಾಜ ಕೂಡ್ಲೂರು,ದೇವೇಂದ್ರಪ್ಪ ಕೂಡ್ಲೂರು,ಶರಣಯ್ಯ ಶಾಸ್ತ್ರಿ,ನಾನಾಗೌಡ ಕೂಡ್ಲುರ, ಚಂದಪ್ಪ ಸೂಗುರ,ಅಡಿವಪ್ಪ ಬಸ್ಸಾ ಸೇರಿದಂತೆ ಇನ್ನಿತರರು ಹಾಜರಿದ್ದರು.
