ಸಪ್ಟೆಂಬರ್ 6 ರಂದು ಶಿಕ್ಷಕರ ದಿನಾಚರಣೆ.

ಸಪ್ಟೆಂಬರ್ 6 ರಂದು ಶಿಕ್ಷಕರ ದಿನಾಚರಣೆ.

ಸಪ್ಟೆಂಬರ್ 6 ರಂದು ಶಿಕ್ಷಕರ ದಿನಾಚರಣೆ.

 ಶಹಾಪುರ : ಬರುವ ಸಪ್ಟೆಂಬರ್ 6 ರಂದು ಸರ್ಕಾರಿ ಪ್ರೌಢಶಾಲೆ ಶಿರವಾಳ ಶಾಲಾ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ವಲಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲಣ್ಣ ಹೊಸಮನಿ ಪ್ರಕಟಣೆಗೆ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಎನ್.ಸಿ.ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅನುಸೂಯ ಚಲುವಾದಿ ವಿಶೇಷ ಉಪನ್ಯಾಸ ನೀಡಲಿದ್ದಾರೆ,ಮುಖ್ಯ ಅತಿಥಿಗಳಾಗಿ ನಾಗಣಗೌಡ ಹಿರೇಗೌಡರ,ಶಹಾಪೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರನಾಥ್ ಹೊಸಮನಿ,ಮಾಜಿ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ, ಸಿ ಎಸ್ ಭೂಸನೂರಮಠ,ಹಿರಿಯ ಪತ್ರಕರ್ತ ಈರಣ್ಣ ಹಾದಿಮನಿ,ಶಿಕ್ಷಕಿ ಕಾವೇರಿ ಪಾಟೀಲ್,ಪಾರ್ವತಿ ಜೋಗುರ, ಮಾನಪ್ಪ ಹೂಗಾರ,ಸುರೇಶ್ ಬಾಬು ಅರಣಿ,ಸಾಯಬಣ್ಣಪುರ್ಲೆ, ಮಹೇಶ್ ಪತ್ತಾರ,ನಿಂಗಣ್ಣಗೌಡ, ಶರಣಪ್ಪ ಚಪಾಟ್ಲಿ, ಭಾಗವಹಿಸಲಿದ್ದಾರೆ.