ಮುಂದುವರೆದ ರೈತರ ಪ್ರತಿಭಟನೆ, ಸ್ಪಂದಿಸದ ಸರಕಾರ

ಮುಂದುವರೆದ ರೈತರ ಪ್ರತಿಭಟನೆ, ಸ್ಪಂದಿಸದ ಸರಕಾರ

ಮುಂದುವರೆದ ರೈತರ ಪ್ರತಿಭಟನೆ, ಸ್ಪಂದಿಸದ ಸರಕಾರ

ಶಹಪುರ : ರೈತರು ಬೆಳೆದ ಬೇಸಿಗೆ ಬೆಳೆಗೆ ಬಸವ ಸಾಗರ ಆಣೆಕಟ್ಟಿನಿಂದ ನೀರು ಒದಗಿಸುವ ನಿಟ್ಟಿನಲ್ಲಿ ಕಾಲುವೆಗಳಿಗೆ ಏಪ್ರಿಲ್ 15 ರವರೆಗೆ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಮಹೇಶ್ ಗೌಡ ಸುಬೇದಾರ ಆಗ್ರಹಿಸಿದ್ದಾರೆ.

ತಾಲೂಕಿನ ಭೀಮರಾಯನ ಗುಡಿಯ ಕೃಷ್ಣ ಭಾಗ್ಯ ಜಲ ನಿಗಮ ಮುಖ್ಯ ಕಚೇರಿಯ ಮುಂದೆ ರೈತರು ಕಳೆದ ಒಂದು ವಾರಗಳಿಂದ ಧರಣಿ ಸತ್ಯಾಗ್ರಹ ನಡೆಸಿದರು, ಸರಕಾರವಾಗಲಿ,ಅಧಿಕಾರಿಗಳಾಗಲಿ ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ, ಒಂದು ವೇಳೆ ರೈತರು ಕಣ್ಣೀರು ಸುರಿಸಿದರೆ ಈ ಶಾಪ ಸರ್ಕಾರಕ್ಕೆ ತಟ್ಟುತ್ತದೆ ಎಂದು ಕಠೋರವಾಗಿ ನುಡಿದರು.

ರೈತರು ಜಲಾಶಯದಲ್ಲಿರುವ ನೀರನ್ನು ನಂಬಿ ಬೇಸಿಗೆ ಬೆಳೆ ಬಿತ್ತನೆ ಮಾಡಿದ್ದಾರೆ,ಆದರೆ ದಿಡೀರನೆ ನೀರು ಬಂದ್ ಮಾಡಿದರೆ, ಜಾನುವಾರಗಳಿಗೆ ಹಾಗೂ ಬೆಳೆಗಳಿಗೆ ತುಂಬಾ ತೊಂದರೆಯಾಗುತ್ತದೆ, ಬೆಳೆದ ಬೆಳೆ ಸಂಪೂರ್ಣ ಒಣಗಿ ಹೋಗುವ ಸ್ಥಿತಿಯಲ್ಲಿದೆ. ಸಂದರ್ಭಲ್ಲಿ ಹಲವಾರು ರೈತ ಸಂಘದ ಪದಾಧಿಕಾರಿಗಳು ಹಿರಿಯ ಮುಖಂಡರು ಹಾಜರಿದ್ದರು.