ಪತ್ರಕರ್ತರ ಹಿತಕ್ಕಾಗಿ ರಾಜ್ಯ ಬದ್ಧ: ಶರಣಪ್ರಕಾಶ ಪಾಟೀಲ"

ಪತ್ರಿಕಾ ದಿನಾಚರಣೆ ಮತ್ತು ಶ್ರೀ ಲಿ.ಬಿ.ಮಹಾದೇವಪ್ಪ ಸ್ಮರಣಾರ್ಥ ಪ್ರಶಸ್ತಿ ಪ್ರದಾನ
ಸೇಡಂ: ದಿನಾಂಕ: 19 ಜುಲೈ 2025 ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತ ಶ್ರೀ ಲಿ.ಬಿ. ಮಹಾದೇವಪ್ಪ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, "*ಪತ್ರಿಕೋದ್ಯಮ ಇಂದು ಸಂಕೀರ್ಣತೆಗಳನ್ನು ಎದುರಿಸುತ್ತಿರುವ ತಿರುವುಮಟ್ಟದ ಹಂತದಲ್ಲಿದೆ. ಗ್ರಾಮೀಣ ಪತ್ರಕರ್ತರ ಸೇವೆಯನ್ನು ಗುರುತಿಸಿ, ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಉಚಿತ ಬಸ್ ಪಾಸ್ ಯೋಜನೆ ಹಾಗೂ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ತಂದಿರುವುದು ಅವರ ಬಗ್ಗೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ," ಎಂದು ಹೇಳಿದರು.
ಅಲ್ಲದೆ ಪತ್ರಕರ್ತರ ವೇತನದ ಹಕ್ಕುಗಳ ಕುರಿತಾಗಿ ಕೇಂದ್ರ ಮಟ್ಟದಲ್ಲಿ ಕಾನೂನಾತ್ಮಕ ಕ್ರಮಗಳು ಅಗತ್ಯವೆಂದು ತಿಳಿಸಿದರು. ರಾಜ್ಯ ಸರ್ಕಾರವು ಪತ್ರಕರ್ತರ ಬೇಡಿಕೆಗಳನ್ನು ಮನಗಂಡು ಮುಂದಿನ ದಿನಗಳಲ್ಲಿ ಸೂಕ್ತ ಯೋಜನೆಗಳನ್ನು ರೂಪಿಸಲಿದೆ ಎಂದರು.
ಈ ಸಂದರ್ಭದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಸ್ಥಳೀಯ ಸಂಪಾದಕರಾದ ದೇವಯ್ಯ ಗುತ್ತೇದಾರ್ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ಪ್ರತಿನಿಧಿ ಸುಭಾಷ ಬಣಗಾರ ಅವರಿಗೆ ಶ್ರೀ ಲಿ.ಬಿ.ಮಹಾದೇವಪ್ಪ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ವಹಿಸಿದ್ದರು. ವೇದಿಕೆಯಲ್ಲಿ ಡಾ. ಶಿವರಂಜನ್ ಸತ್ಯಂ ಪೆಟ್, ಸಂಗಮನಾಥ, ಸಿದ್ದಯ್ಯ ಸ್ವಾಮಿ ಮಲಕೂಡ, ಪತ್ರಕರ್ತ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಪತ್ರಕರ್ತರು ಭಾಗವಹಿಸಿದ್ದರು.
ಸೇಡಂನ ಪತ್ರಿಕೋದ್ಯಮ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆ ಪಡುವ ವಿಷಯವಾಗಿದೆ, ಎಂದು ಎಲ್ಲರು ಅಭಿಪ್ರಾಯಪಟ್ಟರು.