ಅ13 ಮತ್ತು 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ :..

ಅ13 ಮತ್ತು 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ :..

ಅ13 ಮತ್ತು 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ :.

ಶಹಾಬಾದ : - ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14 ರಂದು ನಡೆಯುವ ಜಿಲ್ಲಾ ಮಟ್ಟದ ಧಮ್ಮಕ್ರಾಂತಿ ಉತ್ಸವ ಯಶಸ್ವಿಗೆ ಶಹಾಬಾದ ತಾಲೂಕು ಮಟ್ಟದ ಪೂರ್ವಭಾವಿ ಸಭೆ ಜರುಗಿತು. 

ದಸಂಸ ರಾಜ್ಯ ಸಂ. ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ಸಾಕಷ್ಟು ಪ್ರಯತ್ನಗಳ ನಡುವೆಯೂ ಬೌದ್ಧರು ಎಂದು ಜಾತಿ ಪ್ರಮಾಣ ಪತ್ರ ನೀಡಲು ಸಾಧ್ಯವಾಗಿಲ್ಲ, 

ಸನ್ನತಿ (ಕನಗನಹಳ್ಳಿ) ಕರ್ನಾಟಕ ಬೌದ್ಧರ ಪವಿತ್ರ ಸ್ಥಳ ಹೆಸರಿಗೆ ಮಾತ್ರ ಎಂಬಂತೆ ಸನ್ನತ್ತಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸರ್ಕಾರ ಈ ಐತಿಹಾಸಿಕ ಕ್ಷೇತ್ರದ ಬಗ್ಗೆ ನಿರ್ಲಕ್ಷ ತೋರುತ್ತಿರುವುದು ವಿಷಾಧನೀಯ ಎಂದರು.

ಭಾರತೀಯ ಬೌದ್ಧ ಮಹಾಸಭಾದ ಅಧ್ಯಕ್ಷ ಸೂರ್ಯಕಾಂತ ನಿಂಬಾಳ್ಕರ ಮಾತನಾಡಿ, 

13 ರಂದು ಕಲಾತ್ಮಕ ನಾಟಕ ಹಾಗೂ ಸಾಂಸ್ಕಂತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.14 ರಂದು ಧಮ್ಮದೀಕ್ಷಾ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗುವುದು. ಬೌದ್ದ ಭಂತೇಜಿಗಳು, ಸಾಮಾಜಿಕ ಕಾರ್ಯಕರ್ತರು, ಬುದ್ದಿ ಜೀವಿಗಳು 25 ರಿಂದ 30 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು. 

ಈ ಸಭೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರ, ಕದಸಂಸ ಜಿಲ್ಲಾ ಸಂಚಾಲಕ ಸುರೇಶ ಮೆಂಗನ, ದಿಗಂಬರ ಬೆಳಮಗಿ, ಎಸ್ ಎಸ್ ತಾವಡೆ, ಸಂತೋಷ ಮೇಲಿನಮನಿ, ದಿನೇಶ ದೊಡ್ಡಮನಿ, ಪ್ರಕಾಶ ಔರಾದ್ಕರ, ದೇವೆಂದ್ರ ಸಿನ್ನೂರ್, ರಾಜು ಕೊರಳಿ, ಅಶೋಕ ವೀರನಾಯಕ, ಬಸವರಾಜ ಮಯೂರ, ಕೃಷ್ಣಪ್ಪ ಕರಣಿಕ, ಅಲ್ಲಮಪ್ರಭು ಮಸ್ಕಿ, ಶಿವಶಾಲ ಪಟ್ಟಣಕರ, ಹರಿಶ್ಚಂದ್ರ ಕೋಬಾಳಕರ, ಮಲ್ಲಿಕಾರ್ಜುನ ಕಟ್ಟಿಮನಿ,ಪ್ರವೀಣ ರಾಜನ ಪುನೀತ ಹಳ್ಳಿ, ಮೋಹನ ಹಳ್ಳಿ, ರಾಜು ನಾಟೆಕರ ಸೇರಿದಂತೆ ಅನೇಕರು ಇದ್ದರು.

ಶಹಾಬಾದ್ ವರದಿ ನಾಗರಾಜ್ ದಂಡಾವತಿ