ಮಕ್ಕಳಿಗೆ ವಿಜ್ಞಾನದ ಮಹತ್ವ ತಿಳಿಸಿ - ಚಂದ್ರಶೇಖರ ಆರಬೋಳ
ಮಕ್ಕಳಿಗೆ ವಿಜ್ಞಾನದ ಮಹತ್ವ ತಿಳಿಸಿ - ಚಂದ್ರಶೇಖರ ಆರಬೋಳ
ಶಹಾಪುರ : ಭಾರತ ದೇಶದಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವುದರ ಜೊತೆಗೆ ಇಂದಿನ ಮಕ್ಕಳಿಗೆ ವಿಜ್ಞಾನದ ಮಹತ್ವವನ್ನು ತಿಳಿಪಡಿಸುವುದು ಬಹಳ ಮುಖ್ಯವಾಗಿದೆ ಎಂದು ಹಿರಿಯ ಮುಖಂಡರಾದ ಚಂದ್ರಶೇಖರ ಸಾಹು ಆರಬೋಳ ಹೇಳಿದರು.
ನಗರದ ಲಿಟಲ್ ಫ್ಲವರ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ ವಿಶ್ವ ವಿಜ್ಞಾನ ದಿನಾಚರಣೆಯ ಪ್ರಯುಕ್ತ 2025-26 ನೇ ಸಾಲಿನ ಆವಿಷ್ಕಾರ ವಿಜ್ಞಾನ ಮೇಳ ವೀಕ್ಷಣೆ ಮಾಡುತ್ತಾ ಮಾತನಾಡಿದರು,ನಂತರ ಮಕ್ಕಳು ತಯಾರಿಸಿದ ಪ್ರಾಜೆಕ್ಟ್ ವೀಕ್ಷಣೆ ಮಾಡಿ ಖುಷಿಪಟ್ಟು ವಿದ್ಯಾರ್ಥಿಗಳಿಂದ ಅದರ ಮಾಹಿತಿ ಪಡೆದುಕೊಂಡರು.
ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಆದೋನಿ,ಮಾತನಾಡಿ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಹಿರಿಯ ವಿಜ್ಞಾನಿಗಳ ಸ್ಮರಣೆ ಮಾಡಿಕೊಂಡು ಸಿ.ವಿ.ರಾಮನ್ ಅವರ ಸಾಧನೆ ಕುರಿತು ಹೊಗಳಿದರು.
ವೈಜ್ಞಾನಿಕ ಹಾಗೂ ಪ್ರಗತಿಪರ ಚಿಂತನೆಗಳನ್ನು ಪ್ರೋತ್ಸಾಹಿಸುವುದು ಹಾಗೂ ಭಾರತದ ವಿಜ್ಞಾನಿಗಳ ಜೀವನ ಚರಿತ್ರೆ ಮಕ್ಕಳಿಗೆ ತಿಳಿಪಡಿಸಿ ಅವರಿಗೆ ಗೌರವ ಕೊಡುವುದನ್ನು ಇಂದಿನ ಮಕ್ಕಳಿಗೆ ಶಿಕ್ಷಕರು ಕಲಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಈ ಸಮಾರಂಭದ ವೇದಿಕೆಯ ಮೇಲೆ ಪ್ರಾಂಶುಪಾಲರಾದ ಸುಜ್ಞಾನಿ ಎಸ್.ಆಧೋನಿ, ಸೇರಿದಂತೆ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕಿ ವೃಂದದವರು ಉಪಸ್ಥಿತರಿದ್ದರು. ಮಕ್ಕಳು ತಯಾರಿಸಿದ ಪ್ರಾಜೆಕ್ಟ ಅನ್ನು ನೋಡುಗರ ಗಮನ ಸೆಳೆಯಿತು.
ಈ ಕಾರ್ಯಕ್ರಮದಲ್ಲಿ ಅನ್ನಪೂರ್ಣೇಶ್ವರಿ ಮತ್ತು ವಿರಾಟ್ ಅವರಿಂದ ಪ್ರಾರ್ಥನೆ ಗೀತೆ ನೆರವೇರಿತು, ಲೋಕೇಶ್ ಮತ್ತು ಅಮೋಘ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು,ಚಂದ್ರಕಲಾ ಸ್ವಾಗತಿಸಿ ವಂದಿಸಿದರು.
