ಮಣ್ಣೂರ ಆಸ್ಪತ್ರೆಯ ಸಮಾಜಿಕ ಕಾರ್ಯ ಶ್ಲಾಘನೀಯ: ಬಿ ಫೌಜೀಯಾ ತರನ್ನುಮ್

ಮಣ್ಣೂರ ಆಸ್ಪತ್ರೆಯ ಸಮಾಜಿಕ ಕಾರ್ಯ ಶ್ಲಾಘನೀಯ:  ಬಿ ಫೌಜೀಯಾ ತರನ್ನುಮ್

ಮಣ್ಣೂರ ಆಸ್ಪತ್ರೆಯ ಸಮಾಜಿಕ ಕಾರ್ಯ ಶ್ಲಾಘನೀಯ: ಬಿ ಫೌಜೀಯಾ ತರನ್ನುಮ್

ಕಲಬುರಗಿ : ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟಾಗ ಎನಾದರೂ ಸಾಧನೆ ಮಾಡಲು ಸಾಧ್ಯ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ ಫೌಜೀಯಾ ತರನ್ನುಮ್ ಹೇಳಿದರು.

ನಗರದ ಖಾಸಗಿ ಹೊಟೆಲ ನಲ್ಲಿ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ವತಿಯಿಂದ ಕಲಬುರಗಿಯ ಎಸ್.ಆರ್ ಎನ್ ಮಹೆತಾ ಶಾಲೆಯ 11 ವಿದ್ಯಾರ್ಥಿಗಳು ನಾಸಾದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಗೌರವ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ 11 ಮಕ್ಕಳು ನಾಸಾದಲ್ಲಿ ಭಾಗವಹಿಸಿ ಸಾಧನೆ ಮಾಡಿರುವುದೇ ಹೆಮ್ಮೆಯಾಗಿದೆ ಎಂದು ಹೇಳಿದರು.

ಮಣ್ಣೂರ ಆಸ್ಪತ್ರೆ ಆರೋಗ್ಯ ಸೇವೆ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಕೂಡ ಅನೇಕ ಜನಪರ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ವಾಗಿದೆ ಎಂದು ಹೇಳಿದರು.

ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ.ಡಿ. ಮಾತನಾಡಿಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸತತ ಅಭ್ಯಾಸ ಮತ್ತು ಪರಿಶ್ರಮದಿಂದ ಮಾತ್ರ ಗುರಿ ತಲುಪಲು, ಅಭಿವೃದ್ಧಿ ಹೊಂದಲು ಸಾಧ್ಯ , ವಿದ್ಯಾರ್ಥಿಗಳು ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಉತ್ತಮ ಕೌಶಲ ಹೊಂದಿದ್ದಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು' ಎಂದು ತಿಳಿಸಿದರು.

ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರುಕ್ ಅಹ್ಮದ ಮಣ್ಣೂರ ಮಾತನಾಡಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಿವೆ ಎಂದು ವಿದ್ಯಾರ್ಥಿಗಳು ಕೀಳರಿಮೆ ಹೊಂದಬಾರದು. ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿಸಿಕೊಂಡು ಮರಳಿ ಯತ್ನವ ಮಾಡಿದ್ದಲ್ಲಿ ಜಯ ಸಾಧಿಸಬಹುದು' ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮೊಹಿನ್ ಖಾಜಿ, ಎಸ್.ಆರ್.ಎನ್ ಮಹೆತಾ ಶಾಲೆಯ ಮುಖ್ಯಸ್ಥರಾದ ಪ್ರಿತಮ ಮಹೆತಾ, ಚಕೂರ ಮಹೆತಾ, ಮಹ್ಮದ ಇಸ್ಮಾಯಿಲ್, ವಿಕ್ಕಿ ಪವಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿಲ್ಲ ಮುಂದುವರೆದಿದ್ದೇವೆ ಎನ್ನುವುದಕ್ಕೆ ಈ ಭಾಗದ 11 ಮಕ್ಕಳು ನಾಸಾದಲ್ಲಿ ಭಾಗವಹಿಸಿ ಸಾಧನೆ ಮಾಡಿರುವುದೇ ತಾಜಾ ಉದಾಹರಣೆಯಾಗಿದೆ .ಡಾ.ಫಾರುಕ್ ಅಹ್ಮದ ಮಣ್ಣೂರ ,ಮುಖ್ಯಸ್ಥರು ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಕಲಬುರಗಿ

ಜೀವನದಲ್ಲಿನ ಕೀಳರಿಮೆ ತೆಗೆಯಬೇಕು, ಯಶಸ್ವಿಯಾಗಬೇಕಾದರೆ ಮೊದಲು ಒಂದು ಯೋಜನೆ ಹಾಕಿಕೊಳ್ಳಬೇಕು ಅದರಂತೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು, ಮೊದಲು ಗುರಿ ಸ್ಪಷ್ಟವಾಗಿರಬೇಕು ಅಂದಾಗ ಸಾಧನೆ ಮಾಡಲು ಸಾಧ್ಯ

ಜೈಶಾ ಫಾಲಕ್ ,ಎಸ.ಆರ್.ಎನ್ ಮಹೆತಾ ಶಾಲೆಯ ವಿದ್ಯಾರ್ಥಿನಿ