ಸಾಹಿತಿ, ಶಿಕ್ಷಕ,ಮಹಾಂತಯ್ಯಾ ಕೆ.ಮಠ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಸಾಹಿತಿ, ಶಿಕ್ಷಕ,ಮಹಾಂತಯ್ಯಾ ಕೆ.ಮಠ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಸಾಹಿತಿ, ಶಿಕ್ಷಕ,ಮಹಾಂತಯ್ಯಾ ಕೆ.ಮಠ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮೈಸೂರ :  ಮೈಸೂರು,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ,ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶನ (ರಿ) ಕರ್ನಾಟಕ ವಿಜಯನಗರ ಜಿಲ್ಲೆ,ಹಗರಿಬೊಮ್ಮನಹಳ್ಳಿ ತಾಲೂಕಿನ,ಕಡಲಬಾಳು ಗ್ರಾಮದ ಸಹಯೋಗದಲ್ಲಿ ದಿನಾಂಕ 03-11-2024ನೇ ಭಾನುವಾರ ದಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನ ಮೈಸೂರುನಲ್ಲಿ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಜ್ಯಮಟ್ಟದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಿಲಿದ್ದು,

ಕಲಬುರಗಿ ಜಿಲ್ಲೆ ಮಳನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ - ಶಿಕ್ಷಕರು, ಮಕ್ಕಳ ಸಾಹಿತಿ ಶ್ರೀ ಮಹಾಂತಯ್ಯಾ ಕೆ.ಮಠ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಡಾ.ನಾಗರಾಜ ತಂಬ್ರಹಳ್ಳಿ ತಿಳಿಸಿದ್ದಾರೆ.

ಮಠ ಅವರು ಕನ್ನಡ ನಾಡು ನುಡಿ, ನೆಲ, ಜಲ, ಸಾಂಸ್ಕೃತಿಕ, ಸಾಹಿತ್ಯ, ಸಾಮಾಜಿಕ ಸಂಶೋಧನೆ, ಶಿಕ್ಷಣ ಕೃಷಿ, ಯೋಗ, ಪತ್ರಿಕೋದ್ಯಮ, ವೈದ್ಯಕೀಯ, ನೃತ್ಯ,ಕಲಾ ಮತ್ತು ನಾಟಕ ಸಿನೆಮಾ, ಮುಂತಾದ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ .

  ತಮ್ಮ ಅಪಾರ ಜ್ಞಾನ ಮತ್ತು ಅದ್ವಿತೀಯ ಪ್ರತಿಭೆಯನ್ನು ಗುರುತಿಸಿ ನಮ್ಮ ಸಂಸ್ಥೆಯ ವತಿಯಿಂದ " ಕನ್ನಡ ರಾಜ್ಯೋತ್ಸವ" ಪ್ರಶಸ್ತಿಯನ್ನು ಗೌರವ ಪೂರ್ವಕವಾಗಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.