ಹೈ ಮಾಸ್ಕ್ ಬೀದಿ ದೀಪಕ್ಕೆ ಚಾಲನೆ.

ಹೈ ಮಾಸ್ಕ್ ಬೀದಿ ದೀಪಕ್ಕೆ ಚಾಲನೆ.

ಹೈ ಮಾಸ್ಕ್ ಬೀದಿ ದೀಪಕ್ಕೆ ಚಾಲನೆ.

ಚಿಟಗುಪ್ಪಾ : ನಗರದ ಅಭಿವೃದ್ಧಿಗಾಗಿ ಟೊಂಕ ಕಟ್ಟಿಕೊಂಡು ಕೆಲಸ ಮಾಡುತ್ತೇನೆ ಎಂದು ಬಿಎಸ್ಎಸ್ಕೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ ರವರು ಹೇಳಿದರು.

ನಗರದ ವಾರ್ಡ್ ನಂಬರ್ -23ರ ಫಾತ್ಮಾಪೂರದಲ್ಲಿ ಹೈ ಮಾಸ್ಕ್ ಬೀದಿ ದೀಪಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈಗಾಗಲೇ ಕ್ಷೇತ್ರದ ಶಾಸಕರಾದ ಡಾ. ಸಿದ್ದು ಪಾಟೀಲ ರವರು ನಗರದ ಅಭಿವೃದ್ಧಿಗಾಗಿ ಅನೇಕ ಕಾಮಗಾರಿಗಳಿಗೆ ಅನುದಾನ ನೀಡಿದ್ದಾರೆ. ಭೂಮಿ ಪೂಜೆ ಮಾಡಿದರೆ. ವಿಶೇಷವಾಗಿ 

ಪ್ರಜಾಸೌಧ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಾಗಿದೆ. ತಾಲೂಕು ಪಂಚಾಯತ್, ಅರಣ್ಯ ಇಲಾಖೆಗಳ 

ಕಟ್ಟಡಕ್ಕಾಗಿ ಶೀಘ್ರದಲ್ಲಿ ಶಾಸಕರು ಅನುದಾನ ಬಿಡುಗಡೆ ಮಾಡಲಿದ್ದಾರೆ. ಸಮುದಾಯ ಆಸ್ಪತ್ರೆ ಮೇಲ್ದರ್ಜೆಗೆಸುವ ಮೂಲಕ ತಾಲೂಕ ಆಸ್ಪತ್ರೆಯಾಗಿ ಮಾಡುವ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣ ಮೇಲ್ದರ್ಜೆಗೆ ಏರಿಸಲು ಅನುದಾನ ನೀಡಿದ್ದಾರೆ. ನಗರದ ಸ್ವಚ್ಛತೆಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ರಸ್ತೆ,ಕಾಲುವೆಗಳು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ವಿವಿಧ ವೃತ್ತಗಳಲ್ಲಿ 

ಹೈ ಮಾಸ್ಕ್ ಬೀದಿಗಳು ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ನಗರದ ಹಾಗೂ ತಾಲೂಕಿನ ಬೆಳವಣಿಗೆಗಾಗಿ ಶಾಸಕರು ಪ್ರಮುಖವಾಗಿ ಆದ್ಯತೆ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ನಾವು ಸಹ ಶಾಸಕರ ಜೊತೆಗೆ ಕೈಜೋಡಿಸಿ ಸಮಗ್ರ ಚಿಟಗುಪ್ಪಾ ತಾಲೂಕಿನ ಅಭಿವೃದ್ಧಿಗಾಗಿ ದುಡಿಯುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪಾ ಗಡಮಿ, ಶಾಮರಾವ ಭೂತಾಳೆ, ಪರಮೇಶ ಬಬಡಿ,ಬಸಯ್ಯ ಸ್ವಾಮಿ, ಕಿರಣ ಭೋವಿ,

ಗೋರಖನಾಥ, ಅಮರ ರೆಡ್ಡಿ, ರಮೇಶ, ಹಣಮಂತ, ಸುಭಾಷ ಜಮಾದಾರ, ನರಸಪ್ಪ ನರನಾಳ, ವಿಜಯ ಕುಮಾರ ಸ್ವಾಮಿ, ಲಕ್ಷ್ಮಣ ಭೋವಿ, ತಿಪ್ಪಣ್ಣ ಭೋವಿ, ಕೃಷ್ಣ ಭೋವಿ, ನರೇಶ ಭೋವಿ, ಪ್ರವೀಣ ರಾಜಾಪುರ,

ಬಸವರಾಜ್ ಭೋವಿ, ವಿಶ್ವನಾಥ್, ಶಿವಾಜಿ, ಆನಂದ ರೆಡ್ಡಿ, ರಾಹುಲ್, ಈಶ್ವರ್, ಅನಿಲ ಸೇರಿದಂತೆ ಗ್ರಾಮದ ಗಣ್ಯರು, ನಾಗರಿಕರು ಉಪಸ್ಥಿತರಿದ್ದರು.

ವರದಿ - ಸಂಗಮೇಶ ಎನ್ ಜವಾದಿ.