ಜೇವರ್ಗಿ, ಯಡ್ರಾಮಿ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಸಮದ ಪಟೇಲ್ ಅವರಿಗೆ ಡಾ. ಮಲ್ಲಿಕಾರ್ಜುನ ಎಸ್. ಗಂವ್ಹಾರ ಮನವಿ
ಜೇವರ್ಗಿ, ಯಡ್ರಾಮಿ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಸಮದ ಪಟೇಲ್ ಅವರಿಗೆ ಡಾ. ಮಲ್ಲಿಕಾರ್ಜುನ ಎಸ್. ಗಂವ್ಹಾರ ಮನವಿ
ಕಲಬುರಗಿ: ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನಲ್ಲಿ ಬರುವ ರೈತರ ಸಂಪರ್ಕ ಕೇಂದ್ರಗಳ ಅಧಿಕಾರಿಗಳು ರೈತರಿಗೆ ವಿತರಿಸಬೇಕಾಗಿದ್ದ. ರಾಸಾಯನಿಕ ಬೆಳೆಗೆ ಸಿಂಪಡಿಸಬೇಕಾದ ರಾಸಾಯನಿಕ ಔಷಧಿಗಳು, ರಾಸಾಯನಿಕ ದಾಸ್ತಾನುಗಳು ಮತ್ತು ರೈತರಿಗೆ ವಿತರಿಸಬೇಕಾದ ಸ್ಪಿಂಕ್ಲರ್ ಪೈಪುಗಳು, ಸರಕಾರಿ ನಿಯಮದ ಪ್ರಕಾರ ವಿತರಿಸದೇ ಸರಕಾರಿ ಧಾರಣ ಯ ಪ್ರಕಾರ ಮಾರಾಟ ಮಾಡದೇ ದುಡ್ಡು ಕೊಟ್ಟವರಿಗೆ ಮಾತ್ರ ವಿತರಿಸುತ್ತಿದ್ದಾರೆ. ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಸಹ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಎಸ್. ಗಂವ್ಹಾರ ಅವರು ಕೃಷಿ ಅಧಿಕಾರಿ ಸಮದ ಪಟೇಲ್ ಅವರಿಗೆ ಮನವಿ ಸಲ್ಲಿಸಿದರು.
ಈ ರೀತಿ ರೈತರ ಜೊತೆ ಮೋಸದ ಚಲ್ಲಾಟ ಅಧಿಕಾರಿಗಳು ಆಡುತ್ತಿದ್ದಾರೆ. ರೈತರು ಈ ದೇಶದ ಬೆನ್ನೆಲುಬು ಎಂದು ಹೇಳಿಕೊಂಡು ರಾಜಕೀಯವರು ರಾಜ್ಯಭಾರ ಮಾಡುತ್ತಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ರೈತರ ರಕ್ತ ಹೀರುತ್ತಿದ್ದಾರೆ. ಈ ಅಧಿಕಾರಿಗಳಿಗೆ ಹೇಳುವರು ಮತ್ತು ಕೇಳುವರು ಯಾರು ಇಲ್ಲದಂತಾಗಿದೆ. ಮತ್ತು ರೈತರಿಗೆ ಸರಿಯಾದ ಸಮಯಕ್ಕೆ ಸರಿಯಾದ ವಸ್ತುಗಳನ್ನು ನೀಡದೇ ಮತ್ತು ಸರಕಾರದ ದರವನ್ನು ಬಿಟ್ಟು ಹೆಚ್ಚಿನ ದರವನ್ನು ವಸೂಲಿ ಮಾಡಿ ರೈತರಿಗೆ ಮತ್ತು ಸರಕಾರಕ್ಕೆ ಮೋಸಮಾಡುತ್ತಿದ್ದಾರೆ. ಹಾಗೆ ರೈತ ಸಂಪರ್ಕ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ಬರುವದಿಲ್ಲ. ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಕಾಲಹರಣ ಮಾಡುತ್ತಿರುವ ಈ ಅಧಿಕಾರಿಗಳ ಮೇಲೆ ತಾವು ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಬೇಕು ಅದೇ ರೀತಿ ರೈತರಿಗೆ ಸಿಗಬೇಕಾದ ಗುಣಮಟ್ಟದ ಸಾಮಾಗ್ರಿಗಳನ್ನು ಮತ್ತು ರಾಸಾಯನಿಕ ವಸ್ತುಗಳನ್ನು ನೀಡಲು ತಾವು ಸೂಚನೆ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವೇಂಕಟೇಶ ಪಟೇದಾರ, ಸಾಯಬಣ ಪೂಜಾರಿ, ಬನ್ನಯ್ಯಾ ಸ್ವಾಮಿ, ರಾಹುಲ ಇಜೇರಿ ಸೇರಿದಂತೆ ಇತರರು ಇದ್ದರು.