ವಿದ್ಯಾನಗರದ ಭಕ್ತರಿಂದ ಗದ್ದುಗೆ ಮಠಕ್ಕೆ ಭೇಟಿ – ಶ್ರಾವಣ ಮಾಸ ಪುರಾಣ ಪ್ರವಚನಕ್ಕೆ ಗುರುಗಳಿಂದ ಅಪ್ಪಣೆ

ವಿದ್ಯಾನಗರದ ಭಕ್ತರಿಂದ ಗದ್ದುಗೆ ಮಠಕ್ಕೆ ಭೇಟಿ – ಶ್ರಾವಣ ಮಾಸ ಪುರಾಣ ಪ್ರವಚನಕ್ಕೆ ಗುರುಗಳಿಂದ ಅಪ್ಪಣೆ
ವಿದ್ಯಾನಗರ: ಇಂದು ಗುರುಪೂರ್ಣಿಮೆಯ ಪಾವನ ದಿನದಂದು ವಿದ್ಯಾನಗರದ ವೆಲ್‌ಫೇರ್ ಸೊಸೈಟಿಯ ಪದಾಧಿಕಾರಿಗಳು ಗದ್ದುಗೆ ಮಠಕ್ಕೆ ಭೇಟಿನೀಡಿ, ಗುರುಗಳಾದ ಶ್ರೀ ಚರಲಿಂಗ ಸ್ವಾಮಿಗಳ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭ, ಭಕ್ತರು ಈ ವರ್ಷದ ಶ್ರಾವಣ ಮಾಸದಲ್ಲಿ ವಿದ್ಯಾನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಾನಗಲ್ ಶ್ರೀ ಕುಮಾರಸ್ವಾಮಿಗಳ ಪುರಾಣ ಪ್ರವಚನ ನಡೆಯಲು ವಿನಂತಿಸಿ, ಗುರುಗಳಿಂದ ಅನುಮತಿ ಪಡೆದು ಸಂತೋಷ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿ ಗುರುಲಿಂಗಯ್ಯ ಮಠಪತಿ ಹಾಗೂ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಬಸವಂತರಾವ ಜಾಬಶೆಟ್ಟಿ ಉಪಸ್ಥಿತರಿದ್ದು, ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಆಚರಿಸಿದರು.