ಡಾ. ಎಸ್.ಎಸ್. ಗುಬ್ಬಿ ಅಭಿನಂದನಾ ಸಮಿತಿ ಸಭೆ

ಡಾ. ಎಸ್.ಎಸ್. ಗುಬ್ಬಿ ಅಭಿನಂದನಾ ಸಮಿತಿ ಸಭೆ
ಕಲಬುರ್ಗಿ: ನಗರದ ಕಲಾ ಮಂಡಲದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕರು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಡಾ. ಎಸ್.ಎಸ್. ಗುಬ್ಬಿಯವರನ್ನು ಕಾರ್ಯಕ್ರಮದಅಭಿನಂದಿಸುವ ಸಮಾರಂಭ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ಡಾ. ಗುಬ್ಬಿಯವರು ಅಭಿನಂದನಾ ಸಮಿತಿಯ ಎಲ್ಲ ಪದಾಧಿಕಾರಿಗಳನ್ನು ಗೌರವಿಸಿ, ತಮ್ಮ ಅಭಿನಂದನೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಏರ್ಪಡಿಸಿದ್ದಕ್ಕಾಗಿ ಮನಃಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದರು. ತಮ್ಮ ಸಮರ್ಪಿತ ಹಾಗೂ ಸಾಧನಾಮಯ ಜೀವನದ ಬಗ್ಗೆ ಮಾತನಾಡಿದ ಅವರು, ಈ ಗೌರವದಿಂದ ಹೆಚ್ಚಾದ ಜವಾಬ್ದಾರಿಯ ಅರಿವಾಗಿದೆಯೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಗುಬ್ಬಿಯವರ ಸಂಪಾದನಾ ಕೃತಿಯ ಸಂಪಾದಕರಾದ ಪ್ರೊ. ಬಿ.ಎಚ್. ನಿರಗುಡಿ ಅವರನ್ನು ಹಾಗೂ ಸಂಪಾದಕ ಮಂಡಳಿಯ ಸಲಹಾ ಸಮಿತಿಯ ಸದಸ್ಯರಾದ ಡಾ. ವಿಜಯ್ ಕುಮಾರ್ ಪರುತೆ, ಶಿವಯ್ಯ ಸ್ವಾಮಿ ಅಲ್ಲೂರ್, ಡಾ. ಸಂಗಮೇಶ ಹಿರೇಮಠ, ಎಸ್.ಎಲ್. ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಉಪಸ್ಥಿತರಿರುವ ಎಲ್ಲ ಪದಾಧಿಕಾರಿಗಳು, ಡಾ. ಗುಬ್ಬಿಯವರ ಸಾಧನೆಯ ಮೆರೆ ಮೆರೆ ಮೆಲುಕು ಹಾಕುತ್ತಾ, ಈ ಸಾಧನೆಗೆ ತಮ್ಮ ಸಂತೋಷವನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ನಿರ್ವಹಿಸಿದ್ದನ್ನು ಎಲ್ಲರೂ ಪ್ರಶಂಸೆದರು.