ತಾಲ್ಲೂಕಿನ ಪ್ರಜಾಸೌಧಕ್ಕೆ ಅಡಿಗಲ್ಲು ಹಾಕಲು ಮುಖ್ಯಮಂತ್ರಿಗಳಿಗೆ ಆಗ್ರಹ
ತಾಲ್ಲೂಕಿನ ಪ್ರಜಾಸೌಧಕ್ಕೆ ಅಡಿಗಲ್ಲು ಹಾಕಲು ಮುಖ್ಯಮಂತ್ರಿಗಳಿಗೆ ಆಗ್ರಹ
ಶಹಾಬಾದ : - ಹೊಸ ತಾಲ್ಲೂಕ ಯಡ್ರಾಮಿ ಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಪ್ರಜಾಸೌಧ ಉದ್ಘಾಟನೆ ಮಾಡುತ್ತಿರುವುದು ಸಂತೋಷ ಆದರೆ ಶಹಾಬಾದ ತಾಲ್ಲೂಕಿನ ಪ್ರಜಾಸೌಧದ ಅಡಿಗಲ್ಲು ಶೀಘ್ರವಾಗಿ ಮಾಡುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡ ಕೃಷ್ಣಪ್ಪ ಕರಣಿಕ ಆಗ್ರಹಿಸಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರಾದಸಂಸ ವತಿಯಿಂದ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಹೊಸದಾಗಿ ತಾಲೂಕ ಘೋಷಣೆ ಮಾಡಿ, ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕವನ್ನು ಮೂರು ಭಾಗವಾಗಿ ಮಾಡಿ ಶಹಾಬಾದ, ಕಾಳಗಿ,ಹಾಗೂ ಚಿತ್ತಾಪೂರ ತಾಲ್ಲೂಕ ಎಂದು ವಿಭಜಿಸಿ ಸುಮಾರು 10 ವರ್ಷಗಳು ಕಳೆದುಹೋಗಿವೆ ಆದರೆ ಇಲ್ಲಿಯ ವರೆಗೂ ತಾಲ್ಲೂಕಿನಲ್ಲಿ 2-3 ತಾಲ್ಲೂಕ ಕಚೇರಿಗಳನ್ನು ಹೊರತುಪಡಿಸಿ ಉಳಿದ ಕಛೇರಿಗಳು ಪ್ರಾರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಆದ ಮೇಲೆ ಕಲಬುರಗಿ ಜಿಲ್ಲೆಯ ವಿಭಜಿತ ನೂತನ ತಾಲೂಕ ಕೇಂದ್ರಗಳಿಗೆ ಪ್ರಜಾಸೌಧ ನಿರ್ಮಿಸಲು ಜಿಲ್ಲಾಧಿಕಾರಿಗಳಿಗೆ ನೀಲಿ ನಕ್ಷೆಯನ್ನು ಕೂಡ ನೀಡಿದ್ದಿರಿ ಆದರೆ ಶಹಾಬಾದ ತಾಲೂಕಿನ ಪ್ರಜಾಸೌಧ ನೀರ್ಮಿಸಲು ಬೀರಪ್ಪನ ಬೆಟ್ಟದಲ್ಲಿ 27 ಎಕರೆ ಸರ್ಕಾರಿ ಜಮೀನಿನ ಮರಗೋಳ ಕಾಲೇಜ ಪಕ್ಕದಲ್ಲಿ ಇರುವ ಸರಕಾರಿ ಜಮೀನನ್ನು ತಾಲೂಕ ಆಡಳಿತ ಗುರುತಿಸಿದ್ದು ಅದನ್ನು ಹೈ-ಕ ಸಂಸ್ಥೆಯ ಎಸಎಸ. ಮರಗೋಳ ಕಾಲೇಜಿನವರು ತಮ್ಮ ಜಾಗವೆಂದು ತಿಳಿದು ಆ ಕುರಿತು ಕೋರ್ಟನಲ್ಲಿ ತಕರಾರು ಅರ್ಜಿ ಸಲ್ಲಿಸಿರುತ್ತಾರೆ ಆದರೆ ಸಂಪೂರ್ಣ ಜಾಗವು ಹೈ-ಕ ಸಂಸ್ಥೆಯ ಎಸಎಸ. ಮರಗೋಳ ಕಾಲೇಜಿಗೆ ನೀಡಿರುವುದಿಲ್ಲ, ಸಂಸ್ಥೆಗೆ ಕೇವಲ 4 ಎಕರೆ ನೀಡಿದ್ದಾರೆ, ಇನ್ನೂ ನಗರ ನೀರು ಸರಬರಾಜಿಗಾಗಿ ಸರಕಾರದ ಭೂಮಿಯನ್ನೆ ನೀಡಿದ್ದಾರೆ, ಕಾರಣ ತಾಲ್ಲೂಕ ಆಡಳಿತದ ವತಿಯಿಂದ ಗುರುತಿಸಿದ್ದ ಪಕ್ಕದ ಜಾಗದಲ್ಲೆ ಪ್ರಜಾಸೌಧಕ್ಕೆ ಅಡಿಗಲ್ಲು ಹಾಕಿ, ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಹೈ-ಕ ಶಿಕ್ಷಣ ಸಂಸ್ಥೆಯವರು ಶಹಾಬಾದ ಜನತೆಗೆ ಅನ್ಯಾಯ ಮಾಡಬಾರದು, ಸಂಸ್ಥೆಯವರು ಹಾಕಿದ ತಕರಾರು ಅರ್ಜಿ ವಾಪಸ ಪಡಿಬೇಕು ಇಲ್ಲವಾದರೆ ಶಹಾಬಾದ ತಾಲ್ಲೂಕಿನ ಸಾರ್ವಜನಿಕರ ಪರವಾಗಿ ಸಂಸ್ಥೆಯ ವಿರುದ್ದ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಯವರು, ಶಾಸಕರಾದ ಬಸವರಾಜ ಮತ್ತಿಮಡು ರವರು, ಮಾನ್ಯ ಜಿಲ್ಲಾಧಿಕಾರಿಗಳು ಹೊಸ ತಾಲ್ಲೂಕಿನಲ್ಲಿ ಎಲ್ಲಾ ಇಲಾಖೆಯ ಕಛೇರಿಗಳನ್ನು ಪ್ರಾರಂಭಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು
ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಪದಾದಿಕಾರಿಗಳಾದ ತಿಪ್ಪಣ್ಣ ಧನೇಕರ, ಜೈಭೀಮ ರಸ್ತಾಪೂರ, ಪುನೀತ ಹಳ್ಳಿ, ಸುನೀಲ ಮೆಂಗನ, ರಾಣೋಜಿ ಹಾದಿಮನಿ, ಭೀಮಾಶಂಕರ ಕಾಂಬಳೆ, ರಾಕೇಶ ಜಾಯಿ ಉಪಸ್ಥಿರಿದರು.
