ಸಗರನಾಡು ಶರಣ ಸಂಸ್ಕೃತಿಯ ಬೀಡು.

ಸಗರನಾಡು ಶರಣ ಸಂಸ್ಕೃತಿಯ ಬೀಡು.

ಸಗರನಾಡು ಶರಣ ಸಂಸ್ಕೃತಿಯ ಬೀಡು. 

ಶಹಪುರ : ಈ ಸಗರನಾಡು ಅತ್ಯಂತ ಶ್ರೇಷ್ಠ ಶರಣ ಸಂಸ್ಕೃತಿಯ ಬೀಡು,ಸಗರನಾಡಿನಲ್ಲಿ ಹಲವಾರು ಶರಣರು,ಸಾಧರು,ಸಂತರು,ಬಾಳಿ ಬದುಕಿದ ಈ ನಾಡಿನಲ್ಲಿ ಸಗರ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ಪ್ರಮುಖರು ಎಂದು ಮಾಗಣಗೇರಿ ಹಿರೇಮಠದ ಪರಮಪೂಜ್ಯರಾದ ಡಾ.ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ತಾಲೂಕಿನ ಸಗರ ಗ್ರಾಮ ಹಿರೇಮಠದ ಕರ್ತೃ ಪುರುಷ ಶ್ರೀ ಗುರುಲಿಂಗೇಶ್ವರ ಶಿವಾಚಾರ್ಯ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಲಿಂಗೈಕ್ಯ ಸೋಮಶೇಖರ ಶಿವಾಚಾರ್ಯರ ನೂತನ ಗದ್ದುಗೆ ಲೋಕಾರ್ಪಣೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗು ಧರ್ಮ ಸಭೆ ಉದ್ದೇಶಿಸಿ ಮಾತನಾಡಿ ಸೋಮಶೇಖರ ಶಿವಾಚಾರ್ಯರು ಶರಣ ಸಂಸ್ಕೃತಿಯಲ್ಲಿರುವ ಹತ್ತು ಹಲವು ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸಮಾಜ ಕಟ್ಟುವುದರ ಜೊತೆಗೆ ಅನ್ನ ಸಂತರ್ಪಣಾ ನಿತ್ಯ ದಾಸೋಹ ನಡೆಸುವ ಮಹಾಸಂಕಲ್ಪ ಹೊಂದಿದ್ದರು ಎಂದು ಹೇಳಿದರು.

ಶಹಪುರ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು ಮಾತನಾಡಿ,ಬಸವಣ್ಣನವರ ಅನುಯಾಯಿಯಾಗಿದ್ದ ಸೋಮೇಶ್ವರ ಶಿವಾಚಾರ್ಯರು ಭಕ್ತಿಯ ನೆಲೆಗಟ್ಟಿನಲ್ಲಿ ಸಮಾಜದ ಸಂಘಟನೆ ಮಾಡಿ, ಮಠಮಾನ್ಯಗಳಲ್ಲಿ ಧಾರ್ಮಿಕ ಚಿಂತನೆ ಮಾಡುವುದರೊಂದಿಗೆ ಭಕ್ತ ಸಮೂಹಕ್ಕೆ ಸನ್ಮಾರ್ಗ ತೋರಿಸುವ ಕೆಲಸ ನಿತ್ಯ ನಿರಂತರವಾಗಿ ನಡೆಸುತ್ತಾ ಬಂದಿದ್ದರು,ಇಂತಹ ಮಹಾನ್ ಶರಣರನ್ನ ಸ್ಮರಿಸುವುದು ಅತ್ಯಗತ್ಯ ಎಂದು ಈ ಸಂದರ್ಭದಲ್ಲಿ ಹೇಳಿದರು.

ಒಕ್ಕಲಗೇರ ಹಿರೇಮಠದ ಮರುಳ ಮಹಾಂತ ಶಿವಾಚಾರ್ಯರು ಮಾತನಾಡಿ,ಶರಣರಿಗೆ ಕಾಯಕವೆಂದರೆ ಅದು ಕೆಲಸವಾಗಿರಲಿಲ್ಲ ಅದೊಂದು ಅನುಭಾವದ ಜ್ಞಾನ ಜ್ಯೋತಿಯಾಗಿತ್ತು,ಅವರ ಸಾಮಾಜಿಕ ಸಿದ್ಧಾಂತಗಳಲ್ಲಿ ಭಕ್ತ ಸಮೂಹದ ಬದುಕಿಗೆ ಪೂರಕವಾಗಿರುವ ಮಾನವೀಯ ಮೌಲ್ಯಗಳು ಅಡಗಿದ್ದವು,ಅವರು ನುಡಿದಂತೆ ನಡೆದವರು ಆದ್ದರಿಂದ ಅವರ ಸನ್ಮಾರ್ಗದಲ್ಲಿ ನಾವು ನೀವೆಲ್ಲರೂ ಬದುಕಿ ಬಾಳಬೇಕು ಎಂದು ಸಲಹೆ ನೀಡಿದರು.

ಈ ಸಮಾರಂಭದ ವೇದಿಕೆಯ ಮೇಲೆ ನಾಗಠಾಣ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು,ಶ್ರೀ ಗಿರಿ ಸಂಸ್ಥಾನ ಲಕ್ಷ್ಮಪುರ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು,ಸಗರ ಹಿರೇಮಠದ ಮೃತ್ಯುಂಜಯ ಸ್ವಾಮಿಗಳು,ಹೇರೂರ ಚೆನ್ನಬಸವೇಶ್ವರ ಗದ್ದುಗೆಯ ಸೂಗಯ್ಯ ಸ್ವಾಮಿ ಹಿರೇಮಠ, ಅಕ್ಕಮಹಾದೇವಿ ಮಠದ ಮಾತೋಶ್ರೀ ಶ್ರೀ ಶರಣಮ್ಮತಾಯಿ, ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಸಿದ್ದಣ್ಣ ಸಾಹು ಆರಬೋಳ ಉಪಸಿತರಿದ್ದರು,ಗ್ರಾಮದ ಹಿರಿಯರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸನಗೌಡ ಮಾಲಿ ಪಾಟೀಲ್,ಮಹಾಂತಗೌಡ ಸುಬೇದಾರ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಿಂಗಣ್ಣ ಪಡಶೆಟ್ಟಿ,ಗುರುಲಿಂಗಪ್ಪಗೌಡ ಪೊಲೀಸ್ ಪಾಟೀಲ್,ಆನಂದ ಹುಡೇದ,ಅಮೀನ್ ರೆಡ್ಡಿ ಮಲ್ಲೆದ,

ಚಂದಣ್ಣ ಸೂಗೂರು ಸೇರಿದಂತೆ ಇತರರು ಹಾಜರಿದ್ದರು.ಶ್ರೀಕಾಂತಗೌಡ ಸುಬೇದಾರ ಸ್ವಾಗತಿಸಿದರು ಚಂದ್ರಕಲಾ ಗೂಗಲ್ ನಿರೂಪಿಸಿ ವಂದಿಸಿದರು.