ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಗ್ರಾಮ ಸಭೆ::

ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಗ್ರಾಮ ಸಭೆ::

ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಗ್ರಾಮ ಸಭೆ::

ಕಮಲನಗರ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 2025 -26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಇಲಾಖೆ ಸಿದ್ದಪಡಿಸಿದ ವೇಳಾಪಟ್ಟಿಯಂತೆ ಪೂರ್ಣಗೊಳಿಸಿ ಇಲಾಖೆಗೆ ಸಲ್ಲಿಸಬೇಕು ಎಂದು ತಾಲೂಕಾ ಪಂಚಾಯತ ಸಹಾಯ ನಿರ್ದೇಶಕರಾದ ಹಣಮಂತರಾವ ಕೌಟಗೆ ನುಡಿದರು.

ಕಮಲನಗರ ತಾಲೂಕಿನ ಸೋನಾಳ ಗ್ರಾಮ ಪಂಚಾಯತಿಯಲ್ಲಿ ಬರುವ. ಹೊರಂಡಿ ಗ್ರಾಮದಲ್ಲಿ ಬುಧವಾರ ತಾಲೂಕ ಪಂಚಾಯತ್ ನಿರ್ದೇಶಕರಾದ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಅವರ ಆದೇಶದಂತೆ ಹಮ್ಮಿಕೊಂಡ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಎಂಬ ಅಭಿಯಾನದ ಅಡಿಯಲ್ಲಿ ವಿಶೇಷ ಗ್ರಾಮಸಭೆ ನಡೆಸಲಾಯಿತು.

ಕಾಮಗಾರಿ ಬೇಡಿಕೆ ಪಡೆದು ಕೊಳುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಮಾಹಾತ್ಮ ಗಾಂಧಿಯವರ ಜಯಂತಿ ಆಚರಣೆಯ ಮಹತ್ವ ಕುರಿತು ಅಭಿಪ್ರಾಯ ಹಂಚಿಕೊಂಡರು.ಅಭಿಯಾನ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಜಾಗ್ರತಿ ಮೂಡಿಸಿ ಬೇಡಿಕೆ ಸ್ವೀಕರಿಸಿಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ಗಂಡು ಹೆಣ್ಣಿಗೆ ಸಮಾನ ಕೂಲಿ ಪ್ರತಿದಿನಕ್ಕೆ 349ರೂ ಗ್ರಾಮೀಣ ಪ್ರದೇಶದ ಜನರಿಗೆ 100 ದಿನಗಳ ಕೆಲಸ ಖಾತರಿ ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯ ಅರ್ಹತೆಗಳು ಸೇರಿದಂತೆ ನರೇಗಾ ಯೋಜನೆ ಸಂಪೂರ್ಣ ಮಾಹಿತಿ ನೀಡಿದರು. ಬಿಕೆಐಟಿ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಕೋಶದ ಅಂಗವಾಗಿ ವಿಶೇಷ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಮಾಹಿತಿಗಳ ಮಹತ್ವ ಪಡೆದು ಕೊಂಡರು.

ಗ್ರಾಮದಲ್ಲಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದರೆ ನಾವು ಅವಳನ್ನು ಪರಿಹರಿಸುತ್ತೇವೆ ಯೋಜನೆಗಳನ್ನು ಜನರಿಗಾಗಿ ಇರುವ ಯೋಜನೆಗಳನ್ನು ಜನರಿಗೆ ತಲುಪಬೇಕು ಇಂತಹ ಯೋಜನೆಗಳು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಡಿಕೆಐಟಿ ಶ್ರೀ ಶ್ರೀಕಾಂತ ಬೋಸ್ಲೆ ಬಾಬುರಾವ್ ಅತಿಥಿಗಳಾಗದ ಶಾಲಿವಾಹನ ಪ್ರದೀಪ್ ಗೋವಿಂದ್ ರಾವ್ ದೇವಿರಾಜ್ ಮಲ್ಲಿಕಾರ್ಜುನ್ ರಮಾಕಾಂತ್ ತಾ.ಪ.ನ ಸಿಬ್ಬಂದಿಗಳಾದ ಸೈಮೀಮ್ ಪೀಟರ್ ಸಂಯೋಜಕರಾದ ಸವಿತಾ ನಾಗೇಶ್ ಬಿಸಿ ಅಮರ್ ಬಿಎ ವಿರುಪಾಕ್ಷ ಅರ್ಜುನ್ ಮುಕೇಶ್ ರಾಜಕುಮಾರ್ ಸಂಗೀತ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಅಂಕುಶ್ ಶಿವರಾಜ್ ಪಿಂಟು ಸೇರಿದಂತೆ ಗ್ರಾಮಸ್ಥರು ಇದ್ದರು. ಗ್ರಾಮ ಪಂಚಾಯತ್ ಪಿ ಡಿ ಓ ಬಾಬುರಾವ್ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ.