ಎಂ.ಎ. ಕನ್ನಡ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ಜಯಶ್ರೀ ಚಿಂತಾಮಣಿ ಜೈನ್ ಡಿಸ್ಟಿಂಕ್ಷನ್

ಎಂ.ಎ. ಕನ್ನಡ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ಜಯಶ್ರೀ ಚಿಂತಾಮಣಿ ಜೈನ್ ಡಿಸ್ಟಿಂಕ್ಷನ್

ಎಂ.ಎ. ಕನ್ನಡ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ಜಯಶ್ರೀ ಚಿಂತಾಮಣಿ ಜೈನ್ ಡಿಸ್ಟಿಂಕ್ಷನ್

ಕಲಬುರಗಿ: ನಗರದ ಶರಣಬಸವೇಶ್ವರ ಆವರಣದಲ್ಲಿರುವ ಶರಣಬಸವಪ್ಪ ಅಪ್ಪ ಅನುಭವ ಮಂಟಪದಲ್ಲಿ ದಿನಾಂಕ 15-12-2025ರಂದು ಶರಣಬಸವ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಮಾಸ್ಟರ್ ಆಫ್ ಆರ್ಟ್ಸ್ (ಎಂ.ಎ) ಕನ್ನಡ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಡಿಸ್ಟಿಂಕ್ಷನ್ ಪಡೆದ ಜಯಶ್ರೀ ಚಿಂತಾಮಣಿ ಜೈನ್ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಡೀನ್ ಲಕ್ಷ್ಮಿ ಪಾಟೀಲ ಮಾಕಾ ಹಾಗೂ ಪರೀಕ್ಷಾ ಮತ್ತು ಮೌಲ್ಯಮಾಪನ ವಿಭಾಗದ ಹೊಣೆಗಾರರಾದ ಡಾ. ಎಸ್. ಎಸ್. ಹೊನ್ನಳ್ಳಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಜಯಶ್ರೀ ಅವರ ಈ ಸಾಧನೆಗೆ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದರು.