ತಾಲ್ಲೂಕ ಅಧ್ಯಕ್ಷರಾಗಿ ಮಾರುತಿ ಪೂಜಾರಿ ಅವಿರೋಧ ಆಯ್ಕೆ: ..

ತಾಲ್ಲೂಕ ಅಧ್ಯಕ್ಷರಾಗಿ ಮಾರುತಿ ಪೂಜಾರಿ ಅವಿರೋಧ ಆಯ್ಕೆ: .
ಶಹಾಬಾದ : - ತಾಲೂಕಿನ ಬೀರಲಿಂಗೇಶ್ವರ ದೇವಸ್ಥಾನ ಬೆಟ್ಟದ ಆವರಣದಲ್ಲಿ ಕುರುಬಗೊಂಡ ಸರ್ಕಾರಿ ನೌಕರರ ಸಂಘ ತಾಲೂಕ ಪದಾಧಿಕಾರಿಗಳ ಸಮಿತಿಯನ್ನು ರಚನೆ ಮಾಡಲಾಯಿತು.
ಪದಾಧಿಕಾರಿಗಳು: ಮಾರುತಿ ಬಿ. ಪೂಜಾರಿ (ಅಧ್ಯಕ್ಷರು), ಈರಣ್ಣ ಸಾಥಖೇಡ (ಗೌರವಾಧ್ಯಕ್ಷರು), ಮಹೇಶ (ಉಪಾಧ್ಯಕ್ಷರು), ಡಾ.ಈರಣ್ಣ (ಪ್ರಧಾನ ಕಾರ್ಯದರ್ಶಿ), ವಿರೇಶ ಅಗ್ಸಿಮನಿ (ಸಹಕಾರ್ಯದರ್ಶಿ), ಸುರೇಶ (ಖಜಾಂಚಿ), ಸಿದ್ಧಪ್ಪ (ಸಂಘಟನಾ ಕಾರ್ಯದರ್ಶಿ), ಮಹೇಶ ವಡೆಯರ್ (ಲೆಕ್ಕ ಪರಿಶೋಧಕರು), ಶರಣು ಪೂಜಾರಿ (ರಾಜ್ಯ ಪರಿಷತ್ ಸದಸ್ಯರು), ಮಾಳಪ್ಪ(ಕಾನೂನು ಸಲಹೆಗಾರರು), ಸೋಮನಾಥ (ಪತ್ರಿಕೆ ಕಾರ್ಯದರ್ಶಿ), ಆಯ್ಕೆ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಕುರುಬ ಗೊಂಡ ಸಂಘ ಶಹಾಬಾದ್ ಇವರ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ಕುರುಬಗೊಂಡ ಸರಕಾರಿ ನೌಕರರ ಸಂಘದ ಅಧ್ಯಕ್ಷ ಯಲಗೊಂಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ್ ಹತ್ತಿ, ತಾಲೂಕ ಕುರುಬ ಗೊಂಡ ಸಮಾಜದ ಅಧ್ಯಕ್ಷ ನಿಂಗಣ್ಣ ಪೂಜಾರಿ, ಮಾಜಿ ಅಧ್ಯಕ್ಷ ಮಲ್ಕಣ್ಣ ಮದ್ದಾ, ಜಿಲ್ಲಾ ನಿರ್ದೇಶಕರಾದ ತಿಪ್ಪಣ್ಣ ವಗ್ಗೆರ, ಅಶೋಕ್ ದೇವರವನಿ, ಸುರೇಶ ಕುಂಟನ, ಸುರೇಶ ಗಿರಣಿ, ಭೀರಪ್ಪ ಪೂಜಾರಿ, ವಿನೋದ್ ಶಂಕರವಾಡಿ, ತಾಯಪ್ಪ ಪೂಜಾರಿ, ಭೀಮಾಶಂಕರ್, ಭೀಮರಾಯ, ಹಾಗೂ ತಾಲೂಕಿನ ಕುರುಬಗೊಂಡ ಮುಖಂಡರು, ಯುವಕರು ಪಾಲ್ಗೊಂಡಿದ್ದರು.
ಶಹಾಬಾದ್ ಸುದ್ದಿ :- ನಾಗರಾಜ್ ದಂಡಾವತಿ