ಮನುವಾದಿಗಳಿಂದ ಬೌದ್ಧ ವಿಹಾರಗಳು ರಕ್ಷಿಸಿ: ಬಿ.ಎಸ್.ಐ ಜನಾಕ್ರೋಶ ಆಂದೋಲನ

ಮನುವಾದಿಗಳಿಂದ ಬೌದ್ಧ ವಿಹಾರಗಳು ರಕ್ಷಿಸಿ: ಬಿ.ಎಸ್.ಐ ಜನಾಕ್ರೋಶ ಆಂದೋಲನ
ಕಲಬುರಗಿ: ಭಾರತೀಯ ಬೌದ್ಧ ಮಹಾಸಭಾ ಉತ್ತರ ಕರ್ನಾಟಕ ರಾಜ್ಯ ಶಾಖೆ ಮಹಿಳಾ ವಿಭಾಗ ಜಿಲ್ಲಾ ಘಟಕ ಕಲಬುರ್ಗಿ, ಪೂಜ್ಯ ಬಂತೇಜಿ ನೇತೃತ್ವದಲ್ಲಿ ಮಹಾತ್ಮ ಗೌತಮ ಬುದ್ಧರಿಗೆ ಜ್ಞಾನೋದಯವಾದ ಬಿಹಾರದ ಬೌದ್ಧ ಗಯಾ ಹಾಗೂ ಬಾಬಾ ಸಾಹೇಬ್ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ತಮ್ಮ 5ಲಕ್ಷ ಅನುಯಾಯಿಗಳೊಂದಿಗೆ ದಮ್ಮ ದೀಕ್ಷೆ ಪಡೆದ ಮೂಲ ನಿವಾಸಿ ಬೌದ್ಧರಿಗೆ ಪ್ರೇರಣಾ ಸ್ಥಳವಾಗಿರುವ ಮಹಾರಾಷ್ಟ್ರದ ನಾಗಪುರ್ ಬುದ್ಧ ವಿಹಾರ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರು ಜನಿಸಿದ ಮಧ್ಯಪ್ರದೇಶದ ಮಹೌ ಈ ಪ್ರದೇಶಗಳನ್ನು ಬ್ರಾಹ್ಮಣ ಮನುವಾದಿಗಳ ಕಪಿ ಮುಷ್ಠಿಯಿಂದ ಬಿಡುಗಡೆಗೊಳಿಸಿ ಈ ಮೂರು ಸ್ಥಳಗಳು ಬುದ್ಧರ ಅನುಯಾಯಿಗಳಿಗೆ ಬಿಟ್ಟು ಕೊಡಬೇಕು ಎಂದು ಕಲ್ಬುರ್ಗಿ ನಗರದ ತಿಮ್ಮಪುರಿ ಸರ್ಕಲ್ ನಿಂದ, ಜಿಲ್ಲಾಧಿಕಾರಿ ಕಚೇರಿ ವರೆಗೆ ಜನಾಕ್ರೋಶ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಆಂದೋಲನದಲ್ಲಿ ಬುದ್ಧರಿಗೆ, ಬಾಬಾಸಾಹೇಬರಿಗೆ ಸಂಬAದಿಸಿದ ಪುಣ್ಯ ಸ್ಥಳಗಳನ್ನು ಸಂವಿಧಾನ ಬದ್ಧವಾಗಿ ಬುದ್ಧರ ಅನುಯಾಯಿಗಳಿಗೆ ನೀಡಬೇಕು, ಈ ಕುರಿತು ಸರ್ಕಾರಗಳು ಎಚ್ಚರವಹಿಸಬೇಕು ಎಂದು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಬಿಹಾರ್ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಬೌದ್ಧ ಮಹಾ ಸಭಾ ಉತ್ತರ ಕರ್ನಾಟಕ ರಾಜ್ಯ ಶಾಖೆ,ಮಹಿಳಾ ವಿಭಾದ ಅಧ್ಯಕ್ಷರಾದ ಡಾ. ಪುಟ್ಟಮಣಿ ದೇವಿದಾಸ್ ಅವರು ಮಾತನಾಡಿ ಭಾರತ ಸರ್ಕಾರ ಭೌತರಿಗೆ ಸೇರಬೇಕಾದ ಬಿಹಾರದ ಬೌದ್ಧ ಮಹಾವಿಹಾರ ಹಾಗೂ ಮಧ್ಯಪ್ರದೇಶದ ಮಹೌ ಪ್ರದೇಶ ಮತ್ತು ಮಹಾರಾಷ್ಟ್ರದ ನಾಗಪುರದ ವಿಹಾರವನ್ನು ಬೌದ್ದರಿಗೆ ಬಿಟ್ಟು ಕೊಡುವಂತೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವ ಮೂಲಕ ಪರಿಹಾರವನ್ನು ನೀಡಬೇಕಾಗಿ ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
ಅದೇ ರೀತಿ ಡಾ. ಅನಿಲ್ ತಿಂಗಳಿಯವರು ಮಾತನಾಡಿ ಇಂದು ಭಾರತೀಯ ಬಹುಜನರಿಗೆ ಅತ್ಯಂತ ಪ್ರೇರಣದಾಯಕವಾಗಿರುವಂತಹ ಬಿಹಾರ ಮಧ್ಯಪ್ರದೇಶ ಮಹಾರಾಷ್ಟ್ರದ ಬೌದ್ಧ ಕೇಂದ್ರಗಳನ್ನು ಹಿಂದಿನಿAದ ಇಂದಿನವರೆಗೆ ನಮ್ಮನಾಳುವ ಸರ್ಕಾರಗಳು ಉದ್ದೇಶಪೂರ್ವಕವಾಗಿಯೇ ಅವುಗಳ ಮೇಲೆ ಬ್ರಾಹ್ಮಣರಿಗೆ ಅತಿಕ್ರಮಣ ಮಾಡಲು ಬಿಡುತ್ತಿವೆ ಆದರೆ ಇನ್ನಾದರೂ ಕೇಂದ್ರ ಸರ್ಕಾರ ಹಾಗೂ ಮೂರು ರಾಜ್ಯದ ಸರ್ಕಾರಗಳು ಈ ಐತಿಹಾಸಿಕ ಪ್ರದೇಶಗಳ ಮೇಲೆ ಬ್ರಾಹ್ಮಣರಿಗೆ ಯಾವುದೇ ಹಕ್ಕಿಲ್ಲ ಅವರನ್ನು ಕಾನೂನಾತ್ಮಕವಾಗಿ ತೊಲಗಿಸುವ ಮೂಲಕ ಆ ಪ್ರದೇಶಗಳನ್ನು ಬುದ್ಧರ, ಬಾಬಾಸಾಹೇಬರ ಅನುಯಾಯಿಗಳಿಗೆ ಬಿಟ್ಟು ಕೊಡುವಂತಹ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರಕ್ಕೂ ಆ ಮೂರು ರಾಜ್ಯಗಳ ರಾಜ್ಯ ಸರ್ಕಾರಕ್ಕೂ ಭಗವಾನ್ ಗೌತಮ ಬುದ್ಧರ, ಬಾಬಾ ಸಾಹೇಬರ ಅನುಯಾಯಿಗಳು ತಕ್ಕ ಪಾಠ ಕಲಿಸುತ್ತಾರೆ.
ಮಾನ್ಯ ಪ್ರಧಾನ ಮಂತ್ರಿಗಳು ವಿದೇಶಗಳಿಗೆ ಹೋದಾಗ, ನಾನು ಬುದ್ಧನ ನಾಡಿನಿಂದ ಬಂದವನು ಎಂದು ನಾಟಕೀಯ ಮಾತುಗಳನ್ನು ಆಡುವ ಮೂಲಕ, ಬುದ್ಧರ ನೆಲದಲ್ಲಿಯೇ,ಬುದ್ಧರ ಪ್ರದೇಶಗಳನ್ನು ಬಾಬಾ ಸಾಹೇಬರ ಸ್ಥಳಗಳನ್ನು, ಮನುವಾದಿಗಳ ಕೈಗೆ ಕೊಟ್ಟು ಬುದ್ಧರಿಗೆ, ಬಾಬಾ ಸಾಹೇಬ ಅಪಮಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಒಂದು ಜನಾಕ್ರೋಶ ಆಂದೋಲನದಲ್ಲಿ ಡಾಕ್ಟರ್ ವಿ ಟಿ ಕಾಂಬ್ಳೆ,ಹಿರಿಯ ಹೋರಾಟ ಗಾರರಾದ ಹಣಮಂತ ಬೋಧನಕರ, ಸಂತೋಷ್ ಮೇಲ್ಮನಿ ಮಹಿಳಾ ಹೋರಾಟಗಾರ್ತಿಯಾದ ಅಶ್ವಿನಿ ಮದನ್ಕರ್, ಭವಾನಿ ಪ್ರಸಾದ, ವಿಜಯ ಕುಮಾರ್, ಶೇಖರ್, ಪರಶುರಾಮ್, ಪಂಡಿತ ಮದಗುಣಕಿ,ಗೌತಮಿ ಹಿರೋಳಿ, ಸುರೇಶ ಕಾನೇಕರ, ಸುನೀಲ ವಂಟಿ, ಸಂಧ್ಯಾ ಹಂಗರಗಿ, ನೂರಾರು ಬುದ್ಧರ ಅನುಯಾಯಿಗಳು ಭಾಗವಹಿಸಿದರು.