ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ

ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ

ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ

ಕಮಲನಗರ: ಇಲ್ಲಿನ ಶಾಸ್ತ್ರೀ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸಲಾಯಿತು.

ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಫುಲೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಕುರಿತು ವಿವರಿಸಿದರು. 

ಶೇಖ್ ಇಜಾಜ್, ಶ್ರೀದೇವಿ ಸೋನಕಾಂಬಳೆ, ದೀಪಮಾಲಾ ಸೂರ್ಯವಂಶಿ, ರಾಜಶ್ರೀ ಸಿರಗಿರೆ, ಶೀತಲ ನಂದಕುಮಾರ ಹಂಗರಗೆ, ಉಷಾ ವಿದ್ಯಾಸಾಗರ, ಅಂಜಲಿ ಸ್ವಾಮಿ, ಪಂಚಫುಲಾ, ಅಶ್ವೀನಿ ಸೇರಿದಂತೆ ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾಲ್ಗೊಂಡಿದರು. 

ದೀಕ್ಷಾ ಕಾಲೇಕರ್ ನಿರೂಪಿಸಿದರು. ಶ್ರೇಯಾ ಸಂಗಪ್ಪ ಬಿರಾದಾರ ಸ್ವಾಗತಿಸಿದರು. ಸ್ವಾತಿ ಉಮೇಶ ಮಹಾಜನ ವಂದಿಸಿದರು. 

ಮಾನಸಿ, ದೀಪಿಕಾ ಸಂತೋಷ, ಚೈತ್ರಾಲಿ ಪ್ರದೀಪ, ಸುದರ್ಶನಾ, ಮಹೇಶ್ವರಿ, ದಿವ್ಯಾ, ಕರುಣಾ ರಾಜಕುಮಾರ, ಅವನಿ ಬಚ್ಚಣ್ಣಾ, ತನಿಷ್ಕಾ ರವಿ ಇವರುಗಳು ಸಾವಿತ್ರಿಬಾಯಿ ಫುಲೆ ಅವರ ವೇಷ ಧರಿಸಿದ್ದು ನೋಡುಗರ ಗಮನ ಸೆಳೆದರು.