ತಾಲೂಕು ಆಡಳಿತ ಸೌಧ ಭೂಮಿ ಪೂಜೆ

ತಾಲೂಕು ಆಡಳಿತ ಸೌಧ ಭೂಮಿ ಪೂಜೆ
ಚಿಟಗುಪ್ಪ : ಸರ್ಕಾರದ ಮೇಲೆ ಒತ್ತಡ ಹೇರಿ, ಆಡಳಿತ ಸೌಧ ಭೂಮಿ ಪೂಜೆ ಮಾಡಲಾಗಿದೆ ಎಂದು ಕ್ಷೇತ್ರದ ಶಾಸಕ ಡಾ. ಸಿದ್ದು ಪಾಟೀಲ ರವರು ಹೇಳಿದರು.
ನಗರದಲ್ಲಿ ಕಂದಾಯ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆ ಅಡಿಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ
ಆಡಳಿತ ಸೌಧ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ತಾಲೂಕಿನ ಜನರ ಕೊಂದು ಕೊರತೆಗಳು ನಿವಾರಣಾ ಮಾಡುವ ನಿಟ್ಟಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತು ಮಾತನಾಡಿ ಆಡಳಿತ ಸೌಧ ನಿರ್ಮಾಣಕ್ಕೆ ಒತ್ತಾಯ ಮಾಡಲಾಗಿತ್ತು. ಅದರಂತೆ ಭೂಮಿ ಪೂಜೆ ಮಾಡಲಾಗುತ್ತಿದೆ.
ತಾಲೂಕು ಪಂಚಾಯತ ಕಛೇರಿ ಸಹ ಬೇಗನೆ ಆರಂಭಿಸುತ್ತೇವೆ. ಅದೇ ರೀತಿ ತಾಲೂಕು ಕ್ರೀಡಾಂಗಣ ನಿರ್ಮಾಣ ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಆದಷ್ಟು ಬೇಗನೆ ಕ್ರೀಡಾಂಗಣ ಕಾಮಗಾರಿ ಆರಂಭ ಮಾಡಲಾಗುವುದು. ರಸ್ತೆ ಕಾಮಗಾರಿ ಕೆಲಸ ಸಹ ಶೀಘ್ರದಲ್ಲೇ ಆರಂಭವಾಗಲಿದೆ.
ಅಲ್ಪಸಂಖ್ಯಾತರ ಉನ್ನತಿಗಾಗಿ ಅವರುಗಳ ಕಾಲೋನಿಗಳ ಅಭಿವೃದ್ಧಿಗಾಗಿ ಸುಮಾರು ಎಪ್ಪತ್ತೈದು ಲಕ್ಷಕ್ಕೂ ಅಧಿಕ ಅನುದಾನ ನೀಡಲಾಗಿದೆ.
ಪದವಿ ಕಾಲೇಜು ಸಭಾಂಗಣ ಮೇಲ್ದರ್ಜೆಗೆ ಏರಿಸುವ ಮೂಲಕ ಉತ್ತಮ ಗುಣಮಟ್ಟದ ಸಭಾಂಗಣ ನಿರ್ಮಾಣ ಮಾಡಲಾಗುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡದೇ, ಚಿಟಗುಪ್ಪಾ ತಾಲೂಕು ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದೇನೆ ಎಂದರು.
ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ರವರು ಮಾತನಾಡಿ ಹದಿನಾಲ್ಕು ಗ್ರಾಮ ಪಂಚಾಯತ್ ಒಳಗೊಂಡ ತಾಲೂಕವೇ ಚಿಟಗುಪ್ಪಾ ತಾಲೂಕು ಕೇಂದ್ರ ಆಗಿದೆ. ಜಗದೀಶ್ ಶೆಟ್ಟರ್ ರವರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಇದನ್ನು ತಾಲೂಕು ಕೇಂದ್ರವಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಐಪಿಎಲ್ ಆಟ ನೋಡಿ ಬೆಟ್ಟಿಂಗ್ ಯಾರು ಕಟ್ಟಬಾರದು. ಇದರಿಂದ ಅನೇಕ ಸಂಸಾರಗಳು ಹಾಳಾಗುತ್ತಿವೆ. ಇದರ ಬಗ್ಗೆ ಪೊಲೀಸ್ ಇಲಾಖೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಅಭಿವೃದ್ಧಿ ಕಾಮಗಾರಿಗಳಿಗೆ ರಾಜಕೀಯ ಮಾಡದೇ ಒಳ್ಳೆಯ ಕೆಲಸ ಮಾಡೋಣ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ರವರು ಮಾತನಾಡಿ
ಜನರ ತೆರಿಗೆ ಹಣದಿಂದ ಆಡಳಿತ ಸೌಧ ನಿರ್ಮಾಣ ಮಾಡಲಾಗುತ್ತಿದೆ. ಈ ಸೌಧ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು.
ಆದಷ್ಟು ಬೇಗನೆ ತಹಸೀಲ್ದಾರ್ ಕಛೇರಿ ನಿರ್ಮಾಣ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ದಿಲೀಪಕುಮಾರ ಬಗದಲಕರ್, ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ,
ಸುಭಾಷ್ ಕುಂಬಾರ, ಶರಣಪ್ಪಾ ಗಡಮಿ, ಪರಮೇಶ ಬಬಡಿ, ತಾಲೂಕಿನ ದಂಡಾಧಿಕಾರಿಗಳಾದ ಮಂಜುನಾಥ್ ಪಂಚಾಳ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮಿ ಬಿರಾದಾರ್, ಪುರಸಭೆ ಮುಖ್ಯಾಧಿಕಾರಿಗಳಾದ ಬಾಬಾ ಹುಸಾಮೊದ್ದೀನ್
ಸೇರಿದಂತೆ ಗಣ್ಯರು, ಪುರಸಭೆ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ - ಸಂಗಮೇಶ ಎನ್ ಜವಾದಿ.