ಶ್ರೀ ಗುರು ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಕಾಮನ್ ಎಂಟ್ರನ್ಸ್ ಟೆಸ್ಟ್

ಶ್ರೀ ಗುರು ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಕಾಮನ್ ಎಂಟ್ರನ್ಸ್ ಟೆಸ್ಟ್

ಶ್ರೀ ಗುರು ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಕಾಮನ್ ಎಂಟ್ರನ್ಸ್ ಟೆಸ್ಟ್

ಕಲಬುರಗಿ ನಗರದ ಪ್ರಸಿದ್ಧ ಶ್ರೀ ಗುರು ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಕಾಮನ್ ಎಂಟ್ರನ್ಸ್ ಟೆಸ್ಟ್ ನಡೆಸಲಾಯಿತು. ಸ್ಟೇಟ್ ಬೋರ್ಡ್ ನ 1860 ವಿದ್ಯಾರ್ಥಿಗಳು, ಸಿಬಿಎಸ್ಸಿನ 790 ವಿದ್ಯಾರ್ಥಿಗಳು ಹೀಗೆ ಒಟ್ಟು 2650 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. 

ಈ ವೇಳೆ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ನಿತೀನ್ ನಾಯ್ಕ್ ಅವರು, ಕಳೆದ 23ವರ್ಷಗಳಿಂದ ಶ್ರೀಗುರು ಪಿಯು ಕಾಲೇಜ್ ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದು, ಎಂಟ್ರೆನ್ಸ್ ಟೆಸ್ಟ್ ನಡೆಸಲಾಗಿದ್ದು, ಕಲಬುರಗಿ ಜನತೆಯಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ಅಭಿಪ್ರಾಯಪಟ್ಟರು. 

ಬಳಿಕ ಮಾತನಾಡಿದ ವಿದ್ಯಾರ್ಥಿಗಳು ಹಾಗೂ ಪಾಲಕರು, ಶ್ರೀಗುರು ಕಾಲೇಜು ಹಾಗೂ ಆಡಳಿತ ಮಂಡಳಿಯ ಕುರಿತು ಉತ್ತಮವಾಗಿ ವಿಚಾರಗಳನ್ನು ಹಂಚಿಕೊಂಡರು. 

ಈ ಸಂಧರ್ಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ನೇಹಾ ಎನ್ ನಾಯ್ಕ್, ಅಧ್ಯಕ್ಷರಾದ ನಳಿನಿ ನಾಯ್ಕ್, ಪ್ರಾಚಾರ್ಯರಾದ ವಿದ್ಯಾಸಾಗರ ಗೋಗಿ, ಡಾ. ಶಂಕರ್ ಬಾಳಿ ಹಾಗೂ ಬೋಧಕ-ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

{ನೀತಿನ್ ಎ.ನಾಯ್ಕ್ ( ಶ್ರೀಗುರು ಕಾಲೇಜಿನ ಸಂಸ್ಥೆ ಕಾರ್ಯದರ್ಶಿಗಳು)

ಉತ್ತಮ ಶಿಕ್ಷಕರು ನಮ್ಮ ಸಂಸ್ಥೆಯಲ್ಲಿ ಇರುವದರ ಜೋತೆಗೆ ನಮ್ಮ ತಂದೆ ಯವರಾದ ಪ್ರೋ.ಎ.ವಾಯ್.ನಾಯ್ಕ್ ಅವರ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ.}

{ನೇಹಾ ಎನ್.ನಾಯ್ಕ್ ( ಶ್ರೀಗುರು ಕಾಲೇಜಿನ ಸಂಸ್ಥೆ ಆಡಳಿತಾಧಿಕಾರಿಗಳು)

ಗುಣಮಟ್ಟದ ಶಿಕ್ಷಣ ಮತ್ತು ಶಿಸ್ತು ನಮ್ಮ ಕಾಲೇಜಿನ ವಿಶೇಷತೆ ಮತ್ತು ಒಳ್ಳೆ ಅಧ್ಯಾಪಕರು ಇರುವುದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ಶ್ರೀಗುರು ಕಾಲೇಜಿನ ಕಡೆ ಚಿತ್ತ ಹರಿಸುತ್ತಿದ್ದಾರೆ. }

{ಮಹೇಶ ಧರಿ (ಪಾಲಕ)

ಕಲ್ಯಾಣ ಕರ್ನಾಟಕ ಭಾಗದಲ್ಲಿ ತುಂಬಾ ಒಳೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ ಮತ್ತು ಎಲ್ಲರಿಗೂ ನೆಲುಕುವ ಕಡಿಮೆ ಪೀಸ್‌ನಲ್ಲಿ ಹೆಚ್ಚು ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು.}

{ವಿನಯ ಎಸ್.ವಾಡಿ (ವಿದ್ಯಾರ್ಥಿ)

ಒಳ್ಳೆ ವಿದ್ಯಾ ಸಂಸ್ಥೆಯಾಗಿದ್ದು ನಮ್ಮ ಅಣ್ಣನ ವಿದ್ಯಾಅಭ್ಯಾಸ್ ಇದೆ ಸಂಸ್ಥೆಯಿಂದ ಮುಗಿಸಿಕೊಂಡು ಸದ್ಯಾ ಬೆಂಗಳೂರಿನ ಪ್ರತಿಷ್ಠಿತ ಆರ್.ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಟ್ ಪಡೆದು ವಿದ್ಯಾ ಅಭ್ಯಾಸ್ ಮಾಡುತ್ತಿದ್ದಾರೆ ಹಿಗಾಗಿ ನಾನು ಈ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಕೊಂಡಿದ್ದೆನೆ.}