ಮನೆಯ ಹಕ್ಕು ಪತ್ರಗಳು ಹಂಚಲು ಸಚಿವರಿಗೆ ಮನವಿ
ಮನೆಯ ಹಕ್ಕು ಪತ್ರಗಳು ಹಂಚಲು ಸಚಿವರಿಗೆ ಮನವಿ
ಕಲಬುರಗಿ: ಕಲಬುರಗಿ ನಗರದಲ್ಲಿ ಅನೇಕ ಬಡಾವಣೆಗಳ ಮನೆಯ ಹಕ್ಕು ಪತ್ರಗಳನ್ನು ಹಂಚದೆ ಸುಳ್ಳು ಹೇಳುತ್ತಿರುವ ಅಧಿಕಾರಿಗಳಿಗೆ ಸೂಚಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಐಟಿ ಬಿಡಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕಾ ಖರ್ಗೆ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣ ಗೌಡರ ಸಾರಥ್ಯದ ವತಿಯಿಂದ ಜಿಲ್ಲೆಯ ನಗರ ಅಧ್ಯಕ್ಷರಾದ ಸುರೇಶ್ ಜಿ ಹೊಸಮನಿ ಅವರ ನೇತೃತ್ವದಲ್ಲಿ ಬಡಾವಣೆಯ ಸಾರ್ವಜನಿಕರಿಗೆ ಮನೆಯ ಹಕ್ಕು ಪತ್ರಗಳಿಗೆ ಸಂಬದಿಸಿದ ಅಧಿಕಾರಿಗಳಿಗೆ ಹಕ್ಕು ಪತ್ರಗಳನ್ನು ಮಂಜೂರು ಮಾಡಲು ಸೂಚಿಸಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಡಾವಣೆಯ ಹಿರಿಯರು ಉಪಸ್ಥಿತರಿದ್ದರು.