ನನ್ನಪ್ಪ : ಲೇಖಕಿ ಸುರಭಿ

ನನ್ನಪ್ಪ : ಲೇಖಕಿ ಸುರಭಿ
ಅಪ್ಪ ನನ್ನಪ್ಪ ,ನನ್ನ ಮುದ್ದು ಅಪ್ಪ .......
ನನ್ನ ಅಪ್ಪ ,ನನ್ನ ಅದ್ಭುತ ಶಕ್ತಿ,ನನ್ನ ಜಗತ್ತು,ನನ್ನ ಭರವಸೆಯ ಬೆಳಕು,ಸದಾ ನನ್ನ ನೋವು, ನಲಿವುಗಳಲ್ಲಿ ನನ್ನೊಂದಿಗಿದ್ದು,ಪ್ರೋತ್ಸಾಹಿಸುತ್ತಾ ನನ್ನ ಯಶಸ್ಸಿನ ಎತ್ತರಕ್ಕೆ ಕೊಂಡೊಯ್ಯಲು ಹಾತೋರಿಯುವ ನನ್ನ ಮುದ್ದು ಅಪ್ಪ *ನನ್ನ ಹೀರೋ*.
ನನಗೆ ಸಣ್ಣ ನೆಗಡಿ ಜ್ವರ ಬಂದರೂ ನನಗಿಂತ ಜಾಸ್ತಿ ನೋವು ಅನುಭವಿಸಿ ನಾನು ಮೊದಲು ಹುಷಾರಾಗಬೇಕೆಂದು ಪ್ರಯತ್ನಿಸುವ ಅಪ್ಪನ ಆ ಕಾಳಜಿ, ಕಣ್ಣೀರೂ ದೇವರಿಗೆ ಮಾಡುವ ಪೂಜೆ,ಹರಕೆ,ಅಬ್ಬಬ್ಬಾ,ಇದೆಲ್ಲವೂ ನನಗೆ ಸೋಜಿಗವೇ ಸರಿ.
ಅಮ್ಮ,ಅಜ್ಜಿ,ಅಜ್ಜ ಮೇಲೆ ಪ್ರೀತಿಯಿದ್ದರೂ ಮೊದಲಿಂದಲೂ ನನ್ನ ಅಪ್ಪನೇ ನನ್ನ ಪ್ರಥಮ ಆಧ್ಯತೆ.ನನ್ನ ಮೊದಲ ಗುರು, ಆತ್ಮೀಯ ಗೆಳೆಯ,ನನ್ನ ಅಧ್ಬುತ ವಿಮರ್ಶಕ. ಹಾಗೆಯೇ, ನನ್ನಪ್ಪಾನಿಗೂ ನಾನೇ ಬೆಸ್ಟ್ ಫ್ರೆಂಡ್.ಒಟ್ಟಿನಲ್ಲಿ ಹೇಳುವುದಾದರೆ
ನನ್ನ ಅಪ್ಪನ ಪುಟ್ಟ ಪ್ರಪಂಚ ನಾನದರೆ
ನನ್ನ ವಿಶಾಲ ಪ್ರಪಂಚ ನನಪ್ಪ
ಕೆಲವೊಮ್ಮೆ ನನ್ನ ತಪ್ಪುಗಳು,ನನ್ನ ಸೋಲು,ನನ್ನ ಮೊಂಟುತನ ,ಹಠಮಾರಿತನ ,ಸೋಮಾರಿತನ ಕಂಡಾಗ ನನ್ನ ಮೇಲೆ ಕೋಟಿಗಟ್ಟಲೆ ಪ್ರೀತಿಯಿದ್ದರೂ ಕೂಡಾ ,ತನ್ನೊಳಗೆ ಬಚ್ಚಿಟ್ಟುಕೊಂಡು,ಗಂಟುಮುಖ ಮಾಡಿಕೊಂಡು ಬಯ್ಯುತ್ತಾ ಬುದ್ಧಿ ಹೇಳುವ ನನ್ನಪ್ಪ ನನ್ನ ಶಕ್ತಿ. ಒಂಥರಾ
ಕರಗದ ಪ್ರೀತಿ , ಆತ್ಮವಿಶ್ವಾಸ ಎಂಬ ಆಸ್ತಿ ಕೊಡುವ ಅಧ್ಬುತ ಶಕ್ತಿ
ತಾನು ಕಂಡ ಕನಸೆಲ್ಲಾ ನನ್ನಲ್ಲಿ ಕಾಣುವ ಪ್ರಯತ್ನ ಮಾಡುತ್ತಾ ಅದಕ್ಕಾಗಿ ಹಗಲಿರುಳು ಶ್ರಮಪಡುತ್ತಾ ದುಡಿದು,ದಣಿದು ಸುಸ್ತಾದರೂ ನನ್ನ ಮುಂದೆ ತನ್ನ ಆಯಾಸ ತೋರಿಸಿಕೊಳ್ಳದೆ ಉತ್ಸಾಹದ ಚಿಲುಮೆಯಂತೆ ಸದಾ ಚಟುವಟಿಕೆಯಿಂದ ಇದ್ದು,ನನ್ನಲ್ಲಿ ಲವಲವಿಕೆಯನ್ನು ತುಂಬುತ್ತಾ,ನನ್ನ ಸೋಲನ್ನು ಹಿಮ್ಮೆಟ್ಟಿಸಿ ಗೆಲುವಿನ ಪಯಣದ ದಾರಿಗೆ ನಾ ಉತ್ಸಾಹದಿಂದ ಹೆಜ್ಜೆಯಿಡುವಂತೆ ಮಾಡುವ ನನ್ನ ಶಕ್ತಿ, ನನ್ನ ಜೀವಕ್ಕೆ ಜೀವವಾಗಿರುವ , ನನ್ನ ಉಸಿರಾದ ನನ್ನಪ್ಪ ನಿಗೆ ಈ ವಾಹಿನಿಯ ಮುಖಾಂತರ *ಅಪ್ಪಂದಿರ ದಿನದ ಶುಭಾಶಯಗಳನ್ನು* ಅರ್ಪಿಸುತ್ತಿರುವೆ.ತ
ಸುರಭಿ ಎಸ್
(ಸುರಭಿ ಸುರೇಶ್) ಕಾರ್ಗಲ್ ( ಉಬ್ಬೂರು) ಜೋಗ ಶಿವಮೊಗ್ಗ.