ಲಿಂಗರಾಜ ಸಿರಗಾಪೂರರಿಗೆ "ಗೌರವ ಡಾಕ್ಟರೇಟ್" ಪ್ರಶಸ್ತಿ ಪ್ರದಾನ

ಲಿಂಗರಾಜ ಸಿರಗಾಪೂರರಿಗೆ "ಗೌರವ ಡಾಕ್ಟರೇಟ್" ಪ್ರಶಸ್ತಿ ಪ್ರದಾನ
ಕಲಬುರಗಿ: ರಾಜ್ಯದ ಖ್ಯಾತ ಹೋರಾಟಗಾರ ಹಾಗೂ ಸಮಾಜ ಸೇವೆಯಲ್ಲಿ ಅಪಾರ ಕೊಡುಗೆ ನೀಡಿರುವ ಲಿಂಗರಾಜ ಸಿರಗಾಪೂರರಿಗೆ ಫರಿದಾಬಾದ್ನ ಮ್ಯಾಜಿಕ್ ಆಂಡ್ ಆರ್ಟ್ಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (Honorary Doctorate) ಪ್ರಶಸ್ತಿ ನೀಡಲಾಗಿದೆ.
ಅವರು ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸಮಾಜಮುಖಿ ಹೋರಾಟ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಈ ಸಾಧನೆಗಾಗಿ ಹರಿಯಾಣದ ಫರಿದಾಬಾದ್ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ಗೌರವ ನೀಡಲಾಗಿದೆ.
ಈ ವಿಷಯವನ್ನು ಕನ್ನಡ ಭೂಮಿ ಜಾಗೃತಿ ಸಮಿತಿದ ವಕ್ತಾರ ಆನಂದ ತೆಗನೂರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ, “ಇದು ಕಲಬುರಗಿಯ ಹೆಮ್ಮೆಗಾಗಿ ಗರಿಮೆ ತರಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.