ಸಮಾನತೆಗಾಗಿ ಉದಯಿಸಿದ ಧರ್ಮವೇ ಲಿಂಗಾಯತ ಧರ್ಮ: ಪೂಜ್ಯ ಮುದಗಲ್ ಮಹಾಂತ ಸ್ವಾಮಿಗಳು:

ಕಲಬುರಗಿ : ೨೮ ನೇ ಜುಲೈ,
ಲಿಂಗಾಯತ ಧರ್ಮವು ಜನನದಿಂದ ಯಾರನ್ನೂ ಮೇಲು ಕೀಳೆಂದು ಅಳೆಯದೆ 'ಹೊಲೆ ಗಂಡಲ್ಲದೆ ಪಿಂಡದ ನೆಲೆಗೆ ಅಶ್ರಯವಿಲ್ಲ ಎಂದು ಸಾರಿ, 'ಮರೆತವನು ಮಾನವ, ಅರಿತವನು ಶರಣ' ಎಂಬ ತತ್ವವನ್ನು ಬೋಧಿಸಿ ಮಾನವರ ಸಮಾನತೆಗಾಗಿ ಉದಯಿಸಿದ ಧರ್ಮವೇ ಲಿಂಗಾಯತ ಧರ್ಮ ಆದ್ದರಿಂದ ಯಾರು ಲಿಂಗ ಧಾರಣೆ ಮಾಡಿ ಇಷ್ಟಲಿಂಗವನ್ನು ಪೂಜೆ ಮಾಡುತ್ತಾರೆಯೊ ಅವರೇ ನಿಜವಾದ ಲಿಂಗಾಯತರು ಎಂದು ಮುದಗಲ- ತಿಮ್ಮಾಪುರ ಕಲ್ಯಾಣ ಆಶ್ರಮದ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ತಮ್ಮ ಪ್ರವಚನದಲ್ಲಿ ಅಭಿಪ್ರಾಯಿಸಿದರು.
ಕಲಬುರಗಿಯ ಜಯನಗರ ಬಡಾವಣೆಯ "ಅನುಭವ ಮಂಟಪ" ದಲ್ಲಿ ಬಸವ ಸಮಿತಿ ಆಯೋಜಿಸಿರುವ ವಚನ ಆಷಾಢ -೨೦೨೪ "ವಿಶ್ವಕ್ಕೆ ಶರಣರ ಸಂದೇಶ ಪ್ರವಚನ ಮಾಲಿಕೆಯಲ್ಲಿ ಪ್ರವಚನ ನೀಡಿ ಶ್ರೀಗಳು ಮಾತನಾಡಿದರು.
ಮುಂದುವರೆದು ಮಾತನಾಡಿದ ಪೂಜ್ಯರು, ' ಮರೆತ ಮಾನವನು ಅರಿತ ಶರಣ ನಾಗುವುದಕ್ಕೆ ಬೇಕಾಗುವ ದೀಕ್ಷಾ ಸಂಸ್ಕಾರವನ್ನು ಹಾಗೂ ಪೂಜೆಯ ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡಿರುವುದು ಲಿಂಗಾಯತ ಧರ್ಮದ ಸಮಾನತೆಯ ಸಂಕೇತವಾಗಿದೆ ಎಂದರು.
ವಿಶ್ವ ಗುರು ಬಸವಣ್ಣನವರು, ಶೋಷಿತರಿಗೆ ಮತ್ತು ಕೆಳವರ್ಗದ ಜನರಿಗೆ ಸಹಾಯ ಮಾಡಲು, ಜಾತಿ ವ್ಯವಸ್ಥೆಯ ಸರಪಳಿಯನ್ನು ಮುರಿಯಲು ಕಲ್ಯಾಣದಲ್ಲಿ ಚಳುವಳಿಯನ್ನೇ ಪ್ರಾರಂಭಿಸಿದರು.
ಬಸವಣ್ಣನವರು ಲಿಂಗತಾರತಮ್ಯ, ಜಾತಿ ವ್ಯವಸ್ಥೆ, ಸಾಮಾಜಿಕ ಅಸಮಾನತೆ, ಮೂಢನಂಬಿಕೆ ಮತ್ತು ಕಂದಾಚಾರಗಳ ವಿರುದ್ಧ ಹೋರಾಡಿ, ಮನುಕುಲದ ಒಳಿತಿಗಾಗಿ ಜೀವನದುದ್ದಕ್ಕೂ ಶ್ರಮಿಸಿದ ಮಹಾನ್ ದಾರ್ಶನಿಕ ಎಂದರು.
ಈ ಸಂದರ್ಭದಲ್ಲಿ ಪ್ರವಚನ ಪ್ರಸಾದ ದಾಸೋಹಿಗಳು, ಲೇಖಕರೂ ಆದ ಪ್ರೊ.ಯಶವಂತರಾಯ ಅಷ್ಠಗಿ ಯವರನ್ನು ರಾಜ್ಯ ಮಟ್ಟದ ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪಾ ಅವರ ಸರ್ವಾಧ್ಯಕ್ಷತೆಯಲ್ಲಿ ಶರಣಗೌಡ ಪಾಟೀಲ್ ಪಾಳಾ ಅವರ ಜೊತೆಗೂಡಿ ಸಂಚಾಲಕರಾಗಿ ಯಶಸ್ವಿಗೊಳಿಸಿದ್ದಕ್ಕೆ ವಿಶೇಷವಾಗಿ ಗೌರವಿಸಿ ಅಭಿನಂದಿಸಲಾಯಿತು
.
ಈ ಸಂದರ್ಭದಲ್ಲಿ ಜಿಲ್ಲಾ ಬಸವ ಸಮಿತಿ ಅಧ್ಯಕ್ಷರಾದ ಡಾ ವಿಲಾಸವತಿ ತಾಯಿ ಖುಬಾ, ಸಾಹಿತಿಗಳಾದ ಡಾ. ಜಯಶ್ರೀ ದಂಡೆ, ಶರಣಗೌಡ ಪಾಟೀಲ್ ಪಾಳಾ, ಚಿಂತಕ ಪ್ರೊ ಯಶವಂತರಾಯ ಅಷ್ಠಗಿ ಡಾ.ಆನಂದ ಸಿದ್ದಾಮಣಿ,ಡಾ ಕೆ. ಗಿರಿಮಲ್ಲ, ಡಾ.ವೀರಶೆಟ್ಟಿ ಪಾರಂಪಳ್ಳಿ, ಬಸವರಾಜ ಮಾಯಾಣಿ, ಕಾಶಿಬಾಯಿ ಶರಣಪ್ಪ ಹತ್ತಿ, ಅಣ್ಣಪ್ಪ ಜಾಧವ್, ಕಾರ್ಯಕ್ರಮ ಸಂಚಾಲಕ ಉದ್ದಂಡಯ್ಯ, ಜಗನ್ನಾಥ ವಾಲಿ, ವಿಶ್ವನಾಥ್ ಮಂಗಲಗಿ,ಪ್ರಭುಗೌಡ ಪಾಟೀಲ್, ಬಸವರಾಜ ಮೊರಬದ, ಅಂಬಾರಾಯ ಕೋಣೆ,ಸಂಗಶೆಟ್ಟಿ ಪಾಟೀಲ್ ಸಲಗರ, ಶಾಂತಗೌಡ ಪಾಟೀಲ್ ಸಣ್ಣೂರ, ಶಾಂತಲಿಂಗ ಪಾಟೀಲ ಕೋಳಕೂರ,
ಬಿ ಎಂ ಪಾಟೀಲ್ ಕೊಲ್ಲೂರ, ನಾಗೇಂದ್ರಪ್ಪ ಮಾಡ್ಯಾಳೆ, ಚಿತ್ರಶೇಖರ ಹಾಗರಗಿ, ಹಣಮಂತರಾವ್ ಪಾಟೀಲ್ ಕುಸನೂರ, ಎಚ್ ಎಸ್ ಬರಗಾಲಿ,ಡಾ ಗುಂಡಪ್ಪ ಸಿಂಗೆ, ಸಿದ್ದರಾಮ ಯಳವಂತಗಿ, ಅಯ್ಯಣ್ಣ ನಂದಿಸೇರಿದಂತೆ ಅನೇಕರು ಉಪಸ್ಥಿತರಿದ್ದರು.