ಪರಿಸರ ನಾಶ,ಮಾನವ ಕುಲ ಸರ್ವನಾಶ.* *ಗಿರೀಶ್ ಸಿದ್ರಾ

ಪರಿಸರ ನಾಶ,ಮಾನವ ಕುಲ ಸರ್ವನಾಶ.* *ಗಿರೀಶ್ ಸಿದ್ರಾ

ಪರಿಸರ ನಾಶ,ಮಾನವ ಕುಲ ಸರ್ವನಾಶ.* *ಗಿರೀಶ್ ಸಿದ್ರಾ

ಶಹಾಪುರ : ಮನುಷ್ಯನ ದುರಾಸೆಯಿಂದ ಪರಿಸರ ನಾಶವಾಗಿ ಮಾನವ ಕುಲಕ್ಕೆ ಬಹುದೊಡ್ಡ ಕೊಡಲಿ ಪೆಟ್ಟು ಬೀಳುತ್ತಿದೆ ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಸಿದ್ರಾ ಹೇಳಿದರು.

ತಾಲೂಕಿನ ಸಗರ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿರುವ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು,ಪರಿಸರ ಬಗ್ಗೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆ ಮಾಡಲು ಸಾಧ್ಯ ಎಂದು ನುಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದರಾಮಪ್ಪ ಮಾತನಾಡಿ,ಪರಿಸರ ನಾಶದಿಂದ ಜಾಗತಿಕ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ,ಕೂಲರ್ ಗೆ ಬಳಸುವ ನೀರನ್ನು,ಗಿಡಮರಗಳಿಗೆ ಬಳಸಿದರೆ, ಯಾವುದೇ ಎಸಿ ಕೂಲರ್ ಅವಶ್ಯಕತೆ ಇರುವುದಿಲ್ಲ ಎಂದು ಕಿವಿಮಾತು ಹೇಳಿದರು.

ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ,ಗಣೇಶ್ ಜಾಯಿ, ಸಂಗಮೇಶ್ ಕನಗೊಂಡ, ಗ್ರಾಮದ ಮುಖಂಡರಾದ ಶಿವನಗೌಡ ಗೌಡರ್,ಭೀಮಣ್ಣ ಮೊಕಾಶಿ, ಕಲೀಮ್,ಈಶ್ವರ್ ರೋಜಾ, ಚಂದ್ರಪ್ಪ ಸೂಗೂರು,ಕಾರ್ಯದರ್ಶಿ ಕಾಳಪ್ಪ ಬಡಿಗೇರ್,ಕಂಪ್ಯೂಟರ್ ಆಪರೇಟರ್ ಸಾಯಿಬಾಬಾ ಅಣಬಿ,ಬಿಲ್ ಕಲೆಕ್ಟರ್ ಅಮರಪ್ಪ ಹೇರುಂಡಿ ಸೇರಿದಂತೆ ಇನ್ನಿತರರು ಉಪಸಿತರಿದ್ದರು.