ಸಚಿವಾಲಯದ ಅಧಿಕಾರಿ/ನೌಕರ ಬಂಧುಗಳೇ.ವಿಶೇಷ ಸುದ್ದಿ

ಸಚಿವಾಲಯದ ಅಧಿಕಾರಿ/ನೌಕರ ಬಂಧುಗಳೇ.ವಿಶೇಷ ಸುದ್ದಿ
ಬೆಂಗಳೂರು : ಸಾಮಾಜಿಕ ಭದ್ರತಾ ವ್ಯವಸ್ಥೆಯ ಭಾಗವಾಗಿ ವಿವಿಧ ಬ್ಯಾಂಕುಗಳು ನೀಡುವ "ಸಂಬಳ ಪ್ಯಾಕೇಜ್" ಉಳಿತಾಯ ಖಾತೆಯನ್ನು ರಾಜ್ಯದ ಎಲ್ಲ ನೌಕರರಿಗೆ ಕಡ್ಡಾಯಗೊಳಿಸಬೇಕು, ತನ್ಮೂಲಕ 1 ಕೋಟಿ ರೂಪಾಯಿವರೆಗಿನ ಅಪಘಾತ ವಿಮೆಯ ಸೌಲಭ್ಯವನ್ನು ವಿಸ್ತರಿಸಲು ಸಂಬಂಧಪಟ್ಟ ಬ್ಯಾಂಕುಗಳಿಗೆ ಮತ್ತು DDO ಗಳಿಗೆ ಸೂಚಿಸಬೇಕೆಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ವಿಶಾಲ್ ಆರ್. ಅವರನ್ನು ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕೋರಲಾಗಿತ್ತು.
ಈ ಕುರಿತು ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ವಿವಿಧ ವಾಣಿಜ್ಯ ಬ್ಯಾಂಕುಗಳ ಪ್ರತಿನಿಧಿಗಳೊಂದಿಗೆ ಸರಣಿ ಸಭೆ ನಡೆಸಿದ ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರು "ಸಾಮಾಜಿಕ ಭದ್ರತಾ ವ್ಯವಸ್ಥೆಯ ಭಾಗವಾಗಿ ರಾಜ್ಯದ ಎಲ್ಲ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್ ಉಳಿತಾಯ ಖಾತೆಯನ್ನು ಕಡ್ಡಾಯಗೊಳಿಸಿ" ಆದೇಶ ಹೊರಡಿಸಿರುತ್ತಾರೆ. *Salary Package Savings Account ಹೊಂದಿರುವ ನೌಕರರಿಗೆ ಯಾವುದೇ ವಂತಿಗೆಯ ಕಟಾವಣೆ ಇಲ್ಲದೇ ರೂ. 1 ಕೋಟಿಯ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳು ಲಭ್ಯವಾಗುತ್ತವೆ.
ಸಚಿವಾಲಯದ ಎಲ್ಲ ನೌಕರರು ತಾವು ಹೊಂದಿರುವ ಸಂಬಳ ಖಾತೆಯನ್ನು, Salary Package Savings Account ಗೆ ಬದಲಾಯಿಸಿದಲ್ಲಿ ಸದರಿ ಸೌಲಭ್ಯಗಳು ದೊರೆಯಲಿದ್ದು, ತಮ್ಮ ತಮ್ಮ ಬ್ಯಾಂಕುಗಳಿಗೆ ಭೇಟಿ ನೀಡಿ, ಈ ಬಗ್ಗೆ ಮನವಿ ಸಲ್ಲಿಸುವ ಮೂಲಕ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಸಂದೇಶದೊಂದಿಗೆ ವಿವಿಧ ಬ್ಯಾಂಕುಗಳು Salary Package Savings Account ಗೆ ನೀಡಿರುವ ವಿವಿಧ ಸೌಲಭ್ಯಗಳ brochure ಅನ್ನು ಮಾಹಿತಿಗಾಗಿ ಹಂಚಿಕೊಳ್ಳಲಾಗಿದೆ.
ಈ ಬಗ್ಗೆ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಮತ್ತು ಕರ್ಣಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಗೆ ಶೀಘ್ರವಾಗಿ ಸ್ಪಂದಿಸಿ, Salary Package Account ಅನ್ನು ಸಾಮಾಜಿಕ ಭದ್ರತಾ ವ್ಯವಸ್ಥೆಯ ಭಾಗವಾಗಿ ಜಾರಿಗೊಳಿಸಲು ಮುತುವರ್ಜಿ ವಹಿಸಿದ ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ಡಾ. ವಿಶಾಲ್ ಆರ್. ಹಾಗೂ ಸಂಬಂಧಿತ ಸಿಬ್ಬಂದಿಗಳಿಗೆ ಸಚಿವಾಲಯ ನೌಕರರ ಸಂಘದ ಪರವಾಗಿ ಅನಂತ ಧನ್ಯವಾದಗಳು ತಿಳಿಸಿದರು.