ಗುರುಮಿಠಕಲ್ ತಾಲೂಕಿನ ಕುಂಟಿಮರಿ ಚೆಕ್ಪೋಸ್ಟ್ ನಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ

ಗುರುಮಿಠಕಲ್ ತಾಲೂಕಿನ  ಕುಂಟಿಮರಿ  ಚೆಕ್ಪೋಸ್ಟ್ ನಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ

     ಗುರುಮಿಠಕಲ್ ತಾಲೂಕಿನ ಕುಂಟಿಮರಿ ಚೆಕ್ಪೋಸ್ಟ್ ನಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ 

 ಯಾದಗಿರ/ಗುರುಮಠಕಲ್ : ಕರ್ನಾಟಕದ ಗಡಿಭಾಗ  ಗುರುಮಠಕಲ್ ತಾಲೂಕಿನ ಕುಂಟಿಮರಿ ಚೆಕ್ ಪೋಸ್ಟ್ ವೃತ್ತ ಕರ್ನಾಟಕ ಮತ್ತು ತೆಲಂಗಾಣದ ಗಡಿ ಭಾಗ ವಾಗಿದೆ ಈ ವೃತ್ತಕ್ಕೆ   ತೆಲಂಗಾಣದ ಜಿಲಾಲಪುರ್ ಚೆಕ್ ಪೋಸ್ಟ್ ಎಂದು ಕರೆಯುತ್ತಿದ್ದರು. ಇದನ್ನು  ಕರವೇ ಅಧ್ಯಕ್ಷರಾದ ಶರಣಬಸ್ಸಪ್ಪ ಎಲ್ಹೇರಿ ಅವರು ಹೋರಾಟ ಮಾಡಿ  ಕರ್ನಾಟಕದ ಗಡಿಭಾಗದ ಕುಂಟಿಮರಿ ಗ್ರಾಮದ ಚೆಕ್ ಪೋಸ್ಟ್   ಈ ವೃತ್ತದಲ್ಲಿ ಕರ್ನಾಟಕದ ಬಾವುಟವನ್ನು ಹಾರಿಸ್ಬೇಕು ಎಂದು ನಿರ್ಧಾರ ಮಾಡಿ ಬ್ರಹತ್ ಮಟ್ಟದ ಸುಮಾರು 60 ಅಡಿ ಎತ್ತರದ ಧ್ವಜ ಸ್ಥoಬ ನಿರ್ಮಾಣ ಮಾಡಿ ಬ್ರಹತ್ ಪ್ರಮಾಣದ ಬಾವುಟವನ್ನು ಹಾರಿಸಿದರು.

   ವೃತ್ತಕ್ಕೆ ಕಾರ್ನಾಟಕ ಬಾವುಟದ ಹಳದಿ ಮತ್ತು ಕೆಂಪು ಬಣ್ಣದ ತೋರಣಗಳಿಂದ ಅಲಂಕರಿಸಿದರು. ಈ ಸಂದರ್ಭದಲ್ಲಿ  ಗುರುಮಠಕಲ್ ಖಾಸಾ ಮಠದ ಪರಮ ಪುಜ್ಯ ಶ್ರೀ ಶ್ರೀ ಶ್ರೀ ಗುರು ಮುರುಘರಾಜೇಂದ್ರ ಶಾಂತವಿರ ಮಹಾ ಸ್ವಾಮಿಗಳು ಖಾಸಮಠ  ಇವರ ಅಮೃತ ಹಸ್ತದಿಂದ ಧ್ವಜಾರೋಹಣ ನೆರವೇರಿಸಿ , ಮಾತನಾಡಿದ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಅವರು ಕನ್ನಡ ನಾಡು ನುಡಿ ನೆಲ ಜಲ ಭಾಷೆ ಉಳಿಯಲು ನಿರಂತರವಾಗಿ ಕೆಲಸ ಮಾಡುತ್ತಿದ್ದಿರಿ  ನಿಮ್ಮ ಕಾರ್ಯ್ಯ ಶ್ಲಾಘನೀಯ ನಿಮ್ಮ ಹೋರಾಟ ಹೀಗೆ ಸಾಗಲಿ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಆಶೀರ್ವದಿಸಿದರು .

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಾರಿ ಲಲಿತಾ ಅನಪುರ್ ನಗರಸಭೆ ಅಧ್ಯಕ್ಷರು ಯಾದಗಿರಿ ಇವರು ಮಾತನಾಡಿ ಕರವೇ ಕುಟುಂಬ ನನ್ನ ಕುಟುಂಬ ನಾನು ಸದಾ ಕರವೇ ಜೊತೆಗೆ ಇರುತ್ತೇನೆ ಈ ಭಾಗದಲ್ಲಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅತೀ ಹೆಚ್ಚು ತೆಲುಗು ಭಾಷೆಯಲ್ಲಿ ಮಾತನಾಡುತ್ತಾರೆ ಅದನ್ನು ನಿಲ್ಲಿಸಿ ನಮ್ಮ ಭಾಷೆಯಾದ ಕನ್ನಡವನ್ನು ಹೆಚ್ಚು ಬಳಸಬೇಕು ಎಂದು ಹೇಳಿದರು.

 .ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷರಾದ ಟಿ ಎನ್ ಭೀಮುನಾಯಕ್ ಅವರು ಮಾತನಾಡಿ ಗಡಿ ಭಾಗದಲ್ಲಿ ನಮ್ಮ ಕನ್ನಡ ಬಾವುಟ ಹಾರಿಸಿರಿವುದು ಅತೀ ಹೆಚ್ಚು ಸಂತೋಷ ತಂದಿದೆ ಈ ಭಾಗದಲ್ಲಿ ತೆಲುಗು ಪ್ರಭಾವ ಹೆಚ್ಚು ಇರುವುದರಿಂದ ಕನ್ನಡ ಕಟ್ಟುವ ಕೆಲಸ ಆಗಬೇಕು ಪ್ರತಿ ಗ್ರಾಮದಲ್ಲಿ ಗ್ರಾಮ ಘಟಕ ಆಗಬೇಕು ಗುರುಮಠಕಲ್ ತಾಲೂಕಿನ ಅತೀ ಹೆಚ್ಚು ಗ್ರಾಮಗಳು ಇಂದಿಗೂ ಕೂಡ ತೆಲಗು ಭಾಷೆಯ ಪಲ್ಲಿ ಎಂದು ಉಳಿದುಕೊಂಡಿವೆ ಅದನ್ನು ಹಳ್ಳಿ ಎಂದು ಮರು ನಾಮಕರಣ ಮಾಡಬೇಕು. ತಾಲೂಕ ಮತ್ತು ಜಿಲ್ಲಾಡಳಿತ ಅತೀ ಶೀಘ್ರದಲ್ಲೇ ಮಾಡಬೇಕು ಎಂದು ಆಗ್ರಹಿಸಿದರು

 .ಗುರುಮಠಕಲ್ ತಾಲೂಕಿನ ಕರವೇ ಅಧ್ಯಕ್ಷರಾದ ಶರಣಬಸ್ಸಪ್ಪ ಎಲ್ಹೇರಿ ಮಾತನಾಡಿ ಈ ನಮ್ಮ ಗುರುಮಠಕಲ್ ತಾಲೂಕಿನ ಸುಮಾರು 60% ಹಳ್ಳಿಗಳಲ್ಲಿ ತೆಲುಗು ಪ್ರಭಾವ ಹೆಚ್ಚಿದೆ ಇಲ್ಲಿ ಕನ್ನಡವನ್ನು ಕಟ್ಟೋ ಕೆಲಸ ನಾವು ಪ್ರಾಮಾಣಿಕತೆಯಿಂದ ಮಾಡುತ್ತೇವೆ ಮತ್ತು ಇಲ್ಲಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಹೋರಾಟವನ್ನು ಮಾಡುತ್ತೇವೆ ನಮ್ಮ ಸಂಪೂರ್ಣ ಬೆಂಬಲ ಸಾಮಾನ್ಯ ಜನರಿಗೆ ಇರುತ್ತದೆ ಈ ಗಡಿ ಭಾಗದಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಅತಿ ಹೆಚ್ಚು ಕಾರ್ಯಕ್ರಮ ರೂಪಿಸಿ ಕನ್ನಡ ಭಾಷೆ ಬಗ್ಗೆ ಸ್ವಾಭಿಮಾನ ಹೆಚ್ಚಿಸಬೇಕು ಹಾಗೂ ಗಡಿನಾಡು ಪ್ರಾಧಿಕಾರ ಈ ಗಡಿ ಭಾಗಕ್ಕೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಸರಕಾರ ಈ ಗಡಿನಾಡಿನ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ್ ,ಯುವ ಘಟಕ ಜಿಲ್ಲಾ ಅಧ್ಯಕ್ಷ ವಿಶ್ವರಾಧ್ಯ ದಿಮ್ಮೆ ,ವಿದ್ಯಾರ್ಥಿ ಘಟಕ ಜಿಲ್ಲಾ ಅಧ್ಯಕ್ಷ ವಿಶ್ವರಾಜ್ ,ಸಿದ್ರಾಮರೆಡ್ಡಿ ಚಿನ್ನಾಕಾರ್, ಹನಮಂತು ಅಚ್ಚೋಲಾ, ಸಿದ್ದಲಿಂಗರೆಡ್ಡಿ ಮುನುಗಲ್ ,ಬಸರೆಡ್ಡಿ ಎಂ ಟಿ ಪಲ್ಲಿ ಕ ,ಸಾ,ಪ ಅಧ್ಯಕ್ಷರು ಗುರುಮಠಕಲ್ ತಾಲೂಕು ,ಅಬ್ದುಲ್ ರಿಯಾಜ್ ,ಗೋಪಾಲಕೃಷ್ಣ ಮೇದಾ ,ಲಿಂಗಾರೆಡ್ಡಿ ಪಾಟೀಲ್ ವಡವಟ್ ,ಜಗದೀಶ್ ನಸಲವಾಯಿ ,ಪ್ರಕಾಶ್ ಪಾಟೀಲ್ ಜೈಗ್ರಾಮ್ ,ವಿಜಯ್ ತೋರಣತಿಪ್ಪ ,ಬಸ್ಸುನಾಯಕ್ ಸೈದಾಪುರ್ ,ಸುರೇಶ್ ಬೆಳಗುಂದಿ ಉಪಸ್ಥಿತರಿದ್ದರು.

(ಗುರುಮಠಕಲ್ ತಾಲೂಕ ವರದಿಗಾರರು ಭೀಮರಾಯ ಯಲ್ಹೇರಿ)