ಛಲವಾದಿ ನಾರಾಯಣಸ್ವಾಮಿ ಹೇಳಿಕೆ ವಿವಾದ – ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಛಲವಾದಿ ನಾರಾಯಣಸ್ವಾಮಿ ಹೇಳಿಕೆ ವಿವಾದ – ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಕಲಬುರಗಿ, ಮೇ 21:ಚಿತ್ತಾಪುರ ಪ್ರವಾಸಿ ಮಂದಿರದಲ್ಲಿ ಬುಧವಾರ ಬೆಳೆಯದಿರುವ ರಾಜಕೀಯ ಪ್ರಹಸನವೊಂದು ನಡೆಯಿತು. ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಹೀಯಾಳಿಸಿದ್ದಕ್ಕೆ ರೊಚ್ಚಿಗೆದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಸುಮಾರು ಐದು ಗಂಟೆಗಳ ಕಾಲ ಪ್ರವಾಸಿ ಮಂದಿರದಲ್ಲಿ ತಡೆದು ನಿಲ್ಲಿಸಿದ ಘಟನೆ ನಡೆದಿದೆ.
ಸುದ್ದಿಗೋಷ್ಠಿಯೊಂದರಲ್ಲಿ ನಾರಾಯಣಸ್ವಾಮಿ, “ಪ್ರಿಯಾಂಕ್ ಖರ್ಗೆ ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಆನೆ ಹಿಂದೆ ನಾಯಿ ಬೊಗಳಿದಂತೆ,” ಎಂದು ವ್ಯಂಗ್ಯವಾಕ್ಯ ಪ್ರಯೋಗಿಸಿದ್ದರು. ಈ ಹೇಳಿಕೆ ಕಾಂಗ್ರೆಸ್ ಶಿಬಿರದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು.
ಅನಂತರ, ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲು ನಾರಾಯಣಸ್ವಾಮಿ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಂದರ್ಭ, ಹಲವಾರು ಕಾಂಗ್ರೆಸ್ ನಾಯಕರು ಸ್ಥಳಕ್ಕೆ ದಿಢೀರ್ ಆಗಮಿಸಿ ಘರಾಜ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅವರು ಕ್ಷಮೆ ಕೇಳಬೇಕು ಎಂದು ಪಟ್ಟುಹಿಡಿದರು. ಐಬಿ ಭಾಗಕ್ಕೆ ನುಗ್ಗುವ ಪ್ರಯತ್ನದಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಯಿತು. ಪೊಲೀಸರು ಕೂಡಲೇ ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಸಂದರ್ಭದಲ್ಲಿ ನಾರಾಯಣಸ್ವಾಮಿ ಪದ ಬಳಕೆಗೆ ವಿಷಾದ ವ್ಯಕ್ತಪಡಿಸುವ ಹೇಳಿಕೆ ನೀಡಿದರೂ, ಕಾಂಗ್ರೆಸ್ ಕಾರ್ಯಕರ್ತರು ಸಂಪೂರ್ಣ ಕ್ಷಮೆ ಕೇಳುವವರೆಗೆ ಎದ್ದುಕಳದೆ ಎಂದು ತಿಳಿದುಬಂದಿದೆ. ಕೊನೆಗೆ ಪೊಲೀಸರು ಅವರನ್ನು ಸುರಕ್ಷಿತವಾಗಿ ಐಬಿಯಿಂದ ಹೊರತೆಗೆದುಕೊಂಡರು.
ಘಟನೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕರು:
ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಸಂಜಯ ಬುಳಕರ, ಬಾಬು ಕಾಠಿ, ಶಿವರುದ್ರ ಭೀಣಿ, ಹಣಮಂತ ಸಂಕನೂರ, ಕರಣಕುಮಾರ ಅಲ್ಲೂರ, ಜಗದೀಶ ಚವ್ಹಾಣ್, ರವಿಸಾಗರ ಹೊಸ್ಮನಿ, ವಿನೋದ ಗುತ್ತೇದಾರ್, ಶ್ರೀನಿವಾಸ ಪಾಲಪ್, ರಾಮಲಿಂಗ ವಾನರ್, ಶ್ರೀಕಾಂತ ಸಿಂದೆ, ನಿಂಬಣ್ಣಗೌಡ ಇಟಗಿ, ಶೇಖ್ ಬಲ್ಲು, ಮೌನೇಶ ದಂಡಗುಂಡ, ನಾಗು ಕಲ್ಲಕ್, ಸುರೇಶ ಮೆಂಗನ್, ಪ್ರಭು ನಾಟಿಕಾರ, ವಿಠಲ್ ಕಟ್ಟಿಮನಿ, ಗಂಗು ಇಟಗಿ, ದೇವು ಯಾಬಾಳ ಮತ್ತಿತರರು ಇದ್ದರು.
ಬಿಜೆಪಿ ಮುಖಂಡಹಲ್ಲೆ ಯತ್ನದ ಆರೋಪ:
ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಡಾ ಅಂಬಾರಾಯ ಅಷ್ಟಗಿ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವಾ ಅಷ್ಟಗಿ, ಬಿಜೆಪಿ ಕಾರ್ಯಕರ್ತರಾದ ನಿಜಗುಣ ಯಲಗೋಡ ಮತ್ತು ಪ್ರೀತಮ್ ಪಾಟೀಲರ ಮೇಲೂ ಹಲ್ಲೆಯ ಯತ್ನ ನಡೆದಿದ್ದು, ಅವರನ್ನು ಪೊಲೀಸರು ತಾತ್ಕಾಲಿಕವಾಗಿ ತಹಸಿಲ್ ಕಚೇರಿಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದರು. ಆದರೆ ಅಧಿಕಾರಿಗಳು ಮಧ್ಯ ರಾತ್ರಿ 2: 30 ಗಂಟೆಗೆ ಬಿಡುಗಡೆಗೊಳಿಸಿದರು.