ಹುಟ್ಟು ಹೋರಾಟಗಾರ ಸಿರಗಾಪೂರಗೆ ಕನ್ನಡ ನುಡಿ ಸೇವಾ ರತ್ನ ಪ್ರಶಸ್ತಿ

ಹುಟ್ಟು ಹೋರಾಟಗಾರ ಸಿರಗಾಪೂರಗೆ ಕನ್ನಡ ನುಡಿ ಸೇವಾ ರತ್ನ ಪ್ರಶಸ್ತಿ

 ಹುಟ್ಟು ಹೋರಾಟಗಾರ ಸಿರಗಾಪೂರಗೆ ಕನ್ನಡ ನುಡಿ ಸೇವಾ ರತ್ನ ಪ್ರಶಸ್ತಿ 

ಕಲಬುಗಿ:  ಮಹಾದೇವಿ ನಾದ ಮಧುರ ಸಾಹಿತ್ಯ ‌ಸಾಂಸ್ಕ್ರತಿಕ ಕಲಾ ಸಂಸ್ಥೆ ಹಾಗೂ ಮೆ.ಮಹಾದೇವಿ ಎನ್.ಮುರುಡಿ ಪ್ರಕಾಶನ ಕಲಬುರಗಿ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಅಕ್ಟೋಬರ್ 26 ಶನಿವಾರರಂದು ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರ ಲಿಂಗರಾಜ ಸಿರಗಾಪೂರ ಅವರನ್ನು" ಕನ್ನಡ ನುಡಿ ಸೇವಾ ರತ್ನ ಪ್ರಶಸ್ತಿ' ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ನಿಂಗಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿರುವ ಎರಡು ಸಂಸ್ಥೆಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಿರಗಾಪೂರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಸಿರಗಾಪೂರ ಅವರು ಕಳೆದ 20 ವರ್ಷಗಳಿಂದ ನಿರಂತರ ಕನ್ನಡ ನಾಡು,ನುಡಿ,ನೆಲ,ಜಲ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ ಅಲ್ಲದೆ ಜಯನಗರದ ಶಿವಮಂದಿರ ಟ್ರಸ್ಟನ ಅಧ್ಯಕ್ಷರಾಗಿ, ಅನೇಕ ಧಾರ್ಮಿಕ , ಸಾಮಾಜಿಕ , ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಮಾಡಿದ್ದಾರೆ. ಕವಿ,ಕಲಾವಿದ ಹಾಗೂ ಸಾಹಿತಿಗಳನ್ನು ಗುರುತಿಸಿ ಗೌರವಿಸಿ ಸನ್ಮಾನಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ" ಕನ್ನಡ ನುಡಿ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.