ಬಾಲಕರಿಂದ ವೃದ್ಧರಿಗೂ ಇಷ್ಟ ರಾಷ್ಟ್ರದೇವನೇ ಜನಪ್ರಿಯ ಗಣಪ ಹೇಳಿಕೆ: ಸ್ವಾತಿ ತಾಯಿ
ಬಾಲಕರಿಂದ ವೃದ್ಧರಿಗೂ ಇಷ್ಟ ರಾಷ್ಟ್ರದೇವನೇ ಜನಪ್ರಿಯ ಗಣಪ ಹೇಳಿಕೆ: ಸ್ವಾತಿ ತಾಯಿ
ಕಮಲನಗರ :ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಸೋಮವಾರ ಮಾಹದೇವ ಮಂದಿರದಲ್ಲಿ ಶಿವಸೇನಾ ಗಣೇಶ ಮಂಡಳಿ ವತಿಯಿಂದ ಗಣೇಶ ಉತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ಭವ್ಯ ದಿವ್ಯ ಶಿ. ಭ.ಪ .ಸೌ ಸ್ವಾತಿ ತಾಯಿ ಮಾಧವರಾವ ದಾಪಕ್ಕೆಕರ್ ಇವರ ಕೀರ್ತನೆ ನಡೆಯಿತು .
ಕಮಲ್ನಗರ್: ಬಾಲಕರಿಂದ ವೃದ್ಧರಿಗೂ ಇಷ್ಟ ರಾಷ್ಟ್ರದೇವನೇ ಜನಪ್ರಿಯ ಗಣಪ ಹೇಳಿಕೆ: ಸ್ವಾತಿ ತಾಯಿ
ಎಲ್ಲಾ ಕಾಲದಲ್ಲೂ ಯಾವುದೇ ಶುಭಕಾರ್ಯಕ್ಕೂ ಮೊದಲು ಗಣಪತಿಯನ್ನು ಪ್ರಾರ್ಥಿಸುತ್ತಾರೆ ಗಣಪನ ಹಬ್ಬವನ್ನು ಮನೆಹಬ್ಬ ಆಗದೆ ಒಂದು ರಾಷ್ಟ್ರೀಯ ಹಬ್ಬವಾಗಿ ಉತ್ಸವನಾಗಿ ಆಚರಿಸಲು ಶ್ರೀ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ನೆರವಿನಿಂದ ಹಮ್ಮಿಕೊಂಡಿದ್ದು ಈಗ ಇತಿಹಾಸಿವಾಗಿ ಈ ಉತ್ಸವಗಳು ಧಾರ್ಮಿಕ ಕಾರ್ಯಗಳಿಗೆ ಅನಿ ಆಗಿರುವುದು ಸಂತೋಷವಾಗಿದೆ. ಸರ್ವಜನ ಪೂಜಿತವಾಗಿರುವುದರಿಂದ ಯುವಕರು ಶ್ರದ್ಧೆ ಭಕ್ತಿಗೆ ಧ್ಯೋತಕವಾಗಿದ್ದು , ಇದರ ಜೊತೆಗೆ ನಮ್ಮಲ್ಲಿರುವ ಅಹಂಕಾರದ ಭೂತವನ್ನು ಕೊಲೆ ಮಾಡಿ ಸುಂದರ ಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಮುಂದಾಗಬೇಕು ಎಂದು ಮಾತನಾಡಿ ಗಣಪನಿಗೆ ಕರಿಕೆ ,ಗುಲಾಲ ,ಮೋದಕ, ವಾಹನವಾಗಿವ ಇಲಿಯ ಇಷ್ಟವಾಗುವಂತೆ ಗಣಪನ ಚರಿತ್ರೆಯ ಮಹಿಮೆಯನ್ನು ತಿಳಿಸಿದರು. ಸರ್ವಜನ ಪೂಜಿತ ವಾದದಿಂದ ಗಣಪ ಬಾಲಕನು ಇಂದಿಗೂ ಬಾಲಕರಿಂದ ವೃದ್ಧರಿಗೂ ಇಷ್ಟವಾಗುವ ರಾಷ್ಟ್ರ ದೇವತೆ ಗಣಪನೆಂದು ಹೇಳಿದರು
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮುಖಂಡರು ಹಾಗೂ ಯುವಕರು ಮಹಿಳೆಯರು ವಯೋವೃದ್ಧರು ಮುದುಕರು ನೇರದ ಭಕ್ತರು ಹಾಗೂ ಭಜನೆ ಮಾಡುವ ಮಂಡಳಿಯವರು ಪಾಲ್ಗೊಂಡಿದ್ದರು
ಇದಕ್ಕೆ ಮೊದಲು ಶಿವಸೇನ ಗಣೇಶ ಮಂಡಳಿ ವತಿಯಿಂದ ಸಂತೋಷ್ ಎರೋಳೆ ದಂಪತಿಗಳಿಂದ ವಿಶೇಷ ಪೂಜೆಗಳೊಂದಿಗೆ ಭಜ್ಜಿ ರೊಟ್ಟಿ ಅನ್ನ ಸಾರು ಪ್ರಸಾದ ವ್ಯವಸ್ಥೆಯ ಕಲ್ಪಿಸಲಾಯಿತು.