ರೈಲುಗಳ ನಿಲುಗಡೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಕೆ ::

ರೈಲುಗಳ ನಿಲುಗಡೆಗೆ ಆಗ್ರಹಿಸಿ  ಮನವಿ ಪತ್ರ ಸಲ್ಲಿಕೆ ::

ರೈಲುಗಳ ನಿಲುಗಡೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಕೆ ::

ಕಮಲನಗರ: ತಾಲೂಕಿನಲ್ಲಿ ಸಂಚರಿಸುವ ಎಲ್ಲಾ ಎಕ್ಸಪ್ರೆಸ್ ರೈಲುಗಳು ನಿಲುಗಡೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಕಮಲನಗರ ತಾಲೂಕು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ದಿಲೀಪ ಮುದಾಳೆ ಅವರ ನೇತೃತ್ವದಲ್ಲಿ ಸಿಕಂದರಾಬಾದ್ ವಿಭಾಗಿಯ ವ್ಯವಸ್ಥಾಪಕ ಭಾರತೇಶಕುಮಾರ್ ಜೈನ ಅವರಿಗೆ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿರುತ್ತಾರೆ.

ನಂತರದಲ್ಲಿ ಅವರು ಮಾತನಾಡಿ ಕಮಲನಗರ ತಾಲೂಕಿನ ಸುತ್ತಮುತ್ತಲಿನ ಜನರಿಗೆ ಪ್ರಯಾಣಿಸಲು ರೈಲು ನಿಲ್ದಾಣವೇ ಅವಲಂಬಿಸಿದ್ದಾರೆ. ಬಡವರು ಕೂಲಿ ಕಾರ್ಮಿಕರು ರೈತರು ವಿಕಲಚೇತನರು ವ್ಯಾಪಾರಸ್ಥರಿಗೂ ಸುತ್ತಮುತ್ತಲಿನ ಹಳ್ಳಿಯ ಜನಗಳಿಗೆ ಪ್ರವಾಸ ಮಾಡಲು ಬಸಗಿಂತಲೂ ರೈಲ್ವೆ ಪ್ರಯಾಣವೇ ಅನುಕೂಲವಾಗಿದೆ. ಆದಕಾರಣ ತಾವುಗಳು ಕಮಲನಗರ್ ತಾಲೂಕಿನಲ್ಲಿ ಎಲ್ಲಾ ಎಕ್ಸ್ಪ್ರೆಸ್ ರೈಲುಗಳು ನಿಲ್ಲುವಂತೆ ಮಾಡಬೇಕು ಎಂದು ಮನವಿ ಮಾಡಿದರು. 

ವಿವಿಧ ಗ್ರಾಮದ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ಬರುತ್ತಾರೆ ಅವರಿಗೆ ಕುಡಿಯುವ ನೀರಿನ ಸಮಸ್ಯೆಯಾಗದೆ ನೋಡಿಕೊಳ್ಳಬೇಕು. ಎರಡನೇ ಪ್ಲಾಟ ಫಾರ್ಮ ಹೆಚ್ಚು ವಿಸ್ತರಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಪ್ರಾಯಾಣಿಕರಿಗೆ ಶೌಚಾಲಯ ಕೋಣೆಗೆ ಸದಾ ಬೀಗ ಇರುವುದರಿಂದ ಮಹಿಳೆಯರು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಗಮನಹರಿಸಿ ಸಮಸ್ಯೆಗಳಿಗೆ ಪರಿಹಾರ ಮಾಡಿಸಿಕೊಡಬೇಕು ಎಂದರು.

ಈ ಕುರಿತು ಕಳೆದ ಹತ್ತು ವರ್ಷಗಳಿಂದ ಸಂಬಂಧಿಸಿದ್ದ ಅಧಿಕಾರಿಗಳಿಗೆ ಹಲವು ಸಲ ಮನವಿ ಪತ್ರ ಸಲ್ಲಿಸಿದರು ಯಾವುದೇ ಪ್ರಯೋಜನವಾಗಲಿಲ್ಲ ಈ ಬೇಡಿಕೆ ತಾವುಗಳು ಈಡೇರಿಸಲಿಲ್ಲದೆ ಹೋದರೆ ಮುಂಬರುವ ದಿನಗಳಲ್ಲಿ ನಾವು ರೈಲ್ ರೋಕೋ ಆಂದೋಲನ ಮಾಡಲಾಗುತ್ತದೆ ಎಂದು ಎಚ್ಚರಿಕೆ ಮಾತನಾಡಿದರು 

 ಕಮಲನಗರ್ ತಾಲೂಕ ರೈತ ಸಂಘದ ಅಧ್ಯಕ್ಷರು ಪ್ರವೀಣ್ ಕುಲಕರ್ಣಿ ಕಮಲನಗರ್ ತಾಲೂಕಿನ ದಲಿತ ಪ್ಯಾಂಥರ ಅಧ್ಯಕ್ಷರು ಜ್ಞಾನೋಬಾ ಕಾಂಬಳೆ ಸಮಾಜ ಸೇವಕ ಸೇಬೀರ್ ಕುರೈಸಿ, ಶಾಲಿವನ್ ಡೋಂಗ್ರೆ ರಾಜೇನ್ ಸೂರ್ಯವಂಶಿ, ಶಿವಕುಮಾರ್ ಪಾಟೀಲ್ ಎಕ್ಸ್ಪ್ರೆಸ್ ರೈಲುಗಳು ನಿಲ್ಲುವಂತೆ ಭಾರತೇಶಕುಮಾರ ಜೈನ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮುಂಬರುವ ದಿನಗಳಲ್ಲಿ ರೈಲ್ವೆ ವಿಸ್ತಾರ ಮಾಡುವುದರ ಜೊತೆಗೆ ರೈಲು ನಿಲ್ದಾನದಲ್ಲಿರುವ ಯಾವುದೇ ಸಮಸ್ಯೆಗಳು ಎದುರು ಆಗದೆ ಪರಿಹಾರ ನೀಡುವುದರ ಜೊತೆಗೆ ಲೋಕಲ್ ಹಾಗೂ ಎಕ್ಸ ಪ್ರಸ್ ರೈಲುಗಳು ನಿಲ್ಲುವಂತೆ ಸುತ್ತಲಿನ ಜನರಿಗೆ ಅನುಕೂಲ ವಾಗುವಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಸಿಕೊಳ್ಳುತ್ತೇನೆಂದು ಸಿಕಿಂದರಾಬಾದ್ ವಿಭಾಗೀಯ ವ್ಯವಸ್ಥಾಪಕ ಭಾರತೇಶ ಕುಮಾರ್ ಜೈನ ಭರವಸೆ ನೀಡಿದರು.