ಸಚಿವರ ತವರು ಕ್ಷೇತ್ರದಲ್ಲಿ ಬಡ ಕುಟುಂಬಕ್ಕೆ ವಿಕಾಟ ಸಾಗರ ಸಿಮೆಂಟ ಕಂಪನಿಯಿಂದ ಅನ್ಯಾಯ ಬೆಸತ್ತು ಕುಟುಂಬ ಪೆಟ್ರೋಲ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ: ವಿಫಲ

ಸಚಿವರ ತವರು ಕ್ಷೇತ್ರದಲ್ಲಿ ಬಡ ಕುಟುಂಬಕ್ಕೆ ವಿಕಾಟ ಸಾಗರ ಸಿಮೆಂಟ ಕಂಪನಿಯಿಂದ ಅನ್ಯಾಯ

ಬೆಸತ್ತು ಕುಟುಂಬ ಪೆಟ್ರೋಲ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ: ವಿಫಲ 

ಸುದ್ದಿ : ಚಿಂಚೋಳಿ ತಾಲೂಕಿನ ಚಿತ್ರಸಾಲ ಕಲಬುರಗಿ ವಿಕಾಟ ಸಾಗರ ಸಿಮೆಂಟ್ ಕಂಪನಿಗೆ ಜಮೀನು ನೀಡಿ ಅನಾಥರಾದ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡದೆ ಅಲೆದಾಡುಸುತ್ತಿರುವ ಕಂಪನಿ ಆಡಳಿತಕ್ಕೆ ಬೆಸತ್ತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಸಿದ ಕುಟುಂಬ. ಚಿತ್ರಸಾಲ ಗ್ರಾಮದ ಈರಪ್ಪ ತಂದೆ ಮಲ್ಲಪ್ಪ ಬೈಕೋರ್ 8 ಎಕರೆ ಕೃಷಿ ಭೂಮಿ ವಿಕಾಟ ಸಾಗರ ಸಿಮೆಂಟ್ ಕಂಪನಿಗೆ ನೀಡಿ, ಮೃತನಾಗಿರುತ್ತಾನೆ. ಕಂಪನಿ ಕಾಯ್ದೆಗಳ ಪ್ರಕಾರ ಭೂಮಿ ನೀಡಿದ ಮಾಲೀಕರಿಗೆ ಪರಿಹಾರದ ಜೊತೆಗೆ ಕುಟುಂಬದಲ್ಲಿ ಒಬ್ಬರಿಗೆ ಖಾಯಂ ನೌಕರಿ ಒದಗಿಸಬೇಕೆಂಬ ನಿಯಮವಿದ್ದರೂ ಕಂಪನಿ ಆಡಳಿತ ಮಂಡಳಿಯವರು ಅದನ್ನು ನೀಡದೆ ಕುಟುಂಬವನ್ನು ಕಂಪನಿಗೆ ಅಲೆದಾಡಿಸಲಾಗುತ್ತಿದೆ ಎಂದು ಮೃತ ಈರಪ್ಪನ ಪತ್ನಿ ಲಕ್ಷ್ಮೀ ಬೈಕೋರ್ ಆರೋಪಿಸಿದ್ದಾರೆ. ಚಿತ್ರಸಾಲ ವಿಕಾಟ ಸಾಗರ ಕಂಪನಿ ಸೇಡಂ ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರ ಗಮನಕ್ಕೆ ತರಲಾಗಿತ್ತು. ಸಚಿವರು ಕಂಪನಿ ಆಡಳಿತ ಮಂಡಳಿಯೊಂದಿಗೆ ಮಾತನಾಡಿ, ನಿಯಮಗಳ ಪ್ರಕಾರ ಕುಟುಂಬಕ್ಕೆ ಒಂದು ಉದ್ಯೋಗ ಕಡ್ಡಾಯವಾಗಿ ನೀಡಲೇ ಬೇಕಾಗುತ್ತದೆ ಎಂದು ತಿಳಿಸಿದರು. ಆದರೆ ಕಂಪನಿ ಆಡಳಿತ ಮಂಡಳಿ ಮುಖ್ಯಸ್ಥ ಕೊದಂಡರಾಮರೆಡ್ಡಿ ಅವರು ಸಚಿವರ ಮಾತಿಗೂ ಬೆಲೆ ಕೊಡದೆ ಕಂಪನಿಗೆ ಅಲೆದಾಡಿಸುತ್ತಿರವುದರಿಂದ ಬೆಸತ್ತು 22 ವಯಸ್ಸಿನ ಮಗ ಮತ್ತು ಮಗಳೊಂದಿಗೆ ತಿಂಬಿದ ಪೆಟ್ರೋಲ್ ಡಬ್ಬಿ ಹಿಡಿದುಕೊಂಡು ಕಂಪನಿ ಎದರುಗಡೆ ಆತ್ಮಹತ್ಯೆಗೆ ಯತ್ನಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಚಿಂಚೋಳಿ ಪಿಎಸ್ಐ ಗಂಗಮ್ಮ ಅವರು ಆಗಮಿಸಿ ಪ್ರತಿಭಟನೆಕಾರರಿಂದ ಪೆಟ್ರೋಲ್ ಪಡೆದುಕೊಂಡು ಆಗುವ ಅನಾಹುತ ತಪ್ಪಿಸಿದರು. ಭೂಮಿ ಕಳೆದುಕೊಂಡು ಉದ್ಯೋಗಕ್ಕೆ ಹರಿಸಿಬಂದ ಬಡ ಕುಟುಂಬದ ಮೇಲೆ ಕಂಪನಿ ಮುಖ್ಯಸ್ಥ ಕೊದಂಡರಾಮರೆಡ್ಡಿ ಜೆಬಲ್ಲಿ ಕೈ ಹಾಕಿಕೊಂಡು ಕಾಲು ಅಲಾಡಿಸುತ್ತಾ ನೌಕರಿ ಕೊಡುವುದಿಲ್ಲವೆಂದು ಅಹಂಕಾರದ ದರ್ಪ ಮೆರೆದಿರುವ ವಿಡಿಯೋ ಹರಿದಾಡುತ್ತಿದೆ. ಸಚಿವರ ತವರು ಕ್ಷೇತ್ರದಲ್ಲಿ ಇಂತಹ ಒಂದು ಬಡ ಕುಟುಂಬಕ್ಕೆ ಅನ್ಯಾಯವಾಗುತ್ತಿದ್ದರು, ಕೃಷಿ ಭೂಮಿ ಕಳೆದುಕೊಂಡು ಉಪಜೀವನಕ್ಕಾಗಿ ಪರಿತಪ್ಪಿಸುತ್ತಿರುವ ಜೀವಗಳ ನೆರವಿಗೆ ಬಾರದೆ ಇರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿವೆ. 

ಕುಟುಂಬದ ಅನ್ಯಾಯವಾಗುತ್ತಿರುವ ಸುದ್ದಿ ತಿಳಿದು ಸಂಘಟಕ ಮಾರುತಿ ಗಂಜಗಿರಿ, ಗೋಪಾಲ ಗಾರಂಪಳ್ಳಿ, ದಸ್ತಪ್ಪ ಮರಪಳ್ಳಿ ಅವರು ಕುಟುಂಬಕ್ಕೆ ಬೆಂಬಲವಾಗಿ ನಿಂತು ನ್ಯಾಯಕ್ಕಾಗಿ ಧ್ವನಿಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.