ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರ
ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರ
ಕಲಬುರಗಿ: ಭಾರತ ಸ್ವಾತಂತ್ರ‍್ಯ ಗಳಿಸಿ 77 ವರ್ಷ ಕಳೆದರೂ ಇಂದಿಗೂ ದಲಿತರು ಹೋಟೆಲ್ಗಳಿಗೆ ದೇವಾಲಯಗಳಿಗೆ ಪ್ರವೇಶ ನಿರಾಕರಣೆ ಸಾಮಾಜಿಕ ಬಹಿಷ್ಕಾರದಂತಹ ಪ್ರಾಣ ಪಕ್ಷಿಗಳಿಗೂ ಕಡೆಯಾಗಿ ಬದುಕುವ ಸ್ಥಿತಿ ಹವಾಮಾನ ಅನುಭವಿಸುವುದು, ಬದಲಾಗಬೇಕು ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಮುಖಂಡರಲ್ಲಿ ಒಬ್ಬರಾದ ಯು ಬಸವರಾಜ್ ರವರು ಕರೆ ನೀಡಿದರು.
ಅವರು ಕಲ್ಬುರ್ಗಿಯಲ್ಲಿ ಆಗಸ್ಟ್ 17ರಂದು ಏರ್ಪಡಿಸಿದ್ದ ಕಾರ್ಯಕರ್ತರ ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು 50,000 ಎಕ್ಕರೆ ಜಮೀನುಗಳನ್ನು ಉದ್ಯಮ ಸ್ಥಾಪಿಸುವವರಿಗೆ ನೀಡುವ ಸರ್ಕಾರಗಳು ಬಡತನ ಅಸಹಾಯಕ ಸ್ಥಿತಿಯಲ್ಲಿರುವ ದಲಿತರಿಗೆ ಸ್ವಾವಲಂಬಿ ಯಾಗಿ ಬದುಕಲು ಸರ್ಕಾರದ ಬಳಿ ಇರುವ ಲಕ್ಷಾಂತರ ಎಕರೆ ಸರ್ಕಾರಿ ಜಮೀನು ಅವರ ಬದುಕು ಸಾಗಿಸಲು ಅವಶ್ಯವಿರುವ ದಲಿತರಿಗೆ ಭೂಮಿ ನೀಡಿ ಆತನ ಆರ್ಥಿಕ ಸ್ಥಿತಿ ಸ್ಥಾನ ಮಾನ ಬದಲಿಸುವ ಯೋಜನೆ ಜಾರಿಗೆ ತರುವಲ್ಲಿ ವಿಫಲವಾಗಿದ್ದು ದಲಿತರ ತಲಾದಾಯ ಗ್ರಾಮೀಣ ಭಾಗದಲ್ಲಿಕೇವಲ 100 ರೂಗಳಾಗಿದ್ದು ಸುಮಾರು 12 ಲಕ್ಷ ಕೋಟಿ ರೂಗಳ ಉದ್ಯಮಿಗಳ ಬ್ಯಾಂಕ್ ಸಾಲವನ್ನು ಮನ್ನಾ ಮಾಡುವ ಸರ್ಕಾರಗಳು ಶ್ರೀಮಂತರನ್ನು ಬೆಳೆಸುವ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದರು.
ಎಲ್ಲಾ ಮನುಷ್ಯರೂ ಸಮಾನರು ಎಂದು ಬುದ್ಧ ಬಸವ ಅಂಬೇಡ್ಕರ್ ಅವರು ಸಾರಿದರು ಭೇದಭಾವವನ್ನು ಉಳಿಸಿಕೊಂಡು, ಭೂಮಾಲಕ ಬಂಡವಾಳಶಾಹಿ ವ್ಯವಸ್ಥೆಯನ್ನು ಮುಂದುವರಿಸುವ ಹುನ್ನಾರ ಇಂದಿನ ಸರ್ಕಾರಗಳದ್ದು ಎಂದರು ದಲಿತ ಯುವಕರನ್ನು ಹಿಂದೂ ರಾಷ್ಟ್ರದ ಮೋಹದಲ್ಲಿ ಸಿಲುಕಿಸಿ ಜನತೆಯಲ್ಲಿ ಧರ್ಮದ ಅಮಲನ್ನು ಬೆಳೆಸುವ ಬಿಜೆಪಿ ಆರ್ ಎಸ್ ಎಸ್ ನ ನೀತಿಯನ್ನು ಧಿಕ್ಕರಿಸಬೇಕು ಎಲ್ಲಾ ಜಾತಿಯ ಬಡವರು ಒಗ್ಗಟ್ಟಾಗಿ ಐಕ್ಯತೆಯಿಂದ ಆರ್ಥಿಕ ,ಸಾಮಾಜಿಕ ಅಸಮಾನತೆ ವಿರುದ್ಧ ವಿಮೋಚನೆಯ ಕಡೆಗೆ ಹೆಜ್ಜೆ ಹಾಕಬೇಕೆಂದು ಕರೆ ನೀಡಿದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರಾಜಣ್ಣ ರಾಜ್ಯದಲ್ಲಿ ಡಿ ಎಚ್ ಎಸ್ ಸಂಘಟನೆ ಬೆಳೆದು ಬಂದ ದಾರಿ ಹೋರಾಟಗಳ ಕುರಿತು ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಸುಧಾಮ ಧನಿ ಅಧ್ಯಕ್ಷತೆ ವಹಿಸಿದ್ದರು ಪ್ರಾರಂಭದಲ್ಲಿ ಕಾರ್ಯದರ್ಶಿ ಪಾಂಡುರಂಗ ಮಾವಿನಕ ರ ಎಲ್ಲರನ್ನೂ ಸ್ವಾಗತಿಸಿದರು. ಖಜಾಂಚಿ ಚಂದ ಮಗೋಳ ಸಭೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪ್ರಮುಖ ಮುಖಂಡರು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.